ಸನಾತನ ಧರ್ಮ ಎಂದರೆ ಕೇವಲ ಆಚರಣೆಗಳ ಸಂಕಲನ ಅಲ್ಲ; ಅದು ಜೀವನದ ದರ್ಶನ. ಕಾಲಕ್ಕೆ ಒಳಪಡದ, ಮಾನವೀಯ ಮೌಲ್ಯಗಳ ಮೇಲೆ ನಿಂತಿರುವ ಶಾಶ್ವತ ಚಿಂತನೆ ಅದೇ ಸನಾತನ ಧರ್ಮ. ಇಂದು ಈ ಮಹತ್ತರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆಗಾರಿಕೆ ಯುವಜನತೆಯ ಮೇಲಿದೆ ಎಂದು ಪಾಂಚಜನ್ಯ ಪುರಸ್ಕಾರಕ್ಕೆ ಭಾಜನರಾದ ಖ್ಯಾತ ವಾಗ್ಮಿ ದುಷ್ಯಂತ್ ಶ್ರೀಧರ್ ಅಭಿಪ್ರಾಯ ಪಟ್ಟರು .
ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ನಡುವೆ ಬೆಳೆದ ಯುವಕರು, ಸನಾತನ ರ‍್ಮದ ತತ್ತ್ವಗಳಿಂದ ಆಂತರಿಕ ಸ್ಥರ‍್ಯ, ನೈತಿಕ ಸ್ಪಷ್ಟತೆ ಮತ್ತು ಸಮತೋಲನದ ಬದುಕು ಕಲಿಯಬಹುದು. ಯೋಗ, ಧ್ಯಾನ, ಪರಿಸರ ಸಂರಕ್ಷಣೆ, ವಸುದೈವ ಕುಟುಂಬಕಂ ಎಂಬ ತತ್ತ್ವಗಳು ಇಂದು ಜಗತ್ತೇ ಒಪ್ಪಿಕೊಂಡ ಮೌಲ್ಯಗಳಾಗಿವೆ.
ಆಧ್ಯಾತ್ಮಿಕ ಅಸ್ತಿಭಾರದ ಮೇಲೆ ಸಮಾಜದ ಅಕ್ಷರ - ಆರೋಗ್ಯಗಳ ಸಮೃದ್ಧಿಗಾಗಿ ಕಟಿಬದ್ಧವಾದ ಸ್ವಲಾಭರಹಿತ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನವು ಬೆಂಗಳೂರಿನ ಜಯನಗರ ೪ನೇ ಬಡಾವಣೆಯ ಯುವಪಥ ಸಭಾಂಗಣದಲ್ಲಿ ಈ ನೆಲದ ಅವಿಚ್ಛಿನ್ನ ಸನಾತನ ರ‍್ಮ ಪರಂಪರೆಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ದುಷ್ಯಂತ್ ಶ್ರೀಧರ್ ರವರಿಗೆ ‘ಪಾಂಚಜನ್ಯ ಪುರಸ್ಕಾರ – 2025 ‘ಪ್ರಶಸ್ತಿಯನ್ನು ಪ್ರದಾನಿಸಿ ತನ್ನ ಹೆಮ್ಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದರು.
ಪ್ರತಿಷ್ಠಾನ ಹೊರತಂದಿರುವ ನೂತನ ದಿನರ‍್ಶಿಕೆ ಬಿಡುಗಡೆ ಸಂರ‍್ಭದಲ್ಲಿ ಸ್ಥಾಪಕ ಟ್ರಸ್ಟೀ ಮುರಳಿ ಕಾಕೋಳು ,ಟ್ರಸ್ಟೀಗಳಾದ ಎಸ್.ವಿ.ಸುಬ್ರಹ್ಮಣ್ಯ, ಅನಂತ ವೇದರ‍್ಭಂ, ವಿ.ಆರ್.ವೆಂಕಟೇಶ್ ಹಾಗೂ ಸಲಹೆಗಾರ ಡಾ.ಕೆ ಎಸ್.ಸಮೀರಸಿಂಹ ಮೊದಲಾದವರು ವೇದಿಕೆಯಲ್ಲಿದರು.