ಶ್ರೀ ಜಯರಾಮ ಸೇವಾಮಂಡಳಿ ಬೆಂಗಳೂರು ನಗರದ ಜಯನಗರ 8ನೇ ಬಡಾವಣೆಯಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ- ಧಾರ್ಮಿಕ -ಸಾಮಾಜಿಕ ಚಟುವಟಿಕೆಗಳ ಅನನ್ಯತೆಯಿಂದ ತನ್ನದೇ ಆದ ಅಸ್ಮಿತೆಯನ್ನು ಗಳಿಸಿಕೊಂಡಿದೆ. ಮAಡಳಿಯ ಆರು ದಶಕಗಳ ಅವಧಿಯಲ್ಲಿ ಸಮಾಜಮುಖಿ ಚಿಂತನೆಗಳಿoದ ಧೃಡವಾದ ನೆಲೆಗಟ್ಠನ್ನು ರೂಪಿಸಿದೆ.ವಜ್ರಮಹೋತ್ಸವದ ದಿಕ್ಕಿನಲ್ಲಿ ಸಾಗುವ ತನ್ನ ಹಾದಿಯನ್ನು ಮತ್ತಷ್ಟು ರಚನಾತ್ಮಕ ಮೌಲಿಕವೆನಿಸುವ ಹಿನ್ನೆಲೆಯಲ್ಲಿ ಹಲವು ಯೋಜನೆಗಳ ಚಾಲನೆಗೆ ಮುಂದಾಗಿದೆ.
ದಿನAಕ 15.12.2025 ದಿಂದ 19.12.2025 ವರೆU ೆ ಖ್ಯಾತ ವಿದ್ವಾಂಸÀ ಡಾ|| ಗುರುರಾಜ ಕರ್ಜಗಿ ಅವರಿಂದ ಸುಂದರ ಕಾಂಡದ ಬಗ್ಗೆ ಉಪನ್ಯಾಸ ರಾಮಾಯಣ ಕೃತಿಯ ಹೃದಯಭಾಗ, ಸರ್ವಾದರಣೀಯ ಹಾಗೂ ಪಾರಾಯಣ ಕೃತಿ ಸುಂದರಕಾAಡ. ಕನ್ನಡ ನಾಡಿನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಹಿರಿಯ ಚಿಂತಕರಾದ ಡಾ.ಗುರುರಾಜ ಕರ್ಜಗಿಯವರು ಐದು ದಿನಗಳ ಕಾಲ ಸುಂದರಕಾAಡದ ಉಪನ್ಯಾಸ ಮಾಡಲಿದ್ದಾರೆ. ನಂತರದ ದಿನಗಳಲ್ಲಿ ಈ ಉಪನ್ಯಾಸಮಾಲಿಕೆಯ ದ್ರಣರೂಪವೂ ಸಿದ್ದವಾಗಲಿದೆ. ಡಿ.15 ಸೋಮವಾರ ಸಂಜೆ ಅರು ಗಂಟೆಗೆ ಅಧ್ಯಾತ್ಮ ಚಿಂತಕಿ ಶ್ರೀಮತಿ ವೀಣಾ ನಿತ್ಯಾನಂದ ರವರು ಮಾಲಿಕೆ ಉದ್ಘಾಟಿಸಲಿದ್ದಾರೆ ಎಂದು ದೇವಾಲಯದ ಅಧ್ಯಕ್ಷ ಎಸ್.ಕೆ. ಗೋಪಾಲಕೃಷ್ಣ ಮತ್ತು ಕಾರ್ಯದರ್ಶಿ ಡಾ.ಎಚ್ .ಸುಂದರಮೂರ್ತಿ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಹಿತ್ಯ ಪ್ರಸಾರ ಪ್ರಕಟಣೆ ಹಾಗೂ ರಾಮಾಯಣ ಆಧರಿತ ವ್ಯಕ್ತಿ ಮತ್ತು ಪ್ರಸಂಗಗಳ ವಸ್ತುವನ್ನು ಒಳಗೊಂಡ ಪುಸ್ತಕಗಳ ಪ್ರಕಟಣೆ ಹಾಗೂ ಮುದ್ರಣ ಮಂಡಲಿಯ ಚಟುವಟಿಕೆಗಳ ಪ್ರಮುಖ ಭಾಗವಾಗಿದೆ. ಐದು ದಶಕಗಳ ಕಾಲಘಟ್ಟದಲ್ಲಿ ಮಂಡಳಿಯು ವಾಚನ, ಚಿಂತನ ಹಾಗೂ ಸಂಗ್ರಹಯೋಗ್ಯ ಕೃತಿಗಳನ್ನು ಮುದ್ರಿಸಿ ಪ್ರಚಾರಕ್ಕೆ ಪ್ರಸಾರಕ್ಕೆ ತಂದಿದೆ. ಈ ಕೃತಿಗಳು ಅಕ್ಷರಲೋಕಕ್ಕೆ ಸಾಹಿತ್ಯಪ್ರಿಯರಿಗೆ ಶಾಶ್ವತವಾದ ಕೊಡುಗೆಗಳಾಗಿದೆ. ಸಚಿತ್ರ ರಾಮಾಯಣ , ಶ್ರೀರಾಮ ಸಂಭವ, ಶ್ರೀರಾಮ ರಜತಾದ್ರಿ, ಬಾಳಿಗೊಂದು ಬೆಳಕು – ಇವು ಮಂಡಳಿಯ ಹೆಮ್ಮೆಯ ಪ್ರಕಟಣೆಗಳು.