ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2020-20ನೇ ಸಾಲಿನ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ./ ಬಿ.ಬಿ.ಎ./ ಬಿ.ಸಿ.ಎ./ ಬಿ.ಎಸ್.ಡಬ್ಲ್ಯೂ, ಬಿ.ಲಿಬ್.ಐಎಸ್ಸಿ/ ಬಿ.ಎಸ್.ಡಬ್ಲ್ಯೂ, ಸ್ನಾತಕೋತ್ತರ ಪಿಜಿ ಸರ್ಟಿಫಿಕೇಟ್/ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಸರ್ಟಿಫಿಕೇಟ್ ಶಿಕ್ಷಣ ಕ್ರಮಗಳಿಗೆ ಕ.ರಾ.ಮು.ವಿ ಬೆಂಗಳೂರು ಪ್ರಾದೇಶಿಕ ಕೇಂದ್ರ – 06 ರಲ್ಲಿ ಜನವರಿ 9 ರಿಂದ ಪ್ರವೇಶಾತಿ ಆರಂಭವಾಗಿದೆ.
ವಿಶ್ವವಿದ್ಯಾನಿಲಯದ ಅಂತರ್ಜಾಲ www.ksoumysuru.ac.in ನಲ್ಲಿ ಲಭ್ಯವಿರುವ ವಿವರಣಾಪುಸ್ತಕದಲ್ಲಿ ಎಲ್ಲಾ ವಿವರಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಅದರನ್ವಯ ಅರ್ಹ ಶಿಕ್ಷಣ ಕ್ರಮಗಳಿಗೆ ವಿ.ವಿಯ ವೆಬ್‍ಸೈಟ್ ನಲ್ಲಿ ಲಭ್ಯವಿರುವ ಆನ್‍ಲೈನ್ ಅಡ್ಮಿಷನ್ ಪೋರ್ಟಲ್ ಮೂಲಕ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್/ ಮಾಜಿ ಸೈನಿಕ ವಿದ್ಯಾರ್ಥಿಗಳು, ಆಟೋ / ಕ್ಯಾಬ್ ಡ್ರೈವರ್ಸ್ ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸೌಲಭ್ಯ ಇರುತ್ತದೆ. ಕೋವಿಡ್ ನಿಂದಾಗಿ ಮೃತರಾದ ಮೋಷಕರ ಮಕ್ಕಳಿಗೆ ದೃಷ್ಟಿಹೀನ ವಿದ್ಯಾರ್ಥಿಗಳಿಗೆ (ಬಿ.ಎಡ್ ಮತ್ತು ಎಂ.ಬಿ.ಎ ಕೋರ್ಸ್ ಹೊರತು ಪಡಿಸಿ) ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರಲಿದೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಜಾಲತಾಣ : www.ksoumysuru.ac.in ಅಥವಾ ksou Admission portal ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಪರಿಶೀಲಿಸಿಕೊಂಡು ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪಾದೇಶಿಕ ಕೇಂದ್ರ-06, ನಂ.4 & 5, 1ನೇ
ಮಹಡಿ, ಶ್ರೀ ಲಕ್ಷ್ಮಿ ಕಾಲೇಜ್ ಆಫ್ ಸೈನ್ಸ್ & ಮ್ಯಾನೇಜ್‍ಮೆಂಟ್ ಆವರಣ. ಶ್ರೀಗಂಧಕಾವಲ್, ಮಾಗಡಿ ಮುಖ್ಯ ರಸ್ತೆ, ಸುಂಕದಕಟ್ಟೆ, ಬೆಂಗಳೂರು-560091 ದೂರವಾಣಿ ಸಂಖ್ಯೆ:- 9632332265, 9741197921 ಮತ್ತು ಇ-ಮೇಲ್ ksoubengalururc06@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ. ಶಶಿಕಲಾ ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.