ನಾಡು ಕಂಡ ಖ್ಯಾತ ಲೇಖಕ, ತತ್ವಜ್ಞಾನಿ ಎಸ್.ಎಲ್. ಭೈರಪ್ಪ ನಿಧನಕ್ಕೆ ಪರಿಷತನಲ್ಲಿ ಸಂತಾಪ

varthajala
0

ಬೆಳಗಾವಿ (ಸುವರ್ಣಸೌಧ) / ಬೆಂಗಳೂರು, 
ಕಾದಂಬರಿಕಾರರು, ತತ್ವಜ್ಞಾನಿ ಮತ್ತು ಚಿತ್ರಕಥೆಗಾರರಾಗಿದ್ದ ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕರ್ನಾಟಕ ವಿಧಾನ ಪರಿಷತನಲ್ಲಿ ಸಂತಾಪ ಸೂಚಿಸಲಾಯಿತು.
1931ರ ಆಗಸ್ಟ್, 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು 2025ನೇ ಸೆಪ್ಟೆಂಬರ್ 24 ರಂದು ನಿಧನರಾದರು.
ಶ್ರೀಯುತರು ಬಿಎ (ಆನರ್ಸ್) ಹಾಗೂ ತತ್ವಶಾಸ್ತ್ರ ಸ್ನಾತಕೋತ್ತರ ಪದವೀಧರರಾಗಿದ್ದು, ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ" ಎಂಬ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಪಡೆದಿದ್ದರು. ಶ್ರೀಯುತರು ಹುಬ್ಬಳ್ಳಿಯ ಶ್ರೀ ಕಾಡುಸಿದ್ದೇಶ್ವರ ಕಾಲೇಜು, ಗುಜರಾತ್‍ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್‍ಸಿಇಆರ್‍ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, 1991ರಲ್ಲಿ ನಿವೃತ್ತರಾಗಿದ್ದರು.
1955ರಲ್ಲಿ ಮೊದಲ ಕೃತಿ ಗತ ಜ್ಞಾನ ಮತ್ತೆರಡು ಕಥೆಗಳ ಮೂಲಕ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಅವರು 1958ರಲ್ಲಿ ಮೊದಲ ಕಾದಂಬರಿ ಭೀಮಕಾಯ ಪ್ರಕಟಣೆಯ ಮೂಲಕ 25 ಕಾದಂಬರಿಗಳು ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಕೃತಿಗಳನ್ನು ಇಂಗ್ಲಿμï, ಕನ್ನಡ ಮತ್ತು ಸಂಸ್ಕøತ ಭಾμÉಗಳಲ್ಲಿ ಪ್ರಕಟಿಸಲಾಗಿದೆ. ಶ್ರೀಯುತರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಮತ್ತು ನಾಯಿ ನೆರಳುಗಳು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಚಲನಚಿತ್ರಗಳಾಗಿ ನಿರ್ಮಾಣಗೊಂಡು 1966ರಲ್ಲಿ ವಂಶವೃಕ್ಷ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1965ರಲ್ಲಿ ದಾತು (ಕ್ರಾಸಿಂಗ್ ಓವರ್) ಕನ್ನಡ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿತು.
ಶ್ರೀಯುತರ ಕಾದಂಬರಿಗಳಲ್ಲಿ ಅತ್ಯಂತ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪರ್ವ, ಮಹಾಭಾರತದ ಮಹಾಕಾವ್ಯದಲ್ಲಿನ ಸಾಮಾಜಿಕ ರಚನೆ, ಮೌಲ್ಯಗಳು ಮತ್ತು ಮರಣವನ್ನು ಅದ್ಭುತವಾಗಿ ನಿರೂಪಿಸಲಾಗಿದೆ.
ಶ್ರೀಯುತರು ಸಾಹಿತ್ಯ ಲೋಕಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಖ್ಯಾತ ಲೇಖಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯ ಮಂಡಿಸಿದರು.

Post a Comment

0Comments

Post a Comment (0)