ಉಸ್ಮಾನಿಯಾ ವಿಶ್ವವಿದ್ಯಾಲಯದ ಡೀನ್ ಆಗಿ ಕನ್ನಡಿಗ ಪ್ರೋ ಲಿಂಗಪ್ಪ ನೇಮಕ

varthajala
0

 ಹೈದರಾಬಾದ್ : ನೂರು ವರ್ಷಗಳ ಕಾಲ ಇತಿಹಾಸ ಇರುವ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಾದ ಕಲಬುರಗಿ ಜಿಲ್ಲೆಯ ಸುರಪುರದ ದೇವರಗೊನಾಳದ ನಿವಾಸಿಯಾಗಿರುವ  ಪ್ರೋ ಲಿಂಗಪ್ಪ ಗೊನಾಳ ಅವರ ಸೇವೆಯನ್ನು ಪರಿಗಣಿಸಿದ ಉಪಕುಲಪತಿ ಕನ್ನಡ ವಿಭಾಗದ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಆರ್ಟ್ಸ್ ಕಾಲೇಜನ ಡೀನ್ ಆಗಿ ನೇಮಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. 

ಇಂದು ವಿಶ್ವವಿದ್ಯಾಲಯದಲ್ಲಿ ಪ್ರೋ ಲಿಂಗಪ್ಪ ಗೊನಾಳ ಅವರಿಗೆ ಹೈದರಾಬಾದ್ ನ ಎಲ್ಲಾ ಕನ್ನಡಿಗರ ಪರವಾಗಿ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ನಿಯೋಗವನ್ನು ಅವರಿಗೆ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷ ಧರ್ಮೇಂದ್ರ ಪೂಜಾರಿ. ಉಪಾಧ್ಯಕ್ಷ ಬಸವರಾಜ ಹಂಜನಾಳೆ. ಕೀರ್ತಿ ಕುಮಾರ ಮಾನ್ವಿಕರ. ಪ್ರಭು ಪೂಜಾರಿ. ಅಮರನಾಥ ಹಿರೋಡೆ. ರಾಜಕುಮಾರ ಮನ್ನಳಿ. ಜಗನಾಥ ತೊಂಡಾರೆ. ಮಾರುತಿ ಮೇತ್ರೆ. ಪ್ರೋ ಲಿಂಗಪ್ಪ ಗೋನಾಳ ಅವರಿಗೆ ಕನ್ನಡ ಶ್ಯಾಲು ಹೊದಿರಿ. ಕನ್ನಡ ಪುಸ್ತಕವನ್ನು ನೀಡಿ ಶುಭ ಹಾರೈಸಿದರು.


Post a Comment

0Comments

Post a Comment (0)