ಬೆಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು 11 ಜನ ವೈದ್ಯರುಗಳ ನೋಂದಣಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗಾಗಿ ಹಾಜರಾಗಲು ಈಗಾಗಲೇ 03 ಬಾರಿ ಸೂಚನಾ ಪತ್ರಗಳನ್ನು ನೀಡಲಾಗಿದ್ದು ಆದರೂ ಸಹ ಈ ಮಂಡಳಿಗೆ ಯಾವುದೇ ಮೂಲ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ಹಾಗೂ ಸದರಿ ವೈದ್ಯರುಗಳು ವೈದ್ಯ ವೃತ್ತಿ ಕೈಗೊಳ್ಳಲು ಈ ಮಂಡಳಿಯಲ್ಲಿ ನೋಂದಣಿಗೊಂಡಿರುವುದಿಲ್ಲ. ಈ 11 ಜನ ವೈದ್ಯರುಗಳು ನಕಲಿ ವೈದ್ಯರೆಂದು ಕಂಡುಬಂದಿದ್ದು, ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುμï ಅಧಿಕಾರಿಗಳಿಗೆ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ. ಸದರಿ ವಿಷಯವು ಸಾರ್ವಜನಿಕರ ಆರೋಗ್ಯದ ವಿಷಯವಾಗಿರುವುದರಿಂದ ನಕಲಿ ವೈದ್ಯರ ಕುರಿತು ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲಾಗುತ್ತಿದೆ.
ನಕಲಿ ವೈದ್ಯರ ಹೆಸರು ಮತ್ತು ವಿಳಾಸ: ಅಬ್ದುಲ್ ಅಜೀಮ್ ಮುಲ್ಲಾ, ಸಯ್ಯಾದ್ ಕ್ಲಿನಿಕ್, ಮಾರ್ಕೆಟ್ ರೋಡ್, ಕುಂದಗೋಳ, ಧಾರವಾಡ ಜಿಲ್ಲೆ, ನಾಗಯ್ಯ ಮಠ, ಎಸ್.ಜಿ.ವಿ ಕ್ಲಿನಿಕ್, ಉಪ್ಪಿನ ಬೆಟಗೆರಿ, ಧಾರವಾಡ ಜಿಲ್ಲೆ, ಶೀಲವೇರಿ ದಿವಾಕರ್, ಶ್ರೀ ಸಾಯಿ ಕ್ಲಿನಿಕ್, ಕಗ್ಗಲ್ ರೋಡ್, ದಮ್ಮೂರು, ಬಳ್ಳಾರಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಲಕ್ಷ್ಮೀ ನಾರಾಯಣರೆಡ್ಡಿ, ಶ್ರೀ ಸಾಯಿ ಕ್ಲಿನಿಕ್, ಬ್ಯಾಂಕ್ ರೋಡ್, ಹೆಚ್. ಹೊಸಹಳ್ಳಿ, ಸಿರಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ, ರಾಜಶೇಖರ ತೊರಗಲ್ಲು, ತೊರಗಲ್ಲು ಕ್ಲಿನಿಕ್, ಹೆಬ್ಬಾಳ, ನವಲಗುಂದ ತಾಲ್ಲೂಕ್ ಧಾರವಾಡ ಜಿಲ್ಲೆ, ರಾಮಾಂಜನೇಯ ಲಿಖಿತ್ರಾಮ್ ಕ್ಲಿನಿಕ್, ದಾಸುದಿ, ಚಿಕ್ಕನಾಯಕನ ಹಳ್ಳಿ ತಾಲೂಕು, ತುಮಕೂರು ಜಿಲ್ಲೆ, ಎಂ.ವಿ.ನಾಗರಾಜು, ಚಳ್ಳಕೆರೆ ರಸ್ತೆ, ಹಿರಿಯೂರ್ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಸೋಮೇಶ್ವರ ಶೇಖಪ್ಪ ಕದಡಿ, ಸೋಮೇಶ್ವರ ಕ್ಲಿನಿಕ್, ಮಾಗಡಿ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ, ಚೌಡಪ್ಪ, ಭಗವತಿ ಕ್ಲಿನಿಕ್, ಪಟ್ಟನಾಯಕನಹಳ್ಳಿ, ಸಿರಾ ತಾಲೂಕು, ತುಮಕೂರು ಜಿಲ್ಲೆ, ಯೋಗಾನಂದ, ಹಗಲವಾಡಿ, ಅಲ್ಬಗಹಟ್ಟಿ ಪೋಸ್ಟ್, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ, ದಿನೇಶ್ ಕೆ.ಎಸ್. ಮಂಜುನಾಥ ಕ್ಲಿನಿಕ್, ಕಸ್ತೂರು, ತುಮಕೂರು ಜಿಲ್ಲೆ ಇವರುಗಳನ್ನು ನಕಲಿ ವೈದ್ಯರೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಷ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.