ನಾಳೆ ಮಲೆನಾಡಿಗರ ಕ್ರೀಡಾಕೂಟ ಆಯೋಜನೆ

varthajala
0

 ಬೆಂಗಳೂರು : ಮಲೆನಾಡು ಮಿತ್ರವೃಂದದ ವತಿಯಿಂದ  ಜಾಲಹಳ್ಳಿಯ ಎಚ್ಎಂಟಿ ಆಟದ ಮೈದಾನಲ್ಲಿ ನಾಳೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಲೆನಾಡಿಗರ ಕ್ರೀಡಾಕೂಟವನ್ನು ಆಯೋಜಿಸಿದೆ. ಪ್ರತಿ ವರ್ಷವು ಮಲೆನಾಡು ಮಿತ್ರವೃಂದದಿಂದ  ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದ್ದು ಈ ಬಾರಿಯ 17ನೇ ವರ್ಷ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಕಡುಬು ತಿನ್ನುವ  ಹಾಗೂ ಭುಜಬಲದ ಪರಾಕ್ರಮ ಕ್ರೀಡೆಗಗಳು ಈ ಬಾರಿಯ ವಿಶೇಷವಾಗಿದೆ. ಕ್ರೀಡಾಕೂಟದಲ್ಲಿ ಏಳು ವಿಭಾಗಗಳಾಗಿ ವಿಂಗಡಿಸಲಾಗಿದ್ದು, 5 ವರ್ಷದೊಳಗಿನ ವಿಭಾಗದಲ್ಲಿ  ಬಾಲಕಿಯರಿಗೆ 50 ಮೀಟರ್ ಓಟ, ಪಿಕ್ ದ ಬಾಲ್, ಬ್ಯಾಲೆನ್ಸ್ ರೇಸ್ ಹಾಗೂ ಗಂಡು ಮಕ್ಕಳಿಗೆ  50 ಮೀಟರ್ ಓಟ, ರೋಲ್ ದಿ ಬಾಲ್  ಮತ್ತು ಕಪ್ಪೆ ಜಿಗಿತ ಸ್ಪರ್ಧೆಗಳಿರುತ್ತವೆ. 

5ರಿಂದ 8 ವರ್ಷದ ಮಕ್ಕಳ ವಿಭಾಗದಲ್ಲಿ  ಬಾಲಕಿಯರಿಗೆ 50 ಮೀಟರ್ ರೇಸ್, ಎಮಿಂಗ್ ಗೇಮ್, ಬಾಲ್ ರೋಲಿಂಗ್ ಗೇಮ್ (ಹ್ಯಾಂಡ್) ಹಾಗೂ ಬಾಲಕರಿಗೆ 50 ಮೀಟರ್ ರೇಸ್, ಬಸ್ಟಿಂಗ್ ದ ಬಲೂನ್ ಇನ್ ದ ಸರ್ಕಲ್ ಹಾಗೂ ಕಾಂಗರೂ ರೇಸ್ ಸ್ಪರ್ಧೆಗಳಿರುತ್ತವೆ. 
 9ರಿಂದ  12 ವರ್ಷ ವಿಭಾಗದಲ್ಲಿ ಬಾಲಕಿಯರಿಗೆ 75 ಮೀಟರ್ ಓಟದ ಸ್ಪರ್ಧೆ, ಹೂಪ್ಸ್ ಗೇಮ್, ಡೇಂಜರ್ ಜೋನ್ ಹಾಗೂ ಬಾಲಕರಿಗೆ 75 ಮೀಟರ್ ಓಟ,  ಬ್ಯಾಸ್ಕೆಟಿಗ್ ದ ಬಾಲ್ ಮತ್ತು ಲಗೋರಿ ಆಟಗಳಿರುತ್ತವೆ. 
13ರಿಂದ 17 ವರ್ಷದ ವಿಭಾಗದಲ್ಲಿ  ಬಾಲಕಿಯರಿಗೆ  75  ಮೀಟರ್ ಓಟ, ಆನ್ ದ ಸ್ಪಾಟ್ ಸ್ಕಿಪ್ಪಿಂಗ್, ಬಾಂಬಿಂಗ್ ದ  ಸಿಟಿ ಸ್ಪರ್ಧೆಗಳಿದ್ದು,  ಬಾಲಕರಿಗೆ 75 ಮೀಟರ್ ಓಟದ ಸ್ಪರ್ಧೆ, ಏಮಿಂಗ್ ವಿಕೇಟ್ ಹಾಗೂ  ಗೋಣಿಚೀಲ ಓಟದ ಸ್ಪರ್ಧೆಗಳಿರುತ್ತವೆ.   
18ರಿಂದ 23 ವರ್ಷದವರ ವಿಭಾಗದಲ್ಲಿ  ಬಾಲಕಿಯರಿಗೆ ಥ್ರೋಬಾಲ್ ಎಸೆತ, ಸ್ಕಿಪ್ಪಿಂಗ್ ರೇಸ್, ಬಾಲಕರಿಗೆ 100 ಮೀಟರ್ ಓಟ ಹಾಗೂ ಗುಂಡು ಎಸೆತ ಸ್ಪರ್ಧೆಗಳಿರುತ್ತವೆ. 
24ರಿಂದ 34 ವರ್ಷದವರ ವಿಭಾಗದಲ್ಲಿ ಮಹಿಳೆಯರಿಗೆ  ಲೆಮನ್ ಇನ್ ದ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ಗುಂಡು ಎಸೆತ, ಒಂಟಿ ಕಾಲಿನ ಓಟದ ಸ್ಪರ್ಧೆ ಇರುತ್ತದೆ. 
35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸರ್ಕಲ್ ಗೇಮ್,  ಮ್ಯೂಸಿಕಲ್ ಚೇರ್ ಹಾಗೂ ಪುರುಷರಿಗೆ  100  ಮೀಟರ್ ಓಟ, ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಗಳಿವೆ.
ಮಹಿಳೆ-ಪುರುಷರ ಇಬ್ಬರಿಗೂ  ಹಗ್ಗಜಗ್ಗಾಟ, ವಾಲಿಬಲ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರಾದ ಸಂದೇಶಗೌಡ ಹಂದಿಗೋಡು, ಉಪಾಧ್ಯಕ್ಷರಾದ ವನಮಾಲಯ್ಯ ಇಳಿಮನೆ, ಕಾರ್ಯದರ್ಶಿ ನಾಗೇಶ್ ಕೇಳೂರು, ಸಹಕಾರ್ಯದರ್ಶಿ ರಾಘವೇಂದ್ರ ಸಿಸ್ಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)