ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು-ಇಂದು ನನಸು:ಬಸವರಾಜ ಬೊಮ್ಮಾಯಿ

varthajala
0

 ಹಾವೇರಿ(ಶಿಗ್ಗಾವಿ) :-ಶಿಗ್ಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ನಾನು ಕಂಡ ಕನಸು ಇಂದು ಬಹುತೇಕ ಸಾಕಾರಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ಶಿಗ್ಗಾಂವಿ ತಾಲೂಕಿಗೊಂದು ಸಾರಿಗೆ ಇಲಾಖೆಯ ನೂತನ ಬಸ್ ಘಟಕ ಹಾಗೂ ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಅತ್ಯಂತ ಅಗತ್ಯ ಎಂದು ಭಾವಿಸಿ, ನಾನು ಸಿಎಂ ಆಗಿದ್ದ ಅವಧಿಯಲ್ಲಿ 28 ಕೋಟಿ ರೂ. ಬಿಡುಗಡೆಗೊಳಿಸಿದ ಕಾರಣ, ಇದೀಗ ಆ ಘಟಕ ಲೋಕಾರ್ಪಣೆಯಾಗಿದೆ.


ಈ ಘಟಕ ಲೋಕಾರ್ಪಣೆಯಾದ ಕಾರಣದಿಂದ, ಕ್ಷೇತ್ರದ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳಿಗೆ ಸುಗಮ ಬಸ್ ಸಂಚಾರದ ಅನುಕೂಲವನ್ನು ಒದಗಿಸಲಿದೆ. ವಾಹನ ಚಾಲನಾ ತರಬೇತಿ ಕೇಂದ್ರದ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ದೊಡ್ಡ ಮಟ್ಟದ ನೆರವು ನೀಡಲಿದೆ. ಶಿಗ್ಗಾಂವಿ ಕ್ಷೇತ್ರದ ಪ್ರಗತಿಯಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದಾಗ ಮಾತ್ರ ನನ್ನ ಶ್ರಮ ಸಾರ್ಥಕ ಎಂದು ತಿಳಿಸಿದ್ದಾರೆ.

Post a Comment

0Comments

Post a Comment (0)