ಸನಾತನ ರಾಷ್ಟ್ರದ ಶಂಖನಾದ : ಸಾಂಸ್ಕೃತಿಕ ಪುನರುತ್ಥಾನದ ಹೊಸ ಪರ್ವ

varthajala
0

 ಇಂದ್ರಪ್ರಸ್ಥ ನಗರಿ (ನವದೆಹಲಿ) 'ಭಾರತ ಮಂಟಪ'ದಲ್ಲಿ 2025 ಡಿಸೆಂಬರ್ 13 ರಿಂದ 15 ರವರೆಗೆ ನಡೆದ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ವು ಕೇವಲ ಒಂದು ಕಾರ್ಯಕ್ರಮವಾಗಿರದೆಭಾರತದ ಸಾಂಸ್ಕೃತಿಕ ಪುನರುತ್ಥಾನದ ತಿಹಾಸಿಕ ಘೋಷಣೆಯಾಗಿ ಮೂಡಿಬಂದಿದೆ. 'ಧರ್ಮೇಣ ಜಯತಿ ರಾಷ್ಟ್ರಮ್' (ಧರ್ಮದಿಂದ ರಾಷ್ಟ್ರಕ್ಕೆ ಜಯಎಂಬ ಸಂಕಲ್ಪದೊಂದಿಗೆ 'ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್ಮತ್ತು ಸನಾತನ ಸಂಸ್ಥೆಯು  ಮಹೋತ್ಸವವನ್ನು ಆಯೋಜಿಸಿದ್ದವು ಮೂರು ದಿನಗಳ ಉತ್ಸವದಲ್ಲಿ 3,000ಕ್ಕೂ ಹೆಚ್ಚು ಹಿಂದೂ ಧರ್ಮಪ್ರೇಮಿಗಳು, 800 ಹಿಂದೂ ಸಂಘಟನೆಗಳುಸಂತರ-ಮಹಂತರುಕೇಂದ್ರ ಸಚಿವರು ಹಾಗೂ ಯುವಜನತೆ ಪಾಲ್ಗೊಂಡಿದ್ದರುಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪುನಃಸ್ಥಾಪನೆಯ ನಂತರ ದೇಶದಲ್ಲಿ ಆರಂಭವಾಗಿರುವ ಸಾಂಸ್ಕೃತಿಕ ಚೇತನಕ್ಕೆ ದಿಕ್ಕು ಮತ್ತು ವೇಗವನ್ನು ನೀಡುವ ದೃಷ್ಟಿಯಿಂದ  ಮಹೋತ್ಸವವನ್ನು ನೋಡಲಾಗುತ್ತಿದೆ ಸಮಾರಂಭವು ಶೌರ್ಯಶ್ರದ್ಧೆ ಮತ್ತು ರಾಷ್ಟ್ರಭಕ್ತಿಯ ಪ್ರೇರಣಾದಾಯಕ ಉತ್ಸವವಾಗಿ ಹೊರಹೊಮ್ಮಿತು.

 'ಸ್ವರಾಜ್ಯದ ಶೌರ್ಯನಾದ' ಜೀವಂತಗೊಂಡ ಇತಿಹಾಸ

ಮಹೋತ್ಸವದ ಪ್ರಮುಖ ಆಕರ್ಷಣೆಯೆಂದರೆ 'ಸ್ವರಾಜ್ಯದ ಶೌರ್ಯನಾದ' ಪ್ರದರ್ಶನ. 17ನೇ ಶತಮಾನದ 1500ಕ್ಕೂ ಹೆಚ್ಚು ಶಿವಕಾಲದ ಆಯುಧಗಳು, ಛತ್ರಪತಿ ಶಿವಾಜಿ ಮಹಾರಾಜರು ಸ್ಪರ್ಶಿಸಿದ 8 ಶಸ್ತ್ರಾಸ್ತ್ರಗಳು, ಮಂಗಲ್ ಪಾಂಡೆಯ ಬಂದೂಕು ಮತ್ತು ಪಾಣಿಪತ್ ಯುದ್ಧದ ಫಿರಂಗಿಗಳನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಪ್ರದರ್ಶಿಸಲಾಯಿತು. ಅಫ್ಜಲ್ ಖಾನ್ ವಧೆಯ ಸಜೀವ ಚಿತ್ರಣ ಮತ್ತು ಮಣಿಪುರದ 'ಥಾಂಗ್-ತಾ' ಸಮರಕಲೆಯು ಸಭಾಂಗಣದಲ್ಲಿ ವೀರರಸದ ಕಂಪನಗಳನ್ನು ಮೂಡಿಸಿತು. ವಿದ್ಯಾರ್ಥಿಗಳು ಮತ್ತು ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು, "ವೀರರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ" ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ಮತ್ತೊಂದೆಡೆ, ಅನೇಕರು ಶಿವಾಜಿ ಮಹಾರಾಜರು ಮತ್ತು ರಾಣಿ ಲಕ್ಷ್ಮೀಬಾಯಿಯವರ ಹೋರಾಟವನ್ನು ಸ್ಮರಿಸಿ ರಾಷ್ಟ್ರಸೇವೆಯ ಸಂಕಲ್ಪ ಮಾಡಿದರು. ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಅವಶೇಷಗಳು ಮತ್ತು 'ವಂದೇ ಮಾತರಮ್' ಪ್ರದರ್ಶನವು ಭಕ್ತಿಯ ಅಪೂರ್ವ ಸಂಗಮವನ್ನು ಸಾಕಾರಗೊಳಿಸಿದವು.

 ಭಾವಪೂರ್ಣ ಕ್ಷಣಗಳು ಮತ್ತು ಸಾಧಕರ ತ್ಯಾಗ

ಮಹೋತ್ಸವದ ಉದ್ದಕ್ಕೂ ವಿವಿಧ ಗೋಷ್ಠಿಗಳು, ಮಾರ್ಗದರ್ಶನ ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ನಡೆದವು. ಶಂಖನಾದ, ವೇದಘೋಷ ಮತ್ತು ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಪ್ರತಿಯೊಂದು ಅಧಿವೇಶನದಲ್ಲಿ ಸುರಕ್ಷತೆ, ಸಂಸ್ಕೃತಿ ಮತ್ತು ಶೌರ್ಯ ಎಂಬ ಮೂರು ಸ್ತಂಭಗಳ ಬಗ್ಗೆ ವಿಚಾರ ಮಂಥನ ನಡೆಯಿತು.  

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಕಳೆದ 25 ವರ್ಷಗಳಲ್ಲಿ ನಾಮಜಪ,  ವೈಯಕ್ತಿಕ ಮತ್ತು ಸಮಷ್ಟಿ ಸಾಧನೆ ಹಾಗೂ ಸಾತ್ವಿಕ ಜೀವನಶೈಲಿಯ ಸಂದೇಶ ನೀಡುವ ಮೂಲಕ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ. ಈ ಸಾಧಕರು ಪ್ರದರ್ಶನ, ಸ್ವಯಂಸೇವೆ ಮತ್ತು ಶಿಸ್ತುಬದ್ಧ ವ್ಯವಸ್ಥೆಯ ಮೂಲಕ ತೋರಿದ ಸಮರ್ಪಣಾ ಭಾವವು ಅತಿಥಿಗಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಸನಾತನ ಸಂಸ್ಥೆಯ ಕಾರ್ಯದಿಂದ ರಾಷ್ಟ್ರವು ಮತ್ತಷ್ಟು ಸಬಲವಾಗಲಿದೆ ಎಂದು 'ಶದಾಣಿ ದರ್ಬಾರ್'ನ ಪೀಠಾಧೀಶರಾದ ಪೂಜ್ಯ ಯುಧಿಷ್ಠಿರಲಾಲ್ ಮಹಾರಾಜ್ ಮತ್ತು ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಚೇತನಕ್ಕೆ ಲಭಿಸಿದ ಹೊಸ ಧ್ವನಿ

ಮಹೋತ್ಸವದ ಮುಖ್ಯ ಗೋಷ್ಠಿಗಳಲ್ಲಿ ಕೇವಲ ಧಾರ್ಮಿಕತೆಯಷ್ಟೇ ಅಲ್ಲದೆ, ಪ್ರಸ್ತುತ ರಾಷ್ಟ್ರೀಯ ಪ್ರಶ್ನೆಗಳ ಬಗ್ಗೆಯೂ ಚರ್ಚಿಸಲಾಯಿತು. ದೇವಾಲಯಗಳ ರಕ್ಷಣೆ, ಭಯೋತ್ಪಾದನೆ, ಸಾಂಸ್ಕೃತಿಕ ಅಸ್ಮಿತೆ, ಪರಿಸರ ಸಂರಕ್ಷಣೆ ಮತ್ತು ಜನಸಂಖ್ಯಾ ಅಸಮತೋಲನದಂತಹ ವಿಷಯಗಳ ಬಗ್ಗೆ ವಕ್ತಾರರು ಕಠಿಣ ನಿಲುವು ತಳೆದರು ಹಾಗೂ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂದು ಕರೆ ನೀಡಿದರು. ದೇಶದ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳ ವಿರುದ್ಧ ಸೈನ್ಯ ಮತ್ತು ಸರ್ಕಾರ ಹೋರಾಡುತ್ತಿದ್ದರೆ, ಉಳಿದ ಹೋರಾಟವನ್ನು ಜನಸಾಮಾನ್ಯರೂ ಮಾಡಬೇಕು ಎಂಬ ಸಂಕಲ್ಪ ಮಾಡಲಾಯಿತು. 'ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಅಂತಿಮವಾಗಿ ಧರ್ಮಕ್ಕೇ ಜಯ' ಎಂಬ ಸಂದೇಶವನ್ನು ನೀಡುವ ಮೂಲಕ ಈ ಮಹೋತ್ಸವವು ರಾಷ್ಟ್ರಚೇತನಕ್ಕೆ ಸ್ಪಷ್ಟ ಸ್ವರೂಪ ನೀಡಿತು.

ಅನೇಕ ಸಂತರು ಮತ್ತು ಸಾಮಾಜಿಕ ಕಾರ್ಯಕರ್ತರು ಸಂವಾದದ ಮೂಲಕ, ರಾಮರಾಜ್ಯದ ಕನಸು ಕೇವಲ ಘೋಷಣೆಗಳಿಂದಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನ ಸಾತ್ವಿಕ ನಡವಳಿಕೆಯಿಂದ ಸಾಕಾರಗೊಳ್ಳುತ್ತದೆ ಎಂದು ಪ್ರತಿಪಾದಿಸಿದರು. ಸಾಧನೆ, ನೈತಿಕತೆ, ಸಮಾಜ ಹಿತ ಮತ್ತು ಪರಸ್ಪರ ಏಕತೆಯ ಆಧಾರದ ಮೇಲೆ ನಿಂತ ರಾಷ್ಟ್ರವೇ ನಿಜವಾದ ಅರ್ಥದಲ್ಲಿ 'ಸನಾತನ ರಾಷ್ಟ್ರ'ವಾಗಬಲ್ಲದು ಎಂಬ ಆಶಯ ವ್ಯಕ್ತವಾಯಿತು. 

ರಾಮರಾಜ್ಯದ ದಿಶೆಯಲ್ಲಿ ಸಮಾಜದ ಪಯಣ

ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಧು-ಸಂತರು ಮತ್ತು ಭಕ್ತರು ರಾಷ್ಟ್ರದ ಸಮೃದ್ಧಿ, ಸುರಕ್ಷತೆ ಮತ್ತು ಸಾಂಸ್ಕೃತಿಕ ಏಕತೆಗಾಗಿ ಸಾಧನೆ ಹಾಗೂ ಸಕ್ರಿಯ ಕೊಡುಗೆ ನೀಡಲು ಸಂಕಲ್ಪ ಮಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪುನಃಸ್ಥಾಪನೆಯ ನಂತರ, "ರಾಮರಾಜ್ಯವನ್ನು ಪ್ರತ್ಯಕ್ಷವಾಗಿ ಅನುಭವಿಸಬೇಕಾದರೆ, ಸಮಾಜದಲ್ಲಿ ಧರ್ಮಾಚರಣೆಯ ಅಧಿಷ್ಠಾನ ಅತ್ಯಗತ್ಯ" ಎಂಬ ಸಂದೇಶವನ್ನು ಮಹೋತ್ಸವವು ಸಾರಿತು.

ಈ ಮಹೋತ್ಸವವು ಕೇವಲ ಒಂದು ಕಾರ್ಯಕ್ರಮದ ಮುಕ್ತಾಯವಾಗಿರದೆ, ಅನೇಕರ ಮನಸ್ಸಿನಲ್ಲಿ ರಾಷ್ಟ್ರಗೌರವ ಮತ್ತು ಸನಾತನ ಸಂಸ್ಕೃತಿಯ ಬಗ್ಗೆ ಕೃತಜ್ಞತೆಯನ್ನು ಜಾಗೃತಗೊಳಿಸಿತು. ಸಾಧನೆಯ ಮೂಲಕ ರಾಷ್ಟ್ರರಕ್ಷಣೆಗಾಗಿ ಸಜ್ಜಾಗುವ ಮಾರ್ಗ ಎಲ್ಲರಿಗೂ ಮುಕ್ತವಾಗಿದೆ ಎಂಬ ಸಂದೇಶದೊಂದಿಗೆ ಯುವಜನತೆ ದೆಹಲಿಯಿಂದ ಮರಳಿದರು. ಇದೇ ಈ ಶಂಖನಾದದ ನೈಜ ಯಶಸ್ಸುಇಂದ್ರಪ್ರಸ್ಥ ನಗರಿ (ನವದೆಹಲಿ) 'ಭಾರತ ಮಂಟಪ'ದಲ್ಲಿ 2025 ಡಿಸೆಂಬರ್ 13 ರಿಂದ 15 ರವರೆಗೆ ನಡೆದ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ವು ಕೇವಲ ಒಂದು ಕಾರ್ಯಕ್ರಮವಾಗಿರದೆಭಾರತದ ಸಾಂಸ್ಕೃತಿಕ ಪುನರುತ್ಥಾನದ ತಿಹಾಸಿಕ ಘೋಷಣೆಯಾಗಿ ಮೂಡಿಬಂದಿದೆ. 'ಧರ್ಮೇಣ ಜಯತಿ ರಾಷ್ಟ್ರಮ್' (ಧರ್ಮದಿಂದ ರಾಷ್ಟ್ರಕ್ಕೆ ಜಯಎಂಬ ಸಂಕಲ್ಪದೊಂದಿಗೆ 'ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್ಮತ್ತು ಸನಾತನ ಸಂಸ್ಥೆಯು  ಮಹೋತ್ಸವವನ್ನು ಆಯೋಜಿಸಿದ್ದವು ಮೂರು ದಿನಗಳ ಉತ್ಸವದಲ್ಲಿ 3,000ಕ್ಕೂ ಹೆಚ್ಚು ಹಿಂದೂ ಧರ್ಮಪ್ರೇಮಿಗಳು, 800 ಹಿಂದೂ ಸಂಘಟನೆಗಳುಸಂತರ-ಮಹಂತರುಕೇಂದ್ರ ಸಚಿವರು ಹಾಗೂ ಯುವಜನತೆ ಪಾಲ್ಗೊಂಡಿದ್ದರುಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪುನಃಸ್ಥಾಪನೆಯ ನಂತರ ದೇಶದಲ್ಲಿ ಆರಂಭವಾಗಿರುವ ಸಾಂಸ್ಕೃತಿಕ ಚೇತನಕ್ಕೆ ದಿಕ್ಕು ಮತ್ತು ವೇಗವನ್ನು ನೀಡುವ ದೃಷ್ಟಿಯಿಂದ  ಮಹೋತ್ಸವವನ್ನು ನೋಡಲಾಗುತ್ತಿದೆ ಸಮಾರಂಭವು ಶೌರ್ಯಶ್ರದ್ಧೆ ಮತ್ತು ರಾಷ್ಟ್ರಭಕ್ತಿಯ ಪ್ರೇರಣಾದಾಯಕ ಉತ್ಸವವಾಗಿ ಹೊರಹೊಮ್ಮಿತು

'ಸ್ವರಾಜ್ಯದ ಶೌರ್ಯನಾದ' ಜೀವಂತಗೊಂಡ ಇತಿಹಾಸ

ಮಹೋತ್ಸವದ ಪ್ರಮುಖ ಆಕರ್ಷಣೆಯೆಂದರೆ 'ಸ್ವರಾಜ್ಯದ ಶೌರ್ಯನಾದ' ಪ್ರದರ್ಶನ. 17ನೇ ಶತಮಾನದ 1500ಕ್ಕೂ ಹೆಚ್ಚು ಶಿವಕಾಲದ ಆಯುಧಗಳು, ಛತ್ರಪತಿ ಶಿವಾಜಿ ಮಹಾರಾಜರು ಸ್ಪರ್ಶಿಸಿದ 8 ಶಸ್ತ್ರಾಸ್ತ್ರಗಳು, ಮಂಗಲ್ ಪಾಂಡೆಯ ಬಂದೂಕು ಮತ್ತು ಪಾಣಿಪತ್ ಯುದ್ಧದ ಫಿರಂಗಿಗಳನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಪ್ರದರ್ಶಿಸಲಾಯಿತು. ಅಫ್ಜಲ್ ಖಾನ್ ವಧೆಯ ಸಜೀವ ಚಿತ್ರಣ ಮತ್ತು ಮಣಿಪುರದ 'ಥಾಂಗ್-ತಾ' ಸಮರಕಲೆಯು ಸಭಾಂಗಣದಲ್ಲಿ ವೀರರಸದ ಕಂಪನಗಳನ್ನು ಮೂಡಿಸಿತು. ವಿದ್ಯಾರ್ಥಿಗಳು ಮತ್ತು ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು, "ವೀರರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ" ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ಮತ್ತೊಂದೆಡೆ, ಅನೇಕರು ಶಿವಾಜಿ ಮಹಾರಾಜರು ಮತ್ತು ರಾಣಿ ಲಕ್ಷ್ಮೀಬಾಯಿಯವರ ಹೋರಾಟವನ್ನು ಸ್ಮರಿಸಿ ರಾಷ್ಟ್ರಸೇವೆಯ ಸಂಕಲ್ಪ ಮಾಡಿದರು. ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಅವಶೇಷಗಳು ಮತ್ತು 'ವಂದೇ ಮಾತರಮ್' ಪ್ರದರ್ಶನವು ಭಕ್ತಿಯ ಅಪೂರ್ವ ಸಂಗಮವನ್ನು ಸಾಕಾರಗೊಳಿಸಿದವು.

ಭಾವಪೂರ್ಣ ಕ್ಷಣಗಳು ಮತ್ತು ಸಾಧಕರ ತ್ಯಾಗ

ಮಹೋತ್ಸವದ ಉದ್ದಕ್ಕೂ ವಿವಿಧ ಗೋಷ್ಠಿಗಳು, ಮಾರ್ಗದರ್ಶನ ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ನಡೆದವು. ಶಂಖನಾದ, ವೇದಘೋಷ ಮತ್ತು ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಪ್ರತಿಯೊಂದು ಅಧಿವೇಶನದಲ್ಲಿ ಸುರಕ್ಷತೆ, ಸಂಸ್ಕೃತಿ ಮತ್ತು ಶೌರ್ಯ ಎಂಬ ಮೂರು ಸ್ತಂಭಗಳ ಬಗ್ಗೆ ವಿಚಾರ ಮಂಥನ ನಡೆಯಿತು.

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಕಳೆದ 25 ವರ್ಷಗಳಲ್ಲಿ ನಾಮಜಪ, ವೈಯಕ್ತಿಕ ಮತ್ತು ಸಮಷ್ಟಿ ಸಾಧನೆ ಹಾಗೂ ಸಾತ್ವಿಕ ಜೀವನಶೈಲಿಯ ಸಂದೇಶ ನೀಡುವ ಮೂಲಕ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ. ಈ ಸಾಧಕರು ಪ್ರದರ್ಶನ, ಸ್ವಯಂಸೇವೆ ಮತ್ತು ಶಿಸ್ತುಬದ್ಧ ವ್ಯವಸ್ಥೆಯ ಮೂಲಕ ತೋರಿದ ಸಮರ್ಪಣಾ ಭಾವವು ಅತಿಥಿಗಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಸನಾತನ ಸಂಸ್ಥೆಯ ಕಾರ್ಯದಿಂದ ರಾಷ್ಟ್ರವು ಮತ್ತಷ್ಟು ಸಬಲವಾಗಲಿದೆ ಎಂದು 'ಶದಾಣಿ ದರ್ಬಾರ್'ನ ಪೀಠಾಧೀಶರಾದ ಪೂಜ್ಯ ಯುಧಿಷ್ಠಿರಲಾಲ್ ಮಹಾರಾಜ್ ಮತ್ತು ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದರು. 

ರಾಷ್ಟ್ರಚೇತನಕ್ಕೆ ಲಭಿಸಿದ ಹೊಸ ಧ್ವನಿ

ಮಹೋತ್ಸವದ ಮುಖ್ಯ ಗೋಷ್ಠಿಗಳಲ್ಲಿ ಕೇವಲ ಧಾರ್ಮಿಕತೆಯಷ್ಟೇ ಅಲ್ಲದೆ, ಪ್ರಸ್ತುತ ರಾಷ್ಟ್ರೀಯ ಪ್ರಶ್ನೆಗಳ ಬಗ್ಗೆಯೂ ಚರ್ಚಿಸಲಾಯಿತು. ದೇವಾಲಯಗಳ ರಕ್ಷಣೆ, ಭಯೋತ್ಪಾದನೆ, ಸಾಂಸ್ಕೃತಿಕ ಅಸ್ಮಿತೆ, ಪರಿಸರ ಸಂರಕ್ಷಣೆ ಮತ್ತು ಜನಸಂಖ್ಯಾ ಅಸಮತೋಲನದಂತಹ ವಿಷಯಗಳ ಬಗ್ಗೆ ವಕ್ತಾರರು ಕಠಿಣ ನಿಲುವು ತಳೆದರು ಹಾಗೂ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂದು ಕರೆ ನೀಡಿದರು. ದೇಶದ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳ ವಿರುದ್ಧ ಸೈನ್ಯ ಮತ್ತು ಸರ್ಕಾರ ಹೋರಾಡುತ್ತಿದ್ದರೆ, ಉಳಿದ ಹೋರಾಟವನ್ನು ಜನಸಾಮಾನ್ಯರೂ ಮಾಡಬೇಕು ಎಂಬ ಸಂಕಲ್ಪ ಮಾಡಲಾಯಿತು. 'ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಅಂತಿಮವಾಗಿ ಧರ್ಮಕ್ಕೇ ಜಯ' ಎಂಬ ಸಂದೇಶವನ್ನು ನೀಡುವ ಮೂಲಕ ಈ ಮಹೋತ್ಸವವು ರಾಷ್ಟ್ರಚೇತನಕ್ಕೆ ಸ್ಪಷ್ಟ ಸ್ವರೂಪ ನೀಡಿತು.

ಅನೇಕ ಸಂತರು ಮತ್ತು ಸಾಮಾಜಿಕ ಕಾರ್ಯಕರ್ತರು ಸಂವಾದದ ಮೂಲಕ, ರಾಮರಾಜ್ಯದ ಕನಸು ಕೇವಲ ಘೋಷಣೆಗಳಿಂದಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನ ಸಾತ್ವಿಕ ನಡವಳಿಕೆಯಿಂದ ಸಾಕಾರಗೊಳ್ಳುತ್ತದೆ ಎಂದು ಪ್ರತಿಪಾದಿಸಿದರು. ಸಾಧನೆ, ನೈತಿಕತೆ, ಸಮಾಜ ಹಿತ ಮತ್ತು ಪರಸ್ಪರ ಏಕತೆಯ ಆಧಾರದ ಮೇಲೆ ನಿಂತ ರಾಷ್ಟ್ರವೇ ನಿಜವಾದ ಅರ್ಥದಲ್ಲಿ 'ಸನಾತನ ರಾಷ್ಟ್ರ'ವಾಗಬಲ್ಲದು ಎಂಬ ಆಶಯ ವ್ಯಕ್ತವಾಯಿತು.

ರಾಮರಾಜ್ಯದ ದಿಶೆಯಲ್ಲಿ ಸಮಾಜದ ಪಯಣ

ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಧು-ಸಂತರು ಮತ್ತು ಭಕ್ತರು ರಾಷ್ಟ್ರದ ಸಮೃದ್ಧಿ, ಸುರಕ್ಷತೆ ಮತ್ತು ಸಾಂಸ್ಕೃತಿಕ ಏಕತೆಗಾಗಿ ಸಾಧನೆ ಹಾಗೂ ಸಕ್ರಿಯ ಕೊಡುಗೆ ನೀಡಲು ಸಂಕಲ್ಪ ಮಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪುನಃಸ್ಥಾಪನೆಯ ನಂತರ, "ರಾಮರಾಜ್ಯವನ್ನು ಪ್ರತ್ಯಕ್ಷವಾಗಿ ಅನುಭವಿಸಬೇಕಾದರೆ, ಸಮಾಜದಲ್ಲಿ ಧರ್ಮಾಚರಣೆಯ ಅಧಿಷ್ಠಾನ ಅತ್ಯಗತ್ಯ" ಎಂಬ ಸಂದೇಶವನ್ನು ಮಹೋತ್ಸವವು ಸಾರಿತು.

ಈ ಮಹೋತ್ಸವವು ಕೇವಲ ಒಂದು ಕಾರ್ಯಕ್ರಮದ ಮುಕ್ತಾಯವಾಗಿರದೆ, ಅನೇಕರ ಮನಸ್ಸಿನಲ್ಲಿ ರಾಷ್ಟ್ರಗೌರವ ಮತ್ತು ಸನಾತನ ಸಂಸ್ಕೃತಿಯ ಬಗ್ಗೆ ಕೃತಜ್ಞತೆಯನ್ನು ಜಾಗೃತಗೊಳಿಸಿತು. ಸಾಧನೆಯ ಮೂಲಕ ರಾಷ್ಟ್ರರಕ್ಷಣೆಗಾಗಿ ಸಜ್ಜಾಗುವ ಮಾರ್ಗ ಎಲ್ಲರಿಗೂ ಮುಕ್ತವಾಗಿದೆ ಎಂಬ ಸಂದೇಶದೊಂದಿಗೆ ಯುವಜನತೆ ದೆಹಲಿಯಿಂದ ಮರಳಿದರು. ಇದೇ ಈ ಶಂಖನಾದದ ನೈಜ ಯಶಸ್ಸು

Post a Comment

0Comments

Post a Comment (0)