ಬೆಂಗಳೂರು: ರಾಜಧಾನಿ ಬೆಂಗಳೂರು ಇಂದು ಹಿಂದೂಗಳಿಗೆ ಸುರಕ್ಷಿತ ನಗರವಲ್ಲ ಎಂಬುದನ್ನು ಚಾಮರಾಜಪೇಟೆಯಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯಗಳು ಸಾಬೀತುಪಡಿಸಿವೆ. ಹಿಂದೂ ಭಕ್ತರು, ಮಹಿಳೆಯರು, ವ್ರತಧಾರಿಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಈಗ ಸಹನೆಯ ಗಡಿ ದಾಟಿವೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಹಿಂದೂ ವಿರೋಧಿ ಷಡ್ಯಂತ್ರವನ್ನು ಸರ್ಕಾರವೇ ಮೌನವಾಗಿ ಪೋಷಿಸುತ್ತಿರುವ ಭಯಾನಕ ಸ್ಥಿತಿಯಾಗಿದೆ.
ಓಂ ಶಕ್ತಿ ಮಾಲಧಾರಿಣಿ ಮಹಿಳಾ ಭಕ್ತರು ಶಾಂತಿಪೂರ್ಣವಾಗಿ ಭಜನಾ ಮೆರವಣಿಗೆ ನಡೆಸುತ್ತಿದ್ದಾಗ, ದುಷ್ಕರ್ಮಿಗಳು ಮಾರಣಾಂತಿಕ ಕಲ್ಲು ತೂರಾಟ ನಡೆಸಿ ಮಹಿಳೆಯರನ್ನು ಗಾಯಗೊಳಿಸಿದರು. ಮಹಿಳೆಯರ ಮೇಲೂ ದಾಳಿ ನಡೆಸುವಷ್ಟು ಕ್ರೂರ ಮನಸ್ಥಿತಿಯ ಈ ಶಕ್ತಿಗಳನ್ನು ಸರ್ಕಾರ ಕೇವಲ “ಅಪ್ರಾಪ್ತರು ತಪ್ಪು ಮಾಡಿದ್ದಾರೆ” ಎಂದು ಮೃದುವಾಗಿ ಸಂಬೋಧಿಸುತ್ತಿರುವುದು ಅಪರಾಧಿಗಳ ಮನೋಬಲ ಹೆಚ್ಚಿಸಿದೆ.ಈ ಹಿಂದೆ ಅಲ್ಲಿನ ನರಸಿಂಹ ದೇವಸ್ಥಾನದ ಉತ್ಸವ ಮೂರ್ತಿಯ ಮೇಲೆ ಅಶುದ್ಧ ನೀರು ಎರಚಿ ಅಪವಿತ್ರ ಮಾಡಿದ ಘಟನೆಯು ಜರುಗಿತ್ತು. ಕೆಲವು ದಿನಗಳ ಹಿಂದೆ ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ ನಡೆದಿತ್ತು ತದನಂತರ ಹಿಂದುಗಳ ಆಕ್ರೋಶದ ನಂತರ ಈ ಕೃತ್ಯವನ್ನು ಒಬ್ಬ ಮಾನಸಿಕ ಅಸ್ವಸ್ಥ ಮಾಡಿದ್ದನೆಂದು ಪ್ರಕರಣವನ್ನು ಮುಚ್ಚಿ ಹಾಕಿದರು. ಅಲ್ಲಿ ಅಯ್ಯಪ್ಪ ಮಾಲಧಾರಿಗಳ ಮೇಲೆ ದಾಳಿ ಮತ್ತು ವ್ರತಾಚರಣೆಯ ಟೆಂಟ್‌ಗೆ ಬೆಂಕಿ ಹಚ್ಚುವ ಮೂಲಕ ಭಕ್ತರಲ್ಲಿ ಭಯ ಬಿತ್ತಲಾಗುತ್ತಿದೆ. ಅದಲ್ಲದೆ ಚಾಮರಾಜಪೇಟೆಯ ಆಟದ ಮೈದಾನ ಕಬಳಿಸುವ ಷಡ್ಯಂತ್ರ ನಡೆಯುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ಅರುಣಾಚಲೇಶ್ವರ ದೇವಸ್ಥಾನದ ಸುತ್ತ ಕಾನೂನುಬಾಹಿರ ಮಾಂಸದ ಅಂಗಡಿಗಳ ಒಗ್ಗಟ್ಟುಗಳನ್ನು ಇದುವರೆಗೆ ತೆಳು ಮಾಡಿಲ್ಲ ಹಾಗೂ ಪಶುಸಂಗೋಪನೆ ಇಲಾಖೆಗೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನಗಳು ನಡೆದಿವೆ. ಮಾನ್ಯ ಉಚ್ಚ ನ್ಯಾಯಾಲಯವು ತಡೆಆಜ್ಞೆ ನೀಡದಿದ್ದರೆ ಈ ಸರ್ಕಾರಿ ಪ್ರಾಯೋಜಿತ ಭೂಮಿ ಕಬಳಿಕೆಯೂ ಪೂರ್ಣಗೊಳ್ಳುತ್ತಿತ್ತು ಎಂದು ಪ್ರಮೋದ್ ಮುತಾಲಿಕ್ ಅವರು ಆಕ್ರೋಶವನ್ನು ಹೊರಹಾಕಿದರು.ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಬೃಹತ್ ಪ್ರತಿಭಟನೆಯನ್ನು ಆಯೋಜನೆ ಮಾಡಿದೆ.
ಪ್ರತಿಭಟನೆಯ ವಿವರ:- ದಿನಾಂಕ: ಜನವರಿ 25, ಶನಿವಾರ
- ಸಮಯ: 11.00
- ಸ್ಥಳ: ಫ್ರೀಡಮ್ ಪಾರ್ಕ್, ಬೆಂಗಳೂರು
ಈ ಪ್ರತಿಭಟನೆಯು ಕೇವಲ ಆಕ್ರೋಶವಲ್ಲ, ಇದು ಹಿಂದೂಗಳ ಅಸ್ತಿತ್ವಕ್ಕಾಗಿ ನಡೆಯುವ 'ಎಚ್ಚರಿಕೆಯ ಗಂಟೆ'. ಸರ್ಕಾರವು ಕೂಡಲೇ ಎಚ್ಚೆತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಜನಾಂದೋಲನದ ಮೂಲಕ ಉತ್ತರ ನೀಡಲಾಗುವುದು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಪರಿಷತ್ತಿನಲ್ಲಿ ತಿಳಿಸಿದೆ. ಈ ಪತ್ರಿಕಾ ಪರಿಷತ್ತಿನಲ್ಲಿ ಶ್ರೀ ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ, ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಬಿ.ಎನ್. ಮಹೇಶ ಕುಮಾರ್, ಅಯ್ಯಪ್ಪ ದೇವಸ್ಥಾನ, ರಕ್ಷಿತಾ, ಕಾರ್ಯದರ್ಶಿ, ಓಂ ಶಕ್ತಿ ಸಂಘಟನೆ, ಸುಂದ್ರೇಶ್ ನರ್ಗಲ್, ಅಧ್ಯಕ್ಷರು, ಶ್ರೀ ರಾಮ ಸೇನೆ, ಕರ್ನಾಟಕ, ಮಂಜುನಾಥ, ಅಧ್ಯಕ್ಷರು, ಶ್ರೀ ರಾಮ ಸೇನೆ, ಬೆಂಗಳೂರು ನಗರ ಇವರು ಉಪಸ್ಥಿತರಿದ್ದರು.