ಹೊಸ ವರ್ಷ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿಯನ್ನು ಉತ್ಸವ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಇದರ ಸಂಭ್ರಮ ಹೆಚ್ಚು ತಮ್ಮದೇ ಆದ ರೀತಿಯಲ್ಲಿ. ಪದ್ಧತಿಯಲ್ಲಿ ನಡೆಯುವ ಹಬ್ಬದ ಸಿದ್ಧತೆಗಳು ಆರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಹೆಂಗಸರು ಒಬ್ಬರನ್ನೊಬ್ಬರು ಕೇಳುತ್ತಾ... ಹಬ್ಬಕ್ಕೆ ಸಿದ್ಧವಾಗುತ್ತಾರೆ ಎಳ್ಳು ಬೆಲ್ಲಕ್ಕೆ ಬೇಕೆಂದು ಕಡಲೆಕಾಯಿ ಸುಲಿಯೋದು, ಕೊಬ್ಬರಿ ಕಾಯಿ ಸಣ್ಣದಾಗಿ ಹಚ್ಚೋದು ಸಕ್ಕರೆ ಅಚ್ಚುಗಳನ್ನು ಮಾಡುವುದು ಬಿಳಿ ಎಳ್ಳನ್ನು ಹುರಿದು ಅದಕ್ಕೆ ಕಡಲೇ ಬೀಜ ಕೊಬ್ಬರಿ ಸಕ್ಕರೆ ಅಚ್ಚುಗಳನ್ನು ಸೇರಿಸಿ ಪ್ಯಾಕೇಟ್ ಮಾಡುವುದು. ಹಬ್ಬದ ದಿನ ಬೆಳಿಗ್ಗೆ ಎದ್ದು, ಮನೆಯಂಗಳದಲ್ಲಿ ಪೊಂಗಲ್ ಉಕ್ಕುತ್ತಿರುವ ರಂಗೋಲಿ ಮತ್ತು ಕಬ್ಬುಗಳ ಚಿತ್ರಗಳ ರಂಗೋಲಿ ಬಿಡಿಸಿ. ಬಣ್ಣ ಮತ್ತು ಹೂಗಳಿಂದ ರಂಗೋಲಿಗೆ ಅಲಂಕಾರ ಮಾಡುತ್ತಾರೆ. ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಮಾವಿನ ತಳಿರು ತೋರಣಗಳು ಮತ್ತು ಕಬ್ಬು ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿ ಊಟ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗುತ್ತದೆ. ಸಂಜೆ ವೇಳೆಗೆ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಅಕ್ಕ ಪಕ್ಕದ ಮನೆಗಳಿಗೆ ಕಬ್ಬು, ಗೆಣಸು, ಅವರೇಕಾಯಿ, ಎಳ್ಳು ಬೆಲ್ಲ ಕೊಡುವುದರ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯಗಳು ಹೇಳುತ್ತಾರೆ.
ಗೋಪೂಜೆ ಹೆಚ್ಚು ಜನಪ್ರಿಯ ವರ್ಷವಿಡಿ ತಮ್ಮ ವ್ಯವಸಾಯ ಕ್ಷೇತ್ರದಲ್ಲಿ ದುಡಿದು ಧಾನ್ಯ ಸಮೃದ್ಧಿಗೆ ಕಾರಣವಾಗುವ ಮತ್ತು ಹಾಲು ನೀಡುವ ಗೋವುಗಳನ್ನು ಸಂಕ್ರಾಂತಿಯೆಂದು ಪೂಜಿಸುವ ಮೂಲಕ ಕೃತಜ್ಞತೆ ಅರ್ಪಿಸುವುದು ಧಾನ್ಯಗಳ ಜೊತೆಗಿರುವ ಕಸ ಕಡ್ಡಿಗಳನ್ನು ಬೇಪಡಿಸಿ ಹುಲ್ಲು ಕಡ್ಡಿಗಳಿಗೆ ಬೆಂಕಿ ಹಚ್ಚುತ್ತಾರೆ. ಜಾನುವಾರುಗಳನ್ನು ಕಿಚ್ಚು ಹಾಯಿಸುವಿಕೆ ಸಂಭ್ರಮ ಆಟ ಆಚರಣೆ ನಡೆಯುತ್ತದೆ. ಪೊಂಗಲ್ ಹಬ್ಬದ ದೀನವೆ ಕೇರಳ ರಾಜ್ಯದಲ್ಲಿ ಮಕರ ಸಂಕ್ರಾಂತಿಯೆಂದು ಶಬರಿಮಲೆಯಲ್ಲಿ ಕಾಣ್ಣುವ ಮಕರ ಜ್ಯೋತಿ ನೋಡಲು ಅಯ್ಯಪ್ಪ ಭಕ್ತಾದಿಗಳು ಶಬರಿ ಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ನೋಡಲು ಅಯ್ಯಪ್ಪ ಭಕ್ತಾದಿಗಳು ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ಮತ್ತು ಮಕರ ಜ್ಯೋತಿಯ ದರ್ಶನವನ್ನು ಮಾಡುತ್ತಾರೆ.
