ಹುಬ್ಬಳ್ಳಿ / ಬೆಂಗಳೂರು: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ, ಚಾಲಕ (ಪಜಾ-ಹಿಂಬಾಕಿ) ಮತ್ತು ಚಾಲಕ-ಕಂ-ನಿರ್ವಾಹಕ (ಪಜಾ-ಹಿಂಬಾಕಿ) ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ: 14-06-2025 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಲಾಗಿರುತ್ತದೆ.1000 ಚಾಲಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮೋದಿಸಲಾಗಿರುತ್ತದೆ. ಅದರಂತೆ, 2025ರ ಜೂನ್ 14 ರಂದು ಪ್ರಕಟಿಸಲಾದ ಆಯ್ಕೆಪಟ್ಟಿಯನ್ವಯ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳನ್ನೊಳಗೊಂಡಂತೆ ಒಟ್ಟು 2000 ಹುದ್ದೆಗಳ ಪರಿಷ್ಕøತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹಾಗೂ ಪ್ರವರ್ಗವಾರು ಹಾಗೂ ಶೇಕಡಾವಾರು (Cut-off percentage) ವಿವರಗಳನ್ನು ಸಂಸ್ಥೆಯ ಕೇಂದ್ರ ಕಛೇರಿ, ಗೋಕುಲ ರಸ್ತೆ, ಹುಬ್ಬಳ್ಳಿಯ ಸೂಚನಾ ಫಲಕದಲ್ಲಿ ಮತ್ತು ಸಂಸ್ಥೆಯ ವೆಬ್‍ಸೈಟ್ ವಿಳಾಸ www.nwkrtc.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಪರಿಷ್ಕøತ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, 2026 ರ ಜನವರಿ 02 ರ ಒಳಗಾಗಿ ಕೇಂದ್ರ ಕಛೇರಿ, ಗೋಕುಲ ರಸ್ತೆ, ಹುಬ್ಬಳ್ಳಿ ಇಲ್ಲಿ ಖುದ್ದಾಗಿ ಅಥವಾ ಆನ್ ಲೈನ್ ಮುಖಾಂತರ ಸಲ್ಲಿಸಬಹುದು. 2026 ರ ಜನವರಿ 02 ರ ಸಂಜೆ 05:30ರ ನಂತರ ಸ್ವೀಕರಿಸಲಾಗುವ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.