ಬೆಂಗಳೂರು 31.12.2025: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೊರಿದ್ದಾರೆ.
"ಕರ್ನಾಟಕ ಮತ್ತು ರಾಷ್ಟ್ರದ ಜನತೆಗೆ ಹೊಸ ವರ್ಷ - 2026ರ ಶುಭಾಶಯಗಳು. ಈ ಹೊಸ ವರ್ಷವೂ ನಮ್ಮ ದೇಶವನ್ನು ಶಾಂತಿ, ಸಮೃದ್ಧಿ ಮತ್ತು ಏಕತೆಯ ಮಾರ್ಗದಲ್ಲಿ ಮುನ್ನಡೆಸುವ ಅವಕಾಶವನ್ನು ಒದಗಿಸಲಿ ಹಾಗೂ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಮಿತಿಯಿಲ್ಲದ ಅವಕಾಶಗಳನ್ನು ತರಲಿ. ದೇಶದ ಉಜ್ವಲ ಭವಿಷ್ಯದ ಕಡೆಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ." ಎಂದು ಶುಭ ಕೋರಿದ್ದಾರೆ.