ಬೆಂಗಳೂರು:-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನ ಮರದ, ರವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ತ ಗಡಿ ಕನ್ನಡಿಗರ ಪದಾಧಿಕಾರಿಗಳೊಂದಿಗೆ “ಬೆಳಗಾವಿ ಜಿಲ್ಲೆಯ ಗಡಿ ಕನ್ನಡಿಗರ ಸಮಸ್ಯೆಗಳ” ಕುರಿತು ಸಭೆಯು ಡಿಸೆಂಬರ್ 11 ರಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅನುದಾನದಲ್ಲಿ ಬೆಳಗಾವಿಯಲ್ಲಿ ನಿರ್ಮಾಣ ಮಾಡಲಾಗಿರುವ “ಕನ್ನಡ ಭವನವನ್ನು” ಖಾಸಗಿಯವರು ನಡೆಸುತ್ತಿದ್ದು, ಸದರಿ ಭವನವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಎಲ್ಲಾ ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿದವು.ಸರ್ಕಾರಿ ಅನುದಾನದಿಂದ ನಿರ್ಮಾಣವಾಗಿರುವ ಸದರಿ ಕನ್ನಡ ಭವನವು ಖಾಸಗಿ ಸಂಸ್ಥೆಯವರ ವಶದಲ್ಲಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸದರಿ ಕಟ್ಟಡವನ್ನು ಸರ್ಕಾರದ ವಶಕ್ಕೆ ಪಡೆದು, ಕನ್ನಡ ಪರ ಸಂಘಟನೆಗಳಿಗೆ ಅತೀ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಹಲವಾರು ಸಂಘಟನೆಗಳು ಮನವಿ ಮಾಡಿಕೊಂಡವು. ಸದರಿ ಕನ್ನಡ ಭವನವು ಖಾಸಗಿಯವರು ನಡೆಸುತ್ತಿರುವ ಬಗ್ಗೆ ಕೋರ್ಟ್‍ನಲ್ಲಿರುವ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸುಂತೆ ಎಲ್ಲಾ ಕನ್ನಡ ಪರ ಸಂಘಟನೆಗಳು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಕೋರಿದವು.
ಬೆಳಗಾವಿ ಜಿಲ್ಲೆಯ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಬೆಳಗಾವಿ ಗಡಿ ಭಾಗದ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚೆ
December 12, 2025
0
ಕನ್ನಡ ಪರ ಸಂಘಟನೆಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿರುವುದಿಲ್ಲ, ಎಂಬುದಾಗಿ ತಿಳಿಸುತ್ತಾ, ಸರ್ಕಾರದಿಂದ ಅನುದಾನ ಕೊಡಿಸುವಂತೆ ಕೋರಿ, ಸಭೆಗೆ ಮನವಿ ಸಲ್ಲಿದವು. ಬೆಳಗಾವಿ ಗಡಿ ತಾಲ್ಲೂಕುಗಳಾದ ನಿಪ್ಪಾಣಿ, ಖಾನಾಪುರ ಹಾಗೂ ಚಿಕ್ಕೋಡಿಯ ಕೆಲವು ಗಡಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರು ವಾಹನ ಸೌಕರ್ಯವಿಲ್ಲದೆ ಸುಮಾರು 5 ರಿಂದ 6 ಕಿಲೋಮೀಟರ್‍ಗಳಿಂದ ನಡೆದು ಶಾಲೆಗೆ ಬರುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಸದರಿ ವಿಷಯವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಲಾಗುವುದು ಎಂಬುದಾಗಿ ಮಾನ್ಯ ಅಧ್ಯಕ್ಷರು ತಿಳಿಸಿದರು.
ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ನಿಪ್ಪಾಣಿ ಗಡಿ ಭಾಗದಲ್ಲಿ ಐ.ಟಿ.ಐ. ಹಾಗೂ ಡಿಪ್ಲಮೋ ಕಾಲೇಜುಗಳು ಇಲ್ಲದಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳನ್ನು ಸ್ಥಾಪಿಸಲು ಅಲ್ಲಿನ ಮರಾಠಿಗರು ವಿರೋಧ ವ್ಯಕ್ತಪಡಿಸುತ್ತಿದ್ದು, ಸದರಿ ವಿಷಯದ ಕುರಿತು ಸರ್ಕಾರದ ಗಮನಕ್ಕೆ ತಂದು, ಸದರಿ ಪ್ರತಿಮೆಗಳನ್ನು ಸ್ಥಾಪಿಸಲು ಅನುಮತಿ ಕೊಡಿಸುವಂತೆ ಹಲವಾರು ಸಂಘಟನೆಗಳು ಮನವಿ ಮಾಡಿದವು.
ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಅಶೋಕ್ ಚಂದರಗಿ, ಸದಸ್ಯರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಹಾಗೂ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ, ಸುರೇಶ್ ಹಂಜಿ, ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮುಂತಾದವರು ಭಾಗವಹಿಸಿದ್ದರು.