ಶ್ರೀರಾಮಮಂದಿರದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಅಚರಣೆ, ಭಕ್ತ ಸಾಗರಕ್ಕೆ ವೈಕುಂಠ ದ್ವಾರದ ಮೂಲಕ ಹಾದು ದೇವರ ದರ್ಶನ ಪಡೆದರು

varthajala
0

 ಬೆಂಗಳೂರು:ರಾಜಾಜಿನಗರ ಶ್ರೀರಾಮಂದಿರದಲ್ಲಿರುವ ಶ್ರೀರಾಮ ಸೇವಾ ಮಂಡಳಿಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ನಿರ್ಮಿಸಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದರ್ಶನ ಪಡೆದರು.  ವೈಕುಂಠ ಏಕಾದಶಿ ಪ್ರಯುಕ್ತ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್, ರವರು ಮಾತನಾಡಿ ವೈಕುಂಠದ ದ್ವಾರ ಇಂದು ತೆರೆದು ಇರುತ್ತದೆ. ಇಂದು ದರ್ಶನ ಪಡೆದರೆ ನಾವು ಮಾಡಿದ ಪಾಪಗಳು, ಸಂಕಷ್ಟಗಳು ದೂರವಾಗುತ್ತದೆ.

ಜೀವನದಲ್ಲಿ ಯಶ್ವಸಿ, ಸಾಧನೆ ಮತ್ತು ಬಂದ ಕಷ್ಟಗಳು, ಸಂಕಷ್ಟಗಳು ಹೋಗಬೇಕಾದರೆ ಗೋವಿಂದನ ನಾಮಸ್ಮರಣೆ ಇದ್ದರೆ ಸಾಕು ಸಕಲ ಸಕಂಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದ್ದಿ ಸಿಗುತ್ತದೆ. ಶ್ರೀರಾಮಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಜನೆ, ಸಂಗೀತ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗವಿರುತ್ತದೆ ಎಂದು ಹೇಳಿದರು.ಪದಾಧಿಕಾರಿಗಳಾದ ಎನ್.ಬಾಬು, ಸುರೇಶ್, ಡಾ.ಮಂಜುನಾಥಸ್ವಾಮಿ, ಎಸ್.ಮಹೇಶ್, ಎಸ್.ಗೀತಾ ರಮೇಶ್, ಜಯರಾಮ್, ವೆಂಕಟೇಶ್ ಬಾಬು, ವಿಜಯರಾಘವನ್, ಜಯರತ್ನ, ಶಿವರಾಜ್ ಶೆಟ್ಟಿ, ಭರತ್, ಜೈಜುರಾಮ್, ಬಸವರಾಜು, ರುಕ್ಮಿಣಿ ರವರು ಭಾಗವಹಿಸಿದ್ದರು.

Post a Comment

0Comments

Post a Comment (0)