ಜಯನಗರ: ದಕ್ಷಿಣ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರು, ಶಾಸಕರಾದ ಸಿ.ಕೆ.ರಾಮಮೂರ್ತಿರವರ ಹುಟ್ಟುಹಬ್ಬವನ್ನು ಸಿ.ಕೆ.ರಾಮಮೂರ್ತಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಹಕ್ಕುಪತ್ರ ವಿತರಣೆ, ರಮಣ ಮಹರ್ಷಿ ಆಶ್ರಮದಲ್ಲಿ ಬೆಡ್ ಶೀಟ್ ವಿತರಣೆ, ಕಲ್ಯಾಣ ಕಾರ್ಯಕ್ರಮ ಕಾರು, ಟೈಲರಿಂಗ್ ಯಂತ್ರ ಮತ್ತು ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಅವಧೂತ ವಿನಯ್ ಗುರೂಜೀ ರವರು ,ಶಾಸಕರಾದ ಸಿ.ಕೆ.ರಾಮಮೂರ್ತಿರವರು, ವಿತರಿಸಿದರು.ಅವಧೂತ ವಿನಯ್ ಗುರೂಜೀರವರು ಮಾತನಾಡಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ ಜನರ ಹೃದಯ ಗೆದ್ದಿದ್ದಾರೆ .ಜನರ ಹೃದಯ ಗೆಲ್ಲುವುದು ಕಷ್ಟ.ಡೊಡ್ಡವರು, ಸಾಧಕರು ನಡೆದ ಹಾದಿಯಲ್ಲಿ ಎಲ್ಲರು ಸಾಗಬೇಕು.
ಗಂಡಸರ ಪ್ರತಿಹೆಜ್ಜೆ ಯಶ್ವಸಿಯಲ್ಲಿ ಮಹಿಳೆಯ ಪ್ರೋತ್ಸಾಹ, ಸಹಕಾರ ಇರುತ್ತದೆ.ಯೋಧರು, ರೈತರು ಮತ್ತು ಪೌರ ಕಾರ್ಮಿಕರ ಋಣ ತೀರಿಸಲು ಸಾಧ್ಯವಿಲ್ಲ. ಅವರು ದೇವರ ಸಮಾನ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಾಸಕರಾದ ಸಿ.ಕೆ.ರಾಮಮೂರ್ತಿರವರು ಮಾತನಾಡಿ ಮಾಜಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಮಾಜಿ ಶಾಸಕ ವಿಜಯಕುಮಾರ್ ರವರು ನಾನು ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಮಾರ್ಗದರ್ಶನ ನೀಡಿ, ಪ್ರೋತ್ಸಾಹ ನೀಡಿದರು.ಇಂದು ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ರಕ್ತದಾನ ಶಿಬಿರ, ಹಕ್ಕುಪತ್ರ ವಿತರಣೆ, ಸ್ವಾವಲಂಭಿ ಜೀವನಕ್ಕೆ ನಿರುದ್ಯೋಗ ಯುವಕರಿಗೆ 5 ಕಾರುಗಳನ್ನು, ನೋಟ್ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.ಎಲ್ಲೆ ಇರು ಹೇಗೆ ಇರು ಜನರು ಸೇವೆ ಮಾಡು ಎಂದು ಆರ್.ಎಸ್.ಎಸ್.ಸ್ವಯಂ ಸೇವಾ ಸಂಘಟನೆ ಹೇಳಿಕೊಟ್ಟಿದೆ.ಜಯನಗರ ಕ್ಷೇತ್ರದಲ್ಲಿ ಬಡವರು, ಮಧ್ಯಮ ವರ್ಗದ ಕುಟುಂಬದ ಮಕ್ಕಳ ಶಿಕ್ಷಣ ಫೀಸು ಮತ್ತು ನೋಟ್ ಪುಸ್ತಕಗಳನ್ನು ನೀಡಿ ಅವರ ಶಿಕ್ಷಣಕ್ಕೆ ಪೋತ್ಸಾಹ ನೀಡುವುದು.
ಒಕ್ಕಲಿಗರ, ಮರಾಠ, ಸವಿತಾ ಮಡಿವಾಳ ವೀರಶೈವ ಉಪ್ಪಾರ, ಅಂಬೇಡ್ಕರ್, ವಿಶ್ವಕರ್ಮ ನಿಗಮದ ವತಿಯಿಂದ ಸಾಲ ಸೌಲಭ್ಯ ಮತ್ತು 250ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಪತ್ರ ವಿತರಣೆ ಬಿಜೆಪಿ ಪಕ್ಷದಲ್ಲಿ ನನ್ನ ಹೋರಾಟ, ಸಂಘಟನೆ ನೋಡಿ ಪಾಲಿಕೆ ಸದಸ್ಯ ಮತ್ತು ಶಾಸಕರಾಗಿ ಸೇವೆ ಮಾಡಲು ಅವಕಾಶ ನೀಡಿತು.ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮಾರ್ಗದರ್ಶನ, ನೇತೃತ್ವದಲ್ಲಿ ದಕ್ಷಿಣ ಜಿಲ್ಲಾ ಬಿಜೆಪಿಯಲ್ಲಿ ಉತ್ತಮ ಸಂಘಟನೆ ಮಾಡುತ್ತಿದ್ದೇವೆ.ಜಯನಗರ ಕ್ಷೇತ್ರದ ಜನರ ಮನೆ ಮಗನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ, ಜನರ ಪ್ರೀತಿ ವಿಶ್ವಾಸಕ್ಕೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.ಶಾಸಕರಾದ ಉದಯ್ ಗರುಡಾಚಾರ್, ಜಿಲ್ಲಾಧ್ಯಕ್ಷರುಗಳಾದ ಎಸ್.ಹರೀಶ್, ಸಪ್ತಗಿರಿಗೌಡರು, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಪಾಲಿಕೆ ಸದಸ್ಯರುಗಳಾದ ಬಿ.ಸೋಮಶೇಖರ್,ಕೆ.ಉಮೇಶ್ ಶೆಟ್ಟಿ,ರವೀಂದ್ರ, ಡಾ||ಎಸ್.ರಾಜು, ಆನಂದ್ ಹೊಸುರು, ಶ್ರೀಮತಿ ನಾಗರತ್ನ ರಾಮಮೂರ್ತಿ, ಶ್ರೀಮತಿ ಲಕ್ಷ್ಮಿನಟರಾಜ್, ಕಬ್ಬಾಳ್ ಉಮೇಶ್,ಲಕ್ಷ್ಮಿಕಾಂತ್, ಶ್ರೀಮತಿ ಮಾಲತಿ ಸೋಮಶೇಖರ್, ದೇವದಾಸ್,ಗೋವಿಂದನಾಯ್ಡು, ವೇದವ್ಯಾಸಭಟ್, ಗೋಪಿನಾಥ್ ರೆಡ್ಡಿ, ಚನ್ನಗಿರಿಯಪ್ಪರವರು ಕನ್ನಡ ಸಂಘ, ಸಂಸ್ಥೆಗಳು, ಬಿಜೆಪಿ ಮುಖಂಡರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು