ಬೆಂಗಳೂರು: ಇಂಟರ್ ನ್ಯಾಷನಲ್ ಆಫ್ ಜೀನ್ ಎಂಡ್ ಕೋಶ ಥೇರಪಿ ಮತ್ತು ಡಾ||ಅಗರವಾಲ್ ಆಸ್ಪತ್ರೆ ಮತ್ತು ಐ.ಸಿ.ಎ.ಆರ್.NIANP ಸಹಯೋಗದಲ್ಲಿ ಅಂತರಾಷ್ಟ್ರೀಯ ಜೀನ್ ಮತ್ತು ಕೋಶ ಚಿಕಿತ್ಸೆಯ 7ನೇ ಅವೃತ್ತಿಯ ಉದ್ಘಾಟನೆ ಸಮಾರಂಭ. ಅಗರವಾಲ್ ಐ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ||ಸುನೀತಾ ರಾಣಾ ಅಗರವಾಲ್ ರವರು, ನ್ಯಾಯಮೂರ್ತಿಗಳಾದ ಉಮೇಶ್ ಸಿರೋಹಿ, ಡಾ.ಅರ್ತಬಂಧು ಸಾಹೂ, ಡಾ||ರಿಯಾಜ್ ಪಾಷ, ಚಲನಚಿತ್ರ ನಟಿ ಆಸ್ಬಾ ಸೂರ್ಯನಿ, ಪ್ರೋ.ವಿದ್ಯಾನಿರಂಜನ್ ರವರು ದೀಪ ಬೆಳಗಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.
ಡಾ||ಸುನೀತಾ ರಾಣಾ ಅಗರವಾಲ್ ರವರು ಮಾತನಾಡಿ ಅಂತರಾಷ್ಟ್ರೀಯ ಜೀನ್ ಥೇರಪಿ ಸಮಾವೇಶ ಪ್ರತಿವರ್ಷ ಆಯೋಜಿಸಿಕೊಂಡು ಬರಲಾಗುತ್ತಿದೆ.ಡಿ.ಎನ್.ಎ. ಥೇರಪಿ ಒಂದು ಹನಿ ರಕ್ತದಿಂದ ವಂಶಪಾರಂಪರ್ಯ ರೋಗಗಳ ಪತ್ತೆ ಹಚ್ಚಿ ರೋಗಕ್ಕೆ ಚಿಕಿತ್ಸೆ ನೀಡಬಹುದು.ವಿವಿಧ ರೋಗಗಳಿಗೆ ಜೀನ್ ಥೇರಪಿಯಿಂದ ಕೋಶಗಳಿಗೆ ಹೆಚ್ಚಿನ ಶಕ್ತಿ ಬಂದು ರೋಗಗಳ ವಿರುದ್ದ ಹೋರಾಟ ಮಾಡುವ ಶಕ್ತಿ ಬರುತ್ತದೆ.ಸಕ್ಕರೆ ಖಾಯಿಲೆ, ಬಿ.ಪಿ. ಮತ್ತು ಕ್ಯಾನ್ಸರ್ ವಿವಿಧ ರೋಗಗಳು ವಿರುದ್ದ ಹೋರಾಟ ಮಾಡಲು ದೃಹಿಕವಾಗಿ ಸಮರ್ಥ ಹೊಂದುತ್ತಾರೆ.ದೇಶದಲ್ಲಿ ಇಂದು ಜೀನ್ ಮತ್ತು ಜೀವ ಕೋಶಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಡಾ||ಅರ್ತಬಂಧು ಸಾಹೂ, ಡಾ.ರಾಜಶೇಖರ್ ಮತ್ತು ಡಾ.ಪಾರ್ಥಸಾರಥಿರಾಮಕೃಷ್ಣರವರಿಗೆ ಐ.ಎಸ್.ಜಿ.ಸಿ.ಟಿ.ಪ್ರಶಸ್ತಿ ನೀಡಿ ಗೌರವಿಸಲಾಯಿತು.