ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ

varthajala
0

 ಬೆಂಗಳೂರು : ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ 2025 ರ ಅಕ್ಟೋಬರ್ 31 ರಿಂದ ಅಕ್ಟೋಬರ್ 2026 ರವರೆಗೆ ಒಂದು ವರ್ಷ ಕಾಲ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳು/ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಭಾರತ ಸರ್ಕಾರದ ಉಪ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮುಖ್ಯವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಸವಿ ನೆನಪಿನಲ್ಲಿ ಸಮಾಜದ ವಿವಿಧ  ವರ್ಗಗಳ ರೈತರು, ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಎಲ್ಲಾ ರೀತಿಯ ಜನರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. 

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕತಾ ದಿವಸ್ ಆಚರಣೆ, ಪ್ರತಿಜ್ಞೆ ಸ್ವೀಕಾರ ಸಮಾರಂಭವನ್ನು ಆಯೋಜಿಸುವುದು ಸೇರಿದಂತೆ ಏಕತೆ, ಸಮಗ್ರತೆ ಮತ್ತು ಭದ್ರತೆಯ ಭಾವನೆಗಳನ್ನು ಹೆಚ್ಚಿಸಲು ರಾಜ್ಯ ಪೆÇಲೀಸರು ಮತ್ತು ಇತರ ಸಮವಸ್ತ್ರಧಾರಿ ಪಡೆಗಳು ಸಾಧ್ಯವಾದಲ್ಲೆಲ್ಲಾ ಪಥಸಂಚಲನವನ್ನು ಆಯೋಜಿಸಲು ತಿಳಿಸಲಾಗಿದೆ.  ಒಂದು ವರ್ಷಗಳ ಕಾಲ ಪ್ರತಿ ಮಾಹೆಯಲ್ಲಿ ಹಮ್ಮಿಕೊಳ್ಳಬಹುದಾದ 12 ತಿಂಗಳುಗಳ ವಿವಿಧ ಚಟುವಟಿಕೆಗಳನ್ನು ವಿವರವಾಗಿ ಪತ್ರದಲ್ಲಿ ತಿಳಿಸಲಾಗಿದೆ.   ಅಕ್ಟೋಬರ್ 2025 ರಿಂದ ಅಕ್ಟೋಬರ್ 2026 ರವರೆಗಿನ ಅವಧಿಯಲ್ಲಿ ನಡೆಸಬೇಕಾದ ಚಟುವಟಿಕೆಗಳು/ಕಾರ್ಯಕ್ರಮಗಳು: 2025 ರ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾದ ಚಟುವಟಿಕೆಗಳು/ಕಾರ್ಯಕ್ರಮಗಳು ಎಲ್ಲಾ ಪೆÇಲೀಸ್ ಠಾಣೆಗಳಲ್ಲಿ ಉದ್ಘಾಟನಾ ಸಮಾರಂಭ; ಏಕತಾ ದಿವಸ್ ಪ್ರತಿಜ್ಞೆ ಸ್ವೀಕಾರ ಸಮಾರಂಭ; ಶಾಲೆಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಸರ್ದಾರ್ ಪಟೇಲ್ ಛಾಯಾಚಿತ್ರ ಪ್ರದರ್ಶನಗಳು, ಗಿಡ ನೆಡುವಿಕೆ ("ಏಕತಾ ವೃಕ್ಷ" ಅಭಿಯಾನ) ಹಮ್ಮಿಕೊಳ್ಳುವುದು. 

2025ರ ನವೆಂಬರ್ ನಲ್ಲಿ  ಉಪವಿಭಾಗ ಮಟ್ಟದಲ್ಲಿ ಶಾಲೆಗಳಲ್ಲಿ ಪ್ರಬಂಧ, ಚಿತ್ರಕಲೆ ಮತ್ತು ಚರ್ಚಾ ಸ್ಪರ್ಧೆಗಳು; ಸರ್ದಾರ್ ಪಟೇಲ್ ಅವರ ಜೀವನದ ಕುರಿತು ರಾತ್ರಿ ವೇಳೆ ಜಾನಪದ ನಾಟಕಗಳು; ಬ್ಲಾಕ್ ಮಟ್ಟದಲ್ಲಿ ಕಬಡ್ಡಿ, ಏಕತಾ ಕ್ರೀಡಾ ಪಂದ್ಯಾವಳಿಗಳು ಕುಸ್ತಿ,  2025 ರ ಡಿಸೆಂಬರ್‍ನಲ್ಲಿ ಉಪ ವಿಭಾಗ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆಗಳು; ಗ್ರಾಮೀಣ ಯುವ ಏಕತಾ ಶಿಬಿರಗಳು; ಮಾರುಕಟ್ಟೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸುವುದು. 
2026 ರ ಜನವರಿಯಲ್ಲಿ ಉಪ ವಿಭಾಗ ಮಟ್ಟದಲ್ಲಿ ಜಿಲ್ಲೆ ಬ್ಲಾಕ್/ಜಿಲ್ಲಾ ಮಟ್ಟದಲ್ಲಿ ಸರ್ದಾರ್ ಪಟೇಲ್ ಅವರ ಹೆಸರಿನಲ್ಲಿ ಕೃಷಿ ಸುಧಾರಣೆಗಳ ಕುರಿತು ರೈತ ಸಮ್ಮೇಳನ; ಜಿಲ್ಲೆಗಳಲ್ಲಿ ಸರ್ದಾರ್ ಪಟೇಲ್ ಅವರ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವ ಮೆರವಣಿಗೆ.  2026ರ ಫೆಬ್ರವರಿಯಲ್ಲಿ ಉಪ ವಿಭಾಗ ಮಟ್ಟದಲ್ಲಿ ಜಿಲ್ಲೆ ಬ್ಲಾಕ್/ಜಿಲ್ಲಾ ರಸಪ್ರಶ್ನೆ ಸ್ಪರ್ಧೆಗಳು; ಜಿಲ್ಲಾ ಗ್ರಂಥಾಲಯಗಳಲ್ಲಿ ಛಾಯಾಚಿತ್ರ ಪ್ರದರ್ಶನಗಳು; ಪರಂಪರೆಯ ತಾಣಗಳ ಸ್ವಚ್ಛತಾ ಅಭಿಯಾನಗಳು. 2026 ರ ಮಾರ್ಚ್‍ನಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಕ್ಲೋಥಾನ್‍ಗಳು ಮತ್ತು ಮ್ಯಾರಥಾನ್‍ಗಳು; ವಿಶ್ವವಿದ್ಯಾಲಯಗಳಲ್ಲಿ ಸರ್ದಾರ್ ಪಟೇಲ್ ಅವರ ಕುರಿತು ಉಪನ್ಯಾಸ ಸರಣಿ ಆಯೋಜನೆ, 2026 ರ ಏಪ್ರಿಲ್ ನಲ್ಲಿ ರಾಜ್ಯ ಮಟ್ಟದಲ್ಲಿ "ಸರ್ದಾರ್ ಪಟೇಲ್ ಮತ್ತು ಭಾರತದ ಏಕೀಕರಣ" ವಿಷಯದ ಕುರಿತು ಜಾನಪದ ತಂಡಗಳೊಂದಿಗೆ ಸಾಂಸ್ಕøತಿಕ ಉತ್ಸವ, ಏಕತಾ ಗೀತೆ ಸ್ಪರ್ಧೆಗಳನ್ನು ಆಯೋಜಿಸುವುದು. 2026 ರ ಮೇ ತಿಂಗಳಿನಲ್ಲಿ ರಾಜ್ಯ ಮಟ್ಟದಲ್ಲಿ ಶಾಲಾ ಇತಿಹಾಸ ಮೇಳಗಳು; ಏಕತಾ ಪ್ರತಿಮೆಯ ಮತ್ತು ಡಿಜಿಟಲ್ ಪ್ರವಾಸಗಳು. 2026 ರ ಜೂನ್‍ನಲ್ಲಿ ರಾಜ್ಯ ಮತ್ತು ಅಂತರ-ಜಿಲ್ಲಾ ಮಟ್ಟದಲ್ಲಿ ಏಕತಾ ಕ್ರೀಡಾಕೂಟಗಳು; ರೈತರು ಮತ್ತು ಕುಶಲಕರ್ಮಿಗಳ ಪ್ರದರ್ಶನಗಳು. 2026 ರ ಜುಲೈನಲ್ಲಿ  ರಾಜ್ಯ/ರಾಷ್ಟ್ರೀಯ ಮಟ್ಟದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆಯಡಿಯಲ್ಲಿ ಅಂತರ-ರಾಜ್ಯ ವಿದ್ಯಾರ್ಥಿ ವಿನಿಮಯ ಶಿಬಿರಗಳ ಆಯೋಜಿಸುವುದು.  
2026ರ ಆಗಸ್ಟ್‍ನಲ್ಲಿ  ರಾಜ್ಯ/ರಾಷ್ಟ್ರೀಯ ಸ್ವಾತಂತ್ರ್ಯ ದಿನಾಚರಣೆಯ ಏಕತಾ ಪ್ರತಿಜ್ಞೆ: ಸ್ವಾತಂತ್ರ್ಯ ಹೋರಾಟದ ಪುನರ್ ನಿರ್ಮಾಣಗಳು; ಸರ್ದಾರ್ ಪಟೇಲ್ ಅವರ ಪಾತ್ರದ ಕುರಿತು ವಿಶೇಷ ರೇಡಿಯೋ ಭಾಷಣಗಳು. 2026 ರ ಸೆಪ್ಟೆಂಬರ್‍ನಲ್ಲಿ ರಾಜ್ಯ ಮಟ್ಟದಲ್ಲಿ "ನಮ್ಮ ರಾಜ್ಯದಲ್ಲಿ ಪಟೇಲ್" ವಿಷಯದ ಕುರಿತು ಶಾಲಾ ಮಕ್ಕಳಿಂದ ಸಂಶೋಧನಾ ಕಿರುಪುಸ್ತಕಗಳ ಪ್ರಕಟಣೆ ಮತ್ತು ಬಿಡುಗಡೆ. 2026 ರ ಅಕ್ಟೋಬರ್‍ನಲ್ಲಿ  ರಾಜ್ಯ/ರಾಷ್ಟ್ರೀಯ ರಾಜ್ಯ ಮಟ್ಟದ ಏಕತಾ ಮೆರವಣಿಗೆಗಳು; ಏಕೀಕರಣದ ವಿಷಯದ ಮೇಲೆ ಸಾಂಸ್ಕøತಿಕÀ ಪ್ರದರ್ಶನಗಳನ್ನು ಹಮ್ಮಿಕೊಳ್ಳುವಂತೆ ಎಂದು ಭಾರತ ಸರ್ಕಾರದ ಉಪ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)