ಉದ್ಯಾನನಗರಿ ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಅದಿಶಕ್ತಿ ದೇವಾಲಯವು ತಿಗರಳ ಪೇಟೆಯಲ್ಲಿರುವ ಪ್ರಾಚೀನ ಬೆಂಗಳೂರು ವಿಶ್ವವಿಖ್ಯಾತ ಕರಗದ ಶ್ರೀ ಧರ್ಮರಾಯಸ್ವಾಮಿ ಮತ್ತು ಬ್ರೌಪದಮ್ಮ ದೇವಿ ದೇವಾಲಯಗಳ ಮೂಲ ನೆಲೆಯಾಗಿದೆ ಎಂಬ ಐತಿಹ್ಯ ಇದೆ. ಶ್ರೀಅದಿಶಕ್ತಿ ದೇವಾಲಯ ಸರಿ ಸಮಾರು 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಬೆಂಗಳೂರಿನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದೆಂದು ಪ್ರಸಿದ್ಧಿ ಪಡೆದಿದೆ.
ಈ ದೇವಾಲಯದ ಅವರಣದಲ್ಲಿ ಶ್ರೀ ಮಹಾಗಣಪತಿ, ಸಪ್ತಮಾತೃಕೆಯರು, ಕಾಶಿವಿಶ್ವನಾಥ ದಂಪತಿ ಸಮೇತ ಪೋತುರಾಜಸ್ವಾಮಿ, ವಲ್ಲಿ ದೇವಸೇನಾ ಸಮೇತ ಕಾರ್ತಿಕೇಯ, ಶ್ರೀ ಅಂಜನೇಯ, ಅದಿ ದೇವಾನುದೇವತೆಗಳು, ಅಷ್ಟ ದಿಕ್ಷಾಲಕರೊಂದಿಗೆ ನವಗ್ರಹ ದೇವರುಗಳು, ಶ್ರೀ ಶನಿಮಹಾತ್ಮ, ಹಾಗೂ ನೂತನವಾಗಿ ಸೂರ್ಯ ಭಗವಾನರು ಮತ್ತು ಕಾಲಭೈರವ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಭಕ್ತರು ಈ ದೇವಾನುದೇವತೆಗಳನ್ನು ಒಂದೇ ಸ್ಥಳದಲ್ಲಿ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.ಶ್ರೀ ಧರ್ಮರಾಯ ಸ್ವಾಮಿ ಮತ್ತು ದೌಪದಮ್ಮ ದೇವಾಲಯ ಖ್ಯಾತಿಯ ಕರಗದ ದುರ್ಗ ಪೂಜಾರಿ ಎಂದು ಪ್ರಸಿದ್ದಿ ಪಡೆದಿರುವ ವೆಂಕಟಸ್ವಾಮಪ್ಪ ರವರು ಮತ್ತು ಸುಪುತ್ರರಾದ ದುರ್ಗಪೂಜಾರಿ ಶ್ರೀನಿವಾಸ್ ಮತ್ತು ವಿಜಯಕುಮಾರ್ ಅವರು ದೇವಸ್ಥಾನದ ಉಸ್ತುವಾರಿ ವಹಿಸಿ ದೇವತಾಕಾರ್ಯಗಳು ಮತ್ತು ಪೂಜಾ ಕೈಂಕರ್ಯಗಳನ್ನು ಶಾಸ್ರೋಕ್ತವಾಗಿ ನೆರವೇರಿಸುತ್ತಿದ್ದಾರೆ.
ಪುರಾತನ ಐತಿಹ್ಯದ ಭವ್ಯ ಇತಿಹಾಸವಿರುವ ಶ್ರೀ ಅದಿಶಕ್ತಿ ದೇವಾಲಯ ಶಿಥಿಲಾವಸ್ಥೆಯಾಗಿ ದೇವಸ್ಥಾನ ಅವರಣ ಹಾಳಾಗಿತ್ತು. ಇಲ್ಲಿಗೆ ಪ್ರತಿದಿನ ಬರು ಭಕ್ತರಿಗೆ ಸೂಕ್ತ ಸ್ಥಳಾವಕಾಶ ಮತ್ತು ಸುಸಜ್ಜಿತ ವ್ಯವಸ್ಥೆ ಮತ್ತು ಪ್ರಸಾದ ವಿನಿಯೋಗ ಸ್ಥಳವಿಲ್ಲದೇ ತೊಂದರೆಯಾಗಿತ್ತು. ಈ ಸಮಸ್ಯೆಗಳ ಕುರಿತು ದೇವಸ್ಥಾನ ಆಡಳಿತ ಮಂಡಳಿಯವರು ಜಿಬಿಎ ಅಧಿಕಾರಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಎ.ಅಮೃತ್ ರಾಜ್ ಮತ್ತು ಪದಾಧಿಕಾರಿಗಳ ಜೊತೆಯಲ್ಲಿ ದೇವಾಲಯ ಜೀರ್ಣೋದ್ಧಾರ ಕುರಿತು ಸಮಾಲೋಚಿಸಿ ಸಹಕಾರ ನೀಡಬೇಕು ಎಂಬ ಮನವಿ ಮಾಡಿದರು.ದೇವಾಲಯದ ಜೀರ್ಣೋದ್ದಾರದ ಮಹತ್ಕಾರ್ಯಕ್ಕಾಗಿ ಸಂಘದ ವತಿಯಿಂದ ಪ್ರತಿ ನೌಕರರಿಂದ ತಲಾ ಒಂದು ಸಾವಿರ ರೂ.ಕಟಾವಣೆ ಮಾಡಲಾಯಿತು ಮತ್ತು ಆರ್ಥಿಕವಾಗಿ ಸಹಾಯ ನೀಡಿ ಅಂದಾಜು 1ಕೋಟಿ 60 ಲಕ್ಷ ರೂ.ಗಳನ್ನು ಜೀರ್ಣೋದ್ಧಾರಕ್ಕೆ ನೌಕರರ ವರ್ಗದಿಂದ ದೇಣಿಗೆ ನೀಡಲಾಗಿದೆ. ಜೊತೆಗೆ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ 20ಲಕ್ಷ ರೂ.ಗಳ ಉದಾರ ದೇಣಿಗೆ ನೀಡಿ ದೇವಸ್ಥಾನದ ನವೀಕರಣಕ್ಕೆ ಕೈಜೋಡಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಾಯ, ಸಹಕಾರ ಮತ್ತು ಬೆಂಬಲಗಳಿಂದ ಜೀರ್ಣೋದ್ಧಾರಗೊಂಡಿರುವ ಏಳು ಸುತ್ತಿನಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯದ ಉದ್ಘಾಟನೆ ಮತ್ತು ದೇವತಾ ಪೂಜಾ ಕಾರ್ಯಕ್ರಮಕ್ಕೆ ಈಗ ವೇದಿಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ದಿನಾಂಕ ಜನವರಿ 21ರಿಂದ ಜನವರಿ 23ರ ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮಗಳು ವಿಧಿಬದ್ಧವಾಗಿ ನಡೆಯಲಿದೆ. ನಾಡಿನ ಖ್ಯಾತ ಜ್ಯೋತಿಷಿಗಳು ಮತ್ತು ಆಗಮ ಶಾಸ್ತ್ರಜ್ಞರೂ ಆದ ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ದೇವತಾ ಕಾರ್ಯಗಳು ಮತ್ತು ಪೂಜಾ ಕೈಂಕರ್ಯಗಳು ನೆರವೇರಲಿದೆ. ವಾಸ್ತು ಪೂಜೆ, ಗಣಹೋಮ (ಮೋದಕ ಗಣಪತಿ ಹೋಮ), ಯಂತ್ರ ಸ್ಥಾಪನ, ಅಷ್ಟ ಬಂಧನ ಸ್ಥಾಪನೆ, ನವಶಕ್ತಿ ಶಾಂತಿ ಹೋಮ, ಮೃತ್ಯುಂಜಯ ಹೋಮ, ಕಾಲಭೈರವ ಹೋಮ, ಶ್ರೀ ಶನೈಶ್ವರ ತಿಲ ಶಾಂತಿ ಹೋಮ, ಸಪ್ತಮಾತೃಕಾ ದುರ್ಗಾ, ಶ್ರೀ ಲಕ್ಷ್ಮೀ ಸರಸ್ವತಿ ಹೋಮ, ತತ್ವನ್ಯಾಸ ಕಾಲನ್ಯಾಸ ಹೋಮ, ಕಲಾ ಹೋಮ, ನವ ಚಂಡಿಕಾಯಾಗ, ನವ ಚಂಡಿಕಾ ಹೋಮ, ಕುಂಭಾಭಿಷೇಕ, ವಿಶೇಷ ದುರ್ಗಾ ದೀಪ ನಮಸ್ಕಾರ ಹಾಗೂ ದೇವತಾ ಕಾರ್ಯಕ್ರಮಗಳು ಜರುಗಲಿವೆ.ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ನೊಣವಿನಕರೆಯ ಶ್ರೀ ಕಾಡಸಿದ್ದೇಶ್ವರ ಮಠ ಟ್ರಸ್ಟ್‌ನ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠ ಹಾಗೂ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಐರಣಿಯ ಐರಣಿ ಹೊಳೆಮಠ ಮಹಾ ಸಂಸ್ಥಾನದ ಶ್ರೀ ದತ್ತಾತ್ರೇಯ ಅವಧೂತ ಗುರುಪೀಠದಿಂದ ಈ ಅದ್ದೂರಿ ದೇವತಾ ಕಾರ್ಯಕ್ಕೆ ಎರಡು ಆನೆಗಳನ್ನು ಕರೆಸಲಾಗುತ್ತದೆ.21-1-2026ರಿಂದ 23-1-2026 ರವರೆಗೆ ನಡೆಯಲಿರುವ ದೇವತಾ ಪೂಜಾಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಲು ಈ ಮೂಲಕ ಕೋರಲಾಗಿದೆ.
ದಿನಾಂಕ 22-1-2026 ರಂದು ಬೆಳಗ್ಗೆ 11 ಗಂಟೆಗೆ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಉದ್ಘಾಟನೆ ನೇರವೆರಿಸುವರು, ಮತ್ತು ಮುಖ್ಯ ಅತಿಥಿಗಳಾಗಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್ ರವರು ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರರಾವ್ ರವರು, ಪ್ರಧಾನ ಅಭಿಯಂತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಧಾನ ಎಂಜಿನಿಯರ್ ಮತ್ತು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಷರ್ ನಿರ್ದೇಶಕರಾದ (ತಾಂತ್ರಿಕ) ಶ್ರೀ ಡಾ॥ಬಿ.ಎಸ್.ಪ್ರಹ್ಲಾದ್‌ರವರು ಹಾಗೂ ಜಿಬಿಎನ ಅಪರ ಮುಖ್ಯ ನಗರ ಯೋಜಕರಾದ ಶ್ರೀಡಾ.ಬಿ.ಎನ್.ಗಿರೀಶ್ ಮತ್ತಿತರ ಗಣ್ಯರು ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ದಿನಾಂಕ 23ನೇ ಜನವರಿ, 2026ರಂದು ಮಧ್ಯಾಹ್ನ 12-30ಕ್ಕೆ ಪ್ರಸಾದ ವಿನಿಯೋಗ ಮಾಡಲಾಗುವುದು.
ಈ ಕಾರ್ಯಕ್ರಮಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಎ.ಅಮೃತ್ ರಾಜ್, ಉಪಾಧ್ಯಕ್ಷರುಗಳಾದ ಡಾ.ಶೋಭಾ ಮತ್ತು ಡಿ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಜಿ.ರವಿ, ಕಾರ್ಯಾಧ್ಯಕ್ಷ ಶ್ರೀ ರುದ್ರೇಶ್ ಬಿ, ಖಜಾಂಚಿ ಶ್ರೀ ಸೋಮಶೇಖರ್ ಎನ್.ಎಸ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಕೆ.ನರಸಿಂಹ ಮತ್ತು ಶ್ರೀ ಎಚ್.ಕೆ.ತಿಪ್ಪೇಶ್, ಸಂಘಟನಾ ಕಾರ್ಯದರ್ಶಿಗಳಾದ ಕೆ.ಮಂಜೇಗೌಡ ಮತ್ತು ಎಸ್.ಜಿ ಸುರೇಶ್, ಸಂಚಾಲಕರಾದ ರೇಣುಕಾಂಬ ಹಾಗೂ ನಿರ್ದೇಶಕರುಗಳಾದ ಸರ್ವಶ್ರೀ ಮಂಜುನಾಥ್ ಎನ್. ಉಮೇಶ್ ಬಿ, ಸಂತೋಷಕುಮಾರ ನಾಯ್ಕ ಕೆ, ಶ್ರೀಧರ್ ಎನ್. ಸಂತೋಷ್ ಕುಮಾರ್ ಎಂ, ಮತ್ತು ಎಚ್. ಬಿ. ಸುರೇಶ್, ಸಮಿತಿ ಉಸ್ತುವಾರಿಗಳಾದ ಶ್ರೀ ಸಾಯಿಶಂಕರ್ ಮತ್ತು ಶ್ರೀ ಎ.ಜಿ.ಬಾಬು ಹಾಗೂ ಬೃಹತ್ ಬೆಂಬಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ಮತ್ತು ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಸದಸ್ಯರು, ಸಹಕಾರ-ನೆರವು ನೀಡಿದ ಜಿಬಿಎ ಅಧಿಕಾರಿ ಮತ್ತು ನೌಕರರು ಹಾಗೂ ದೇವಸ್ಥಾನದ ಭಕ್ತವೃಂದ ಪಾಲ್ಗೊಳ್ಳುವರು.