ವಿದ್ಯಾರ್ಥಿ ಜಾನಪದ ಲೋಕೋತ್ಸವ – 2026 ರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ

varthajala
0

 ಬೆಂಗಳೂರು : ಕರ್ನಾಟಕ ಜಾನಪದ ಪರಿಷತ್ತು ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, 1994ರಿಂದಲೂ ಪ್ರತಿ ವರ್ಷ ಜಾನಪದ ಲೋಕದಲ್ಲಿ ‘ಜಾನಪದ ಲೋಕೋತ್ಸವ' ವನ್ನು ಆಚರಿಸುತ್ತಾ ಬಂದಿದೆ. ಆದರೆ ಈ ವರ್ಷ ಫೆಬ್ರವರಿ 07 ಮತ್ತು 08 ರಂದು  ಜಾನಪದ ಲೋಕೋತ್ಸವ ವನ್ನು "ವಿದ್ಯಾರ್ಥಿ ಗಳಿಗಾಗಿ ಆಯೋಜಿಸುತ್ತಿದೆ. ನಾಡಿನ ವಿವಿಧ ಶಾಲಾ-ಕಾಲೇಜುಗಳಲ್ಲಿನ 8ನೇ ತರಗತಿಯಿಂದ ಆರಂಭವಾಗಿ ವಿಶ್ವವಿದ್ಯಾಲಯಗಳವರೆಗಿನ ವಿದ್ಯಾರ್ಥಿಗಳು ಯಾವುದಾದರೊಂದು ಜನಪದ ಕಲೆಯಲ್ಲಿ, ನೃತ್ಯ ರೂಪಕದಲ್ಲಿ ಈಗಾಗಲೇ ತರಬೇತಿ ಪಡೆದಿರುವ ವಿದ್ಯಾರ್ಥಿ ತಂಡಗಳಿದ್ದಲ್ಲಿ ತಮ್ಮ ಶಾಲಾ-ಕಾಲೇಜು ಮುಖ್ಯಸ್ಥರ ಅನುಮತಿ ಪತ್ರ ಪಡೆದು ಭಾಗವಹಿಸಬಹುದಾಗಿದೆ. ಆಯ್ಕೆ ಆದ ವಿದ್ಯಾರ್ಥಿಗಳ ತಂಡಗಳ ಪ್ರದರ್ಶನಕ್ಕೆ ಸೂಕ್ತ ಸಂಭಾವನೆ ನೀಡುವ ಜೊತೆಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಜಾನಪದ ಲೋಕದಿಂದ ಪ್ರಮಾಣ ಪತ್ರ ನೀಡಲಾಗುವುದು. 

ಈ ‘ವಿದ್ಯಾರ್ಥಿ ಜಾನಪದ ಲೋಕೋತ್ಸ’ ದಲ್ಲಿ ಭಾಗವಹಿಸಲು ಆಸಕ್ತ ಇರುವ ವಿದ್ಯಾರ್ಥಿಗಳು ತಮ್ಮ ಕಲಾ ಪ್ರದರ್ಶನದ ಯು-ಟ್ಯೂಬ್ ಲಿಂಕ್ ಅನ್ನು ಮತ್ತು ಭಾಗವಹಿಸುವ ಬಗ್ಗೆ ಮನವಿಯನ್ನು 2026 ರ ಜನವರಿ 10 ರ ಒಳಗಾಗಿ  ಕರ್ನಾಟಕ ಜಾನಪದ ಪರಿಷತ್ತಿನ ಮೇಲ್ ಐಡಿ kip@janapadaloka.in  ಗೆ  ಅಥವಾ ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಸಿರಿಭುವನ, ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್. ರಸ್ತೆ, ಬೆಂಗಳೂರು- 560 054. ವಿಳಾಸಕ್ಕೆ ಕಳುಹಿಸಿಕೊಡಬೇಕು. 
ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಎಸ್. ರಂಗ ಸಹಾಯಕರು, 8197037299 ಇವರನ್ನು ಅಥವಾ ದೂರವಾಣಿ ಸಂಖ್ಯೆ: 080-23605033 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)