90 ಸರ್ಕಾರಿ ಐ.ಟಿ.ಐ. ಗಳಿಗೆ ಯಂತ್ರೋಪಕರಣ ಒದಗಿಸಲು 50 ಕೋಟಿ ರೂ. ಅನುದಾನ - ಸಚಿವ ಡಾ. ಶರಣಪ್ರಕಾಶ್ ಪಾಟೀಲ

varthajala
0
ಬೆಳಗಾವಿ / ಬೆಂಗಳೂರು :-ರಾಜ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪರಿಷ್ಕøತ ಪಠ್ಯಕ್ರಮದ ಅನುಸಾರ ಯಂತ್ರೋಪಕರಣಗಳನ್ನು ಖರೀದಿಸಿ ಒದಗಿಸಲು 50 ಕೋಟಿ ರೂ. ಅನುದಾನ ಒದಗಿಸಿದ್ದು, ಈಗಾಗಲೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.




ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ, ಸಿರಗುಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಐಟಿಐ ಅನ್ನು 2014-15 ರಲ್ಲಿ ಮಂಜೂರು ಮಾಡಿದ್ದು, ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗಿರುವ ಉಪಕರಣಗಳು ಲಭ್ಯವಿಲ್ಲದೆ ತೊಂದರೆಯಾಗಿದೆ ಎಂಬುದಾಗಿ ಸಿರಗುಪ್ಪ ಶಾಸಕ ನಾಗರಾಜ್ ಬಿ.ಎಂ. ಅವರ ಚುಕ್ಕೆ ಗುರುತಿನ ಪ್ರಶ್ನೆಯಡಿ ಸರ್ಕಾರದ ಗಮನ ಸೆಳೆದ ಸಮಯದಲ್ಲಿ ಉತ್ತರಿಸಿದ ಸಚಿವರು, ರಾಜ್ಯದ 90 ಸರ್ಕಾರಿ ಐಟಿಐ ಗಳಲ್ಲಿ ಡಿ.ಜಿ.ಟಿ. ನವದೆಹಲಿ ಅವರ ಪರಿಷ್ಕøತ ಪಠ್ಯಕ್ರಮದ ಅನುಸಾರ ಅಗತ್ಯವಿರುವ ಯಂತ್ರೋಪಕರಣಗಳನ್ನು ಒದಗಿಸಲು ಈಗಾಗಲೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಸಿರಗುಪ್ಪದ ಸರ್ಕಾರಿ ಐಟಿಐ ಸಂಸ್ಥೆಗೂ ಕೂಡ ಹೊಸದಾಗಿ ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಿ, ಒದಗಿಸಲಾಗುವುದು ಎಂದು ಹೇಳಿದರು.

Post a Comment

0Comments

Post a Comment (0)