ದಿನಾಂಕ: 03-01-2026 ರಂದು ಶನಿವಾರ ಪೂರ್ವಾಹ್ನ 11-00 ಗಂಟೆಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ನಿರ್ಗತಿಕ ಹಾಗೂ ಬಡ ಬೆಚ್ಚನೆಯ ಹೊದಿಕೆಗಳನ್ನು ಬಾಣಂತಿಯರಿಗೆ ವಿತರಿಸಲಾಯಿತು.

varthajala
0

 ಸೇವಾ ಚಟುವಟಿಕೆಯನ್ನು ಅಧ್ಯಕ್ಷರಾದ ಶ್ರೀ ಕೆ.ಬಿ. ಬೆಟ್ಟೇಗೌಡರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಎಮ್. ಕೃಷ್ಣಪ್ಪ ನವರು, ಖಜಾಂಚಿಯವರಾದ ಶ್ರೀ ಎ.ಆರ್. ಬಡಿಗೇರ್ ರವರು ಹಾಗೂ ಕಾರ್ಯಕಾರೀ ಸಮಿತಿ ಸದಸ್ಯರಾದ ಶ್ರೀ ವಿ. ರಾಮಯ್ಯನವರು ಮತ್ತು ನಿಕಟಪೂರ್ವ ಕಾರ್ಯದರ್ಶಿಯವರಾದ ಶ್ರೀ ಎಮ್. ಶಂಕರಪ್ಪ ನವರು ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು. 

ಇದೇ ಕಾರ್ಯಕ್ರಮಕ್ಕೆ ವಿಜಯಗರ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳೂ ಕೈಜೋಡಿಸಿದ್ದರು. 

ಈ ಸಂದರ್ಭದಲ್ಲಿ ವಾಣಿವಿಲಾಸ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರವರಾದ ಡಾ|| ಸವಿತ, ಆರ್.ಎಂ.ಓ. ಡಾ|| ಸಂತೋಷ್ ಹಾಗೂ ಡಾ|| ರವಿ ರವರುಗಳ ಮಾರ್ಗದರ್ಶನದಲ್ಲಿ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತೆಗೆದ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಲಾಗಿದೆ.

Post a Comment

0Comments

Post a Comment (0)