ಶರ್ವಾಣಿ ನಾಟ್ಯ ಕಲಾಕೂಟ- ದಶಮಾನೋತ್ಸವ ವಿದುಷಿ

varthajala
0

 ಕುಸುಮ ಎ. ನೃತ್ಯಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಬದ್ಧತೆಯ ನೃತ್ಯ ಕಲಾವಿದೆ ಮತ್ತು ನೃತ್ಯಗುರು. ಅವರ ನೇತೃತ್ವದ ‘ಶರ್ವಾಣಿ ನಾಟ್ಯ ಕಲಾಕೂಟ’ ( ಅಕಾಡೆಮಿ ಆಫ್ ಆರ್ಟ್ಸ್) ನೃತ್ಯಶಾಲೆಯಲ್ಲಿ ಅನೇಕ ಉದಯೋನ್ಮುಖ ಪ್ರತಿಭೆಗಳು ನಾಟ್ಯಶಿಕ್ಷಣ ಪಡೆದು ಕಲಾರಂಗದಲ್ಲಿ ಮುನ್ನಡೆಯುತ್ತಿದ್ದಾರೆ. 

ಭರತನಾಟ್ಯದಲ್ಲಿ ಎಂ.ಎ. ಪದವೀಧರೆಯಾದ ಕುಸುಮಾ ವಿದ್ವತ್ ಪದವಿಯನ್ನು ಪಡೆದಿರುವುದಲ್ಲದೆ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಕರ್ನಾಟಕ ಸರ್ಕಾರದ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಲರಿಪಯಟು – ಯುದ್ಧಕಲೆಯ ನೃತ್ಯ

 ಆಯಮದಲ್ಲೂ ಪಳಗಿದ್ದು, ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ಮಾಡಿ ಕಲಾರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಬಿ.ಎ.ಎಲ್.ಎಲ್. ಬಿ. ತೇರ್ಗಡೆಯಾಗಿ ವಕೀಲೆಯಾಗಿರುವ ಕುಸುಮಾ,  ಅಷ್ಟೇ ಉತ್ತಮ ನೃತ್ಯಗುರುವಾಗಿಯೂ ಮಕ್ಕಳಿಗೆ ನಿರ್ವಂಚನೆಯಿಂದ ವಿದ್ಯಾಧಾರೆ ಎರೆಯುತ್ತಿದ್ದಾರೆ. ಇದೀಗ ಅವರ ಸಂಸ್ಥಾಪನೆಯ  ‘ಶರ್ವಾಣಿ ನಾಟ್ಯ ಕಲಾಕೂಟ’ ಸಂಸ್ಥೆ ತನ್ನ ದಶಮಾನೋತ್ಸವವನ್ನು ‘ನರ್ತನ ಶ್ರುತಿ’ ಶೀರ್ಷಿಕೆಯಲ್ಲಿ ಆಚರಿಸಿಕೊಳ್ಳುತ್ತಿದೆ. 

ಅವರ ಶಿಷ್ಯಗಣ  ಮನಮೋಹಕ ನೃತ್ಯ ವೈಭವವನ್ನು ಪ್ರದರ್ಶಿಸುವುದರ ಜೊತೆಗೆ, ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರನ ಕುರಿತ ವಿಶಿಷ್ಟ ನೃತ್ಯರೂಪಕವನ್ನು ಅರ್ಪಿಸಲಿದೆ.

ಈ ಭರವಸೆಯ ಕಲಾವಿದರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು  ದಿ. 31 ಬುಧವಾರ ಸಂಜೆ  5 ಗಂಟೆಗೆ ನಯನ ರಂಗಮಂದಿರದಲ್ಲಿ ಜರುಗಲಿದೆ. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಖ್ಯಾತ ಲೇಖಕಿ, ರಂಗಕರ್ಮಿ, ಅಂಕಣಕಾರ್ತಿ- ನೃತ್ಯ ಮತ್ತು ನಾಟಕಗಳ ವಿಮರ್ಶಕರಾದ  ಲಿಪಿಪ್ರಾಜ್ಞೆ ವೈ.ಕೆ.ಸಂಧ್ಯಾ ಶರ್ಮ ಮತ್ತು ಕಲಾವಾಹಿನಿ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕರಾದ ವಿ. ಪರಿಮಳ ಹನ್ಸೋಗೆ ಆಗಮಿಸಲಿದ್ದಾರೆ.

 ಉದಯೋನ್ಮುಖ ಕಲಾವಿದರ ನೃತ್ಯ ಸೌಂದರ್ಯ ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ

Post a Comment

0Comments

Post a Comment (0)