ದೆಹಲಿ - ದೆಹಲಿಯಲ್ಲಿ ನಡೆಯುತ್ತಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಕೇವಲ ಉತ್ಸವವಲ್ಲ, ಇದು ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಘೋಷಣೆಯಾಗಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪುನರ್ಪ್ರತಿಷ್ಠಾಪನೆಯ ನಂತರ ಕಾಲಚಕ್ರ ಬದಲಾಗುತ್ತಿರುವುದು ಮತ್ತು ಭಾರತೀಯ ಸಂಸ್ಕೃತಿಯು ಮತ್ತೆ ಉದಯವಾಗುತ್ತಿರುವುದು ಕಂಡುಬರುತ್ತಿದೆ. ದೇಶವು ಇಂದು ಸಾಂಸ್ಕೃತಿಕ ಬದಲಾವಣೆಯ ಸ್ಥಿತಿಯನ್ನು ಅನುಭವಿಸುತ್ತಿದೆ. ಸನಾತನ ಧರ್ಮವು ಯಾರದ್ದೇ ವಿರುದ್ಧವಿಲ್ಲ; ಆದರೆ ಸನಾತನ ಪ್ರವಾಹಕ್ಕೆ ಅಡ್ಡಿಪಡಿಸುವವರನ್ನು ಸಹಿಸಲಾಗುವುದಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಶ್ರೀ. ಗಜೇಂದ್ರ ಸಿಂಗ್ ಶೇಖಾವತ್ ಅವರು ದೃಢವಾಗಿ ಪ್ರತಿಪಾದಿಸಿದರು. ಅವರು ನವದೆಹಲಿಯ ಭಾರತ್ ಮಂಡಪಮ್ ನಲ್ಲಿ ನಡೆದ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದಲ್ಲಿ ಮಾತನಾಡುತ್ತಿದ್ದರು. ಮಾನ್ಯ ಶೇಖಾವತ್ ಅವರು ಮುಂದುವರಿದು, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಕಳೆದ 25 ವರ್ಷಗಳಲ್ಲಿ ಸಂಸ್ಥೆಯ ಕಾರ್ಯಗಳ ಮೂಲಕ ಕೇವಲ ಸಾಧಕರ ಆಧ್ಯಾತ್ಮಿಕ ಉನ್ನತಿಯನ್ನು ಮಾತ್ರವಲ್ಲ, ಬದಲಿಗೆ ಸಮಾಜದಲ್ಲಿ ನೈತಿಕತೆ, ರಾಷ್ಟ್ರಪ್ರಜ್ಞೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಧರ್ಮಚೇತನವನ್ನು ನಿರ್ಮಿಸಿದ್ದಾರೆ ಎಂದರು.
ಕಾಶಿ-ಮಥುರಾ ಮಾತ್ರವಲ್ಲ, ದೇಶದ ಪ್ರತಿಯೊಂದು ಮಂದಿರ ಮುಕ್ತವಾಗುವವರೆಗೆ ಹೋರಾಟದ ನಿರ್ಧಾರ ಮಾಡಿ! - ನ್ಯಾಯವಾದಿ ವಿಷ್ಣು ಶಂಕರ್ ಜೈನ್: ಅನೇಕ ರಾಜ್ಯಗಳಲ್ಲಿ ಸರಕಾರವು ಕೇವಲ ಹಿಂದೂಗಳ ದೇವಸ್ಥಾನಗಳನ್ನೇಕೆ ಸ್ವಾಧೀನಪಡಿಸಿಕೊಳ್ಳುತ್ತದೆ? ಸರ್ಕಾರಕ್ಕೆ ಮಸೀದಿಗಳು ಮತ್ತು ಚರ್ಚ್ ಗಳ ಅವ್ಯವಸ್ಥೆ ಕಾಣುವುದಿಲ್ಲವೇ?ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳು ಯಾವಾಗ ಮುಕ್ತವಾಗಲಿವೆ? ಮತ್ತು ನಾವೆಲ್ಲರೂ ಹಿಂದೂ ವಿರೋಧಿ ಕಾನೂನುಗಳನ್ನು ಕೊನೆಗೊಳಿಸುವಂತೆ ಬೇಡಿಕೆ ಇಡಬೇಕು! ಕೇವಲ ಕಾಶಿ ವಿಶ್ವನಾಥ ಮತ್ತು ಶ್ರೀಕೃಷ್ಣ ಜನ್ಮಭೂಮಿ ಮಾತ್ರವಲ್ಲ, ದೇಶದ ಅತಿಕ್ರಮಣಕ್ಕೊಳಗಾದ ಪ್ರತಿಯೊಂದು ಹಿಂದೂ ಮಂದಿರವೂ ಮುಕ್ತವಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ ಎಂಬ ನಿರ್ಧಾರವನ್ನು ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಕರೆ ನೀಡಿದರು.
ಶಂಖನಾದ ಮಹೋತ್ಸವದಿಂದ ಧರ್ಮ-ಅಧರ್ಮದ ಯುದ್ಧದಲ್ಲಿ ಧರ್ಮದ ವಿಜಯ ನಿಶ್ಚಿತ ! - ಶ್ರೀ. ಅಲೋಕ್ ಕುಮಾರ್, ವಿಹಿಂಪ:-ಧರ್ಮ-ಅಧರ್ಮದ ಯುದ್ಧದ ಸಮಯದಲ್ಲಿ ಶಂಖನಾದವನ್ನು ಮಾಡಲಾಗುತ್ತದೆ.ಭಾರತದ ರಾಜಧಾನಿಯಲ್ಲಿ ನಡೆಯುತ್ತಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಿಂದಾಗಿ ಧರ್ಮ-ಅಧರ್ಮದ ಯುದ್ಧದಲ್ಲಿ ಧರ್ಮದ ವಿಜಯ ನಿಶ್ಚಿತ ಎಂಬ ವಿಶ್ವಾಸ ಮೂಡಿತು. ದೆಹಲಿಯಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆಯಿತು. ಈ ಭಯೋತ್ಪಾದಕರು ಉನ್ನತ ಶಿಕ್ಷಣ ಪಡೆದವರಾಗಿದ್ದರೂ, ಜಿಹಾದ್ ಬಡತನ, ಅನಕ್ಷರತೆ,ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿಗಳಿಂದ ಉಂಟಾಗುವ ಹತಾಶೆಯಿಂದಗಿದೆ ಎಂಬ ಭ್ರಮೆಯು ನಾಶವಾಗಿದೆ. ಅಲ್ಪಸಂಖ್ಯಾತರಿಗೆ ನೀಡಿದ ವಿಶೇಷ ಸವಲತ್ತುಗಳ ಬಗ್ಗೆ ಪುನರ್ವಿಮರ್ಶೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಶ್ರೀ. ಅಲೋಕ್ ಕುಮಾರ್ ಹೇಳಿದರು. ಸಂಖ್ಯಾ ಜಿಹಾದ್' ಅನ್ನು ತಡೆಯುವುದು ಅತ್ಯಗತ್ಯ ! - ಡಾ. ಸುರೇಶ್ ಚವ್ಹಾಣ್ಕೆ, ಸುದರ್ಶನ್ ನ್ಯೂಸ್ ನೆಟ್ವರ್ಕ್:-ಹಿಂದೂಗಳು ಶಸ್ತ್ರಾಸ್ತ್ರಗಳ ಹೋರಾಟದಲ್ಲಿ ಸಮರ್ಥರಾಗಿದ್ದಾರೆ; ಆದರೆ ಅವರು ವೈಚಾರಿಕ ಹೋರಾಟದಲ್ಲಿ ಹಿಂದುಳಿಯುತ್ತಾರೆ. ಹಿಂದೂಗಳಿಗೆ ‘ನಾವಿಬ್ಬರು, ನಮಗಿರಬ್ಬರು ಮಕ್ಕಳು’ ಎಂಬ ಶಿಕ್ಷಣವನ್ನು ನೀಡಲಾಯಿತು ಮತ್ತು ಇಂದು ಹಿಂದೂಗಳ ಜನನ ಪ್ರಮಾಣ ದೆಹಲಿಯಲ್ಲಿ 1.1 , ಮುಂಬೈನಲ್ಲಿ 1.3 ರಷ್ಟು ದಯನೀಯ ಸ್ಥಿತಿಯಲ್ಲಿದೆ. ಅನೇಕ ದೇಶಗಳು ಜನನ ಪ್ರಮಾಣವನ್ನು ಹೆಚ್ಚಿಸುವುದರಿಂದ ಇಸ್ಲಾಮಿಕ್ ದೇಶಗಳಾಗಿವೆ, ಇನ್ನು ಕೆಲವು ದೇಶಗಳು ಒಳನುಗ್ಗುವಿಕೆಯಿಂದ ಇಸ್ಲಾಮಿಕ್ ಆಗಿವೆ. ಒಳನುಗ್ಗುವವರನ್ನು ದೇಶದಿಂದ ಹೊರಹಾಕಲು ದೇಶದಲ್ಲಿ ‘ಎನ್.ಆರ್.ಸಿ.’ (NRC) ಜಾರಿಗೊಳಿಸಬೇಕು ಎಂದು ಸುದರ್ಶನ್ ನ್ಯೂಸಿನ ಸಂಪಾದಕರಾದ ಡಾ. ಸುರೇಶ್ ಚವ್ಹಾಣ್ಕೆ ಅವರು ಪ್ರತಿಪಾದಿಸಿದರು.