ಕಲಾರಸಿಕರಿಗೆ ಮುದ ನೀಡಿದ ವೀಣಾ-ವೇಣು-ಗಾನ-ನೃತ್ಯ ಲಹರಿ

varthajala
0

 ಬೆಂಗಳೂರು : ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ನಗರದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಪೇಜಾವರ ಮಠದ ಪ್ರಾತಃಸ್ಮರಣೀಯರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ 6ನೇ ಮಹಾಸಮಾರಾಧನೆಯ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳಲು ವಾದಕರಾದ ಶ್ರೀಮದಾನಂದತೀರ್ಥರ ನೇತೃತ್ವದಲ್ಲಿ "ವೀಣಾ-ವೇಣು-ಗಾನ-ನೃತ್ಯ ಲಹರಿ" ಎಂಬ ಶೀರ್ಷಿಕೆಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಕು|| ಧೃತಿ ಆತ್ರೇಯ ಮತ್ತು ಕು|| ಅವನಿ ಭಟ್ ಹಾಡಿದ ದಾಸರ ಪದಗಳಿಗೆ ಮೂರು ವರ್ಷದ ಪುಟ್ಟ ಕಿಶೋರಿ ಧನ್ವಿ ಆತ್ರೇಯ ಮಾಡಿದ ನೃತ್ಯ ಕಿಕ್ಕಿರಿದು ನೆರೆದಿದ್ದ ಎಲ್ಲಾ ಕಲಾಭಿಮಾನಿಗಳ ಮನಸೆಳೆಯಿತು. 
ಕೊಳಲು ವಾದನದಲ್ಲಿ ಶ್ರೀಮದಾನಂದತೀರ್ಥ ಹರಿದಾಸರ ಅಪರೂಪದ ಕೃತಿಗಳನ್ನು ನುಡಿಸಿದರು. ಕು|| ವೈಷ್ಣವಿ ವೀಣೆ ನುಡಿಸಿದರು. ಶ್ರೀ ಕಿಶೋರ್ ಆಚಾರ್ (ತಬಲಾ), ಶ್ರೀ ಟಿ.ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಪ್ರಮಥ ವಿಠಲ (ಫಕವಾಜ್), ಶ್ರೀ ಶ್ರೀನಿಧಿ (ಮೃದಂಗ), ಶ್ರೀ ಗುರುರಾಜ್ (ರಿದಂ ಪ್ಯಾಡ್) ಮತ್ತು ಶ್ರೀ ಪೂರ್ಣಪ್ರಸಾದ್ (ಬುಲ್ ಬುಲ್ ತರಂಗ್) ವಾದ್ಯಗಳಲ್ಲಿ ಸಹಕರಿಸಿದರು. ಕಾರ್ಯಕ್ರಮದ ನಂತರ ಎಲ್ಲಾ ಕಲಾವಿದರಿಗೂ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Post a Comment

0Comments

Post a Comment (0)