ಗುರುವಾಯನಕೆರೆ 24.12.2025: 15 ವರ್ಷದ ಹಿಂದೆ ನಾನು ಇಲ್ಲಿಗೆ ಡಿ.ಸಿ ಮನ್ನಾಭೂಮಿಯ ಹೋರಾಟಕ್ಕೆ ಬಂದಿದ್ದೆ, ಈಗಲೂ ಈ ಸಮಸ್ಯೆ ಇರುವುದು ಆಶ್ಚರ್ಯ.ಇದನ್ನು ತಕ್ಷಣ ಎಸ್.ಸಿ.ಗಳಿಗೆ ಕೊಡಬೇಕು. ಸರಕಾರಿ ಭೂಮಿ ಲಭ್ಯ ಇಲ್ಲ ಎಂದು ಕAದಾಯ ಇಲಾಖೆ ಹೇಳುವುದು ಶುದ್ಧ ಸುಳ್ಳು. ಸಮಗ್ರ ಸರ್ವೆ ಮಾಡಿ ಈ ಭೂಮಿಯಲ್ಲಿ 50% ಎಸ್.ಸಿ ಮತ್ತು ಎಸ್.ಟಿ ಗಳಿಗೆ ಸರಕಾರ ತಕ್ಷಣ ಕೊಡಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಎಂದು ಕರೆಸಿಕೊಳ್ಳುವ ವೀರೇಂದ್ರ ಹೆಗ್ಗಡೆಯವರು ದಲಿತರ ಭೂಕಬಳಿಕೆ ಮಾಡಿದ್ದನ್ನು, ಸರಕಾರಿ ಭೂಮಿ ಕಬಳಿಸಿದ್ದನ್ನು ದೌರ್ಜನ್ಯ ಮಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ. ಅಶೋಕನಗರ ಕಾಲೋನಿಯ ದಲಿತರಿಗೆ ತಕ್ಷಣ ಭೂಹಕ್ಕು ಕೊಟ್ಟು ಮನೆಕಟ್ಟಿಸಿಕೊಡದಿದ್ರೆ ನಾವು ಉಗ್ರ ಹೋರಾಟ ಮಾಡಬೇಕಾಗ್ತದೆ ಎಂದು ಎಚ್ಚರಿಸಿದರು.
ಹೆಗ್ಗಡೆಯವರು ತನ್ನ ಶಿಕ್ಷಣ ಸಂಸ್ಥೆಗಳಲ್ಲಿ 20% ಎಸ್.ಸಿ ಎಸ್.ಟಿ ಸಿಬ್ಬಂಧಿಗಳನ್ನು ಕಾನೂನು ಪ್ರಕಾರ ಮಾಡದಿರುವುದು ಗಂಭೀರ ಅಪರಾಧವಾಗಿದ್ದು ಈ ಬಗ್ಗೆ ಉನ್ನತ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಘೋಷಿಸಿದರು. ಅವರು ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಬೆಳ್ತಂಗಡಿ ತಾಲೂಕು ಮಟ್ಟದ ಹಕ್ಕೊತ್ತಾಯ ಜಾಥಾದ ಬಳಿಕ ಸಿವಿಸಿ ಹಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತಾಡುತ್ತಿದ್ದರು. ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಯವರು ಮಾತನಾಡುತ್ತ ದಲಿತ ಸಮಸ್ಯೆಯು ಭೂಮಿಯ ಪ್ರಶ್ನೆ ಮತ್ತು ಧರ್ಮ- ಸಂಸ್ಕÈತಿಗಳ ಪ್ರಶ್ನೆಗಳೊಡನೆ ನಿಕಟವಾಗಿ ಬೆರೆತುಹೋಗಿರುವ ಸಮಸ್ಯೆಯಾಗಿದೆ ಎಂದರು.
ದಲಿತರು ಸ್ವಾಭಿಮಾನದ ಬದುಕು ಬದುಕಬೇಕಾದರೆ ದಲಿತರು ತಮ್ಮದೇ ಆದ ಭೂಮಿಯನ್ನು ಹೊಂದಿರಬೇಕಾದುದು ಅಗತ್ಯ. ದಲಿತರನ್ನು ಸ್ವಾಭಿಮಾನಿಗಳನ್ನಾಗಿಸುವುದು ದೇಶದ-ಸಮಾಜದ ಕರ್ತವ್ಯವಾಗಿದೆ. ಇಲ್ಲದಿದ್ದರೆ ದೇಶದ ಸ್ವಾಭಿಮಾನಕ್ಕೇ ಧಕ್ಕೆಯಾಗುತ್ತದೆ. ದೇಶವೇ ಅಭಿಮಾನ ಶೂನ್ಯವಾಗಬೇಕೇ ಎಂದು ಪ್ರಶ್ನಿಸಿದರು. ವiಹಾತ್ಮಾ ಗಾಂಧೀಜಿಯವರನ್ನು 1931ರಲ್ಲಿ ಮೊದಲ ಬಾರಿಗೆ ಭೇಟಿಯಾದ ಡಾ|| ಅಂಬೇಡ್ಕರ್ಎಂ‘’Gandhiji I have no homeland'' ದು ಮಾರ್ಮಿಕವಾಗಿ ಹೇಳಿದ್ದರು. ಈ ಮಾತಿಗೆ ತುಂಬಾ ಅರ್ಥಗಳಿವೆ. ಈ ಮಾತಿನ ಪ್ರಭಾವದಿಂದಲೇ ಎಂಬAತೆ, 1934ರಲ್ಲಿ ಬಿಹಾರದಲ್ಲಿ ಭೂಕಂಪವಾಗಿ ಅಪಾರವಾದ ಸಾವು ನೋವುಗಳು ಸಂಭವಿಸಿದಾಗ ''ಅಸ್ಪಶ್ಯತೆಯನ್ನು ಆಚರಿಸುತ್ತಿರುವ ನಮ್ಮ ಪಾಪಕ್ಕೆ ಇದು ದೇವರು ಕೊಟ್ಟ ಶಿಕ್ಷೆಯಾಗಿದೆ'' ಎಂದು ಗಾಂಧೀಜಿ ಉದ್ಗರಿಸಿದ್ದರು.
ಅಂದರೆ ತನ್ನದೇ ಭೂಮಿಯಲ್ಲಿ ಬದುಕಿ ಬಾಳುವ ಹಕ್ಕನ್ನು ದಲಿತರಿಗೆ ಕೊಡದಿದ್ದರೆ ಅದು ಕ್ರಾಂತಿಯ ಭೂಕಂಪಕ್ಕೆ ಕಾರಣವಾದೀತು ಎಂದು ನಾವು ಗ್ರಹಿಸಬೇಕಾಗಿದೆ ಎಂದರು. ನಮ್ಮ ಸಮಾಜದಲ್ಲಿ ಭೂತಗಳ ದೈವಗಳ ದೇವರುಗಳ ಹೆಸರಿನಲ್ಲಿ 'ಭೂಮಿ' ಇದೆ. ದೇವರ ಹೆಸರಿನಲ್ಲಿರಬೇಕಾದ ಭೂಮಿಯನ್ನು ತಮ್ಮ ಹೆಸರಿಗೇ ಮಾಡಿಕೊಳ್ಳುವ ದೇವಮಾನವರೂ ಇದ್ದಾರೆ. ಇಂಥವರು ಇನ್ನು ದಲಿತರ ಭೂಮಿಯನ್ನು ಬಿಟ್ಟಾರೆಯೇ? ಸರಕಾರವು ಶ್ರೀಮಂತರ, ಪ್ರಬಲರ, ಭೂಮಾಲೀಕರ ಪರವಾದ ಮಾನಸಿಕತೆಯನ್ನು ಹೊಂದಿದೆ. ಇದನ್ನು ದಲಿತರು ಅರ್ಥಮಾಡಿಕೊಳ್ಳಬೇಕು ಎಂದರು. ನೂರಾರು ಎಕರೆ ಭೂಮಿಯ ಮಾಲಕರು, ತಾನು ಭೂರಹಿತನೆಂದು ಹೇಳಿ ಸರಕಾರದಿಂದ ಭೂಮಿಯನ್ನು ದಕ್ಕಿಸಿಕೊಳ್ಳುವಲ್ಲಿ ನಿಜವಾದ ಭೂರಹಿತನಿಗೆ ಹೇಗಾಗಬೇಡ? ಈ ನೋವನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳದೆ ಹೋದರೆ ಅವರೆಂಥ ಪ್ರತಿನಿಧಿಗಳು? ಎಂದು ಪ್ರಶ್ನಿಸಿದರು. ಆರoಭದಲ್ಲಿ ಸಹಚಂಚಾಲಕ ಸುಕೇಶ್ ಮಾಲಾಡಿ ಸ್ವಾಗತಿಸಿದರು. ಸಮಿತಿಯ ಸಂಚಾಲಕ ಎಂ.ಬಿ ಕರಿಯ ಮತ್ತು ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ನಾಂiÀiಕ್ ಸಮಾವೇಶದ ಉದ್ದೇಶ ವಿವರಿಸುತ್ತಾ ಬೆಳ್ತಂಗಡಿಯಲ್ಲಿ ಪರಿಶಿಷ್ಠ ಜಾತಿಯವರು ಹೊಂದಿರುವ ಕೃಷಿ ಭೂಮಿ ಸರಾಸರಿ 40-50 ಸೆಂಟ್ಸ್ಗಿAತ ಕಡಿಮೆ ಇದರಲ್ಲಿ 5 ಸೆಂಟ್ಸ್ನೊಳಗೆ 47% ಇದ್ದಾರೆ. ಇವರ ಅಭಿವೃದ್ಧಿಯಾಗಬೇಕಾದರೆ ಕನಿಷ್ಠ ಒಂದು ಕಾಲು ಎಕ್ರೆ ಭೂಮಿಯನ್ನಾದರೂ ಕೊಡಬೇಕು. ಮಾಹಿತಿ ಹಕ್ಕಿನಲ್ಲಿ ಸಿಕ್ಕದ ವಿವರಗಳ ಪ್ರಕಾರ ಸುಮಾರು 7 ಸಾವಿರ ಎಕ್ರೆ ಸರಕಾರಿ ಭೂಮಿ ಬೆಳ್ತಂಗಡಿ ತಾಲೂಕಿನಲ್ಲಿ ಲಭ್ಯ ಇದೆ. ಸರಕಾರಿ ಸ್ಥಳದ ಸರ್ವೆ ಮಾಡಲು ಸಚಿವರುಗಳು ಟಿಪ್ಪಣಿ ಮಾಡಿದ್ರೂ ಅಧಿಕಾರಿಗಳು ಸರ್ವೆ ಮಾಡುವುದಿಲ್ಲ. ಧರ್ಮಸ್ಥಳ ಗ್ರಾಮದಲ್ಲಿಯೇ 400-500 ಎಕ್ರೆ ಸರಕಾರಿ ಸ್ಥಳ ಇದೆ. ಇದಕ್ಕೆ ದಾಖಲೆ ಇದೆ. ಇದರಲ್ಲಿ ದೊಡ್ಡ ಭೂಮಾಲಕರ ಆಕ್ರಮಣವೂ ಇದೆ. ಅರಣ್ಯ ಭೂಮಿಯಲ್ಲಿಯೂ ಅತಿಕ್ರಮಣ ಆಗಿದೆ. ಆದರೆ ಇವರ ಹೆಸರು ಕಂದಾಯ ಇಲಾಖೆಯ ಅತಿಕ್ರಮಣದಾರರ ಪಟ್ಟಿಯಲ್ಲಿ ಇಲ್ಲ! ಇಲಾಖಾಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಡಿ.ಎಸ್.ಎಸ್(ಅಂಬೇಡ್ಕರ್ ವಾದ)ದ ತಾಲೂಕು ಸಂಚಾಲಕ ಆರ್.ರಮೇಶ್ ಮತ್ತು ಸಿಪಿಐ(ಎಮ್) ಮುಖಂಡ ಬಿ.ಎಮ್ ಭಟ್ ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಅಂಬೇಡ್ಕರ್ ಸೇವಾ ಸಮಿತಿ, ಕೋಲಾರದ ಅಧ್ಯಕ್ಷ ಸಂದೇಶ್ ಕೆ.ಎಂ, ವಿಚಾರವಾದಿ ಸಂಘಟನೆಗಳ ರಾಷ್ರೀಯ ಒಕ್ಕೂಟದ ಅಧ್ಯಕ್ಷ ಡಾ| ನರೇಂದ್ರ ನಾಯಕ್ ಸಮಾವೇಶಕ್ಕೆ ತಮಗೆ ಬರಲಾಗದ್ದಕ್ಕೆ ವಿಷಾಧಿಸುತ್ತಾ, ಹಕ್ಕೊತ್ತಾಯಗಳಿಗೆ ಸ್ಪಂದಿಸುವುದಾಗಿಯೂ, ಸರಕಾರಿ ಮಟ್ಟದಲ್ಲಿ ಒತ್ತಡ ಹೇರುವುದಾಗಿಯೂ, ಧರ್ಮಸ್ಥಳದ ನೊಂದ ದಲಿತರಿಗೆ ನ್ಯಾಯಕೊಡಿಸಲು ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದೂ ತಿಳಿಸಿರುವುದಾಗಿ ಸೋಮನಾಥ ನಾಯಕ್ ಪ್ರಕಟಿಸಿದರು. ಶಾಸಕ ಹರೀಶ್ ಪೂಂಜಾ, ಸಂಸದ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ ಪಕ್ಷದ ರಕ್ಷಿತ್ ಶಿವರಾಮ್ ಬರುವುದಾಗಿ ಒಪ್ಪಿದ್ದರೂ ಬಾರದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ದಲಿತರ ಬಗ್ಗೆ ಇವರಿಗಿರುವ ಕಾಳಜಿ ಇದನ್ನು ತೋರಿಸುತ್ತದೆ. ಮುಟ್ಟಾಳೆ ವರ್ಸಸ್ ಮುಂಡಾಸು ಹೋರಾಟದಲ್ಲಿ ಇವರು ಮುಂಡಾಸು ಪರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರಿನ ರಾಜ್ಯಾಧ್ಯಕ್ಷ ರಾಘವೇಂದ್ರಾಚಾರ್ ಉಪಸ್ಥಿತರಿದ್ದರು. ನಾಗರಿಕ ಸೇವಾ ಟ್ರಸ್ಟ್ನ ಸಲಹಾ ಸಮಿತಿ ಸದಸ್ಯೆ ಸಿ.ಕೆ ಚಂದ್ರಕಲಾ ಹಕ್ಕೊತ್ತಾಯಗಳನ್ನು ಓದಿದರು, ಸಹಸಂಚಾಲಕ ನಾರಾಯಣ ಕಿಲಂಗೋಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಹಚಂಚಾಲಕ ಬಾಬು.ಎ ವಂದನಾರ್ಪಣೆ ಮಾಡಿದರು.