ಜ. 11 ರಂದು ಬೃಹತ್ ಉಚಿತ ಆರೋಗ್ಯ ಶಿಬಿರ: ಸಚಿವ ದಿನೇಶ್ ಗುಂಡೂರಾವ್ ಚಾಲನೆ

varthajala
0

ಬೆಂಗಳೂರುಜನವರಿ 11ರಂದು ಜಯನಗರದ ಚಾಮರಾಜು ಕಲ್ಯಾಣ ಮಂಟಪದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟಿಡ್ ನಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಶಿಬಿರ ಉದ್ಘಾಟಿಸಲಿದ್ದಾರೆ ಎಂದು ಬ್ಯಾಂಕ್‌  ಅಧ್ಯಕ್ಷ ಡಿ.ಆರ್.ವಿಜಯಸಾರಥಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ 9ಶಾಖೆಗಳನ್ನು ಹೊಂದಿದ್ದು, ಸುಮಾರು 35ಸಾವಿರ ಸದಸ್ಯರು ಮತ್ತವರ ಕುಟುಂಬ ಸದಸ್ಯರು, ಬ್ಯಾಂಕ್‌ ಸಿಬ್ಬಂದಿಗಾಗಿ ಬೃಹತ್‌ ಆರೋಗ್ಯ ಶಿಬಿರ ರ‍್ಪಡಿಸಲಾಗಿದೆ ಎಂದರು ಜನವರಿ 11ರ ಭಾನುವಾರ ಚಾಮರಾಜ ಕಲ್ಯಾಣ ಮಂಟಪ ಜಯನಗರದಲ್ಲಿ ಬೆಳಗ್ಗೆ 9ಗಂಟೆಗೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯರಾದ ಡಾ.ಸಿ.ಎನ್.ಮಂಜುನಾಥ್, ಚಿಕ್ಕಪೇಟೆ ಶಾಸಕ ಉದಯಗರುಡಾಚಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಹೃದಯ, ಮೂತ್ರಪಿಂಡ, ನರರೋಗ (ನ್ಯೂರಾಲಜಿ), ಕಣ್ಣು,ಮೂಗು-ಕಿವಿ-ಗಂಟಲು (ಇ.ಎನ್.ಟಿ), ಮಕ್ಕಳ ವೈದ್ಯಕೀಯ (ಪೀಡಿಯಾಟ್ರಿಕ್ಸ್) ಮತ್ತು ಸಾಮಾನ್ಯ ತಪಾಸಣೆ ನಡೆಯಲಿದೆ ಎಂದು ವಿಜಯಸಾರಥಿ ತಿಳಿಸಿದರು.


Post a Comment

0Comments

Post a Comment (0)