63ನೇ ಕೆವಿಎಸ್ ಸಂಸ್ಥಾಪನಾ ದಿನಾಚರಣೆ

varthajala
0

 ಬೆಂಗಳೂರು: ಕೇಂದ್ರೀಯ ವಿದ್ಯಾಲಯ ಸಂಘಟನೆಯ 63ನೇ ಸಂಸ್ಥಾಪನಾ ದಿನವನ್ನು ಬೆಂಗಳೂರಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಎಂಇಜಿ & ಸೆಂಟರ್‍ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.ಬೆಂಗಳೂರಿನ ಕೆವಿಎಸ್ ಆರ್‍ಒ ಉಪ ಆಯುಕ್ತರಾದ ಶೇಕ್ ತಾಜುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಎನ್‍ಸಿಸಿ ಮತ್ತು ಬ್ಯಾಂಡ್ ತಂಡದಿಂದ ಗಾರ್ಡ್ ಆಫ್ ಹಾನರ್ ನಡೆಯಿತು. ನಂತರ ಕೆವಿಎಸ್ ಧ್ವಜಾರೋಹಣ ಮತ್ತು ವಿದ್ಯಾಲಯ ಗೀತೆ - ಭಾರತ್ ಕಾ ಸ್ವರ್ಣಿಮ್ ಗೌರವ್‍ನ ಭಾವಪೂರ್ಣ ಪ್ರದರ್ಶನ ನಡೆಯಿತು. ಸಂಸ್ಥಾಪನಾ ದಿನದ ಪ್ರತಿಜ್ಞೆ, ಬಲವಟಿಕಾ ವಿದ್ಯಾರ್ಥಿಗಳಿಂದ ರೋಮಾಂಚಕ ಸ್ವಾಗತ ನೃತ್ಯ, ಅತುತ್ತಮ ಭಾಷಣ ಸ್ಪರ್ಧೆಗಳು ಮತ್ತು ಕೆವಿಎಸ್ ಕುರಿತು ಕಿರುಚಿತ್ರ ಮತ್ತು ಭಾರತದ ಸಾಂಸ್ಕøತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಜಾನಪದ ಸಮ್ಮಿಳನ ನೃತ್ಯದಂತಹ ಆಕರ್ಷಕ ಪ್ರದರ್ಶನಗಳನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಕೆವಿಎಸ್ ಆರ್‍ಒ ಉಪ ಆಯುಕ್ತರಾದ ಶೇಕ್ ತಾಜುದ್ದೀನ್ ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಆಚರಣೆಯು ಶ್ರೇಷ್ಠತೆ ಮತ್ತು ಪರಂಪರೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರೀಯ ವಿದ್ಯಾಲಯಗಳ ಮೌಲ್ಯಗಳನ್ನು ಎತ್ತಿಹಿಡಿಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಎಂದರು.
ಶಾಲಾ ನಾಯಕಿ ಶ್ರೀಮತಿ ಅಂಶಿಕಾ ಚೌಧರಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

Post a Comment

0Comments

Post a Comment (0)