ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ(ಐಎಸ್ಇಸಿ)ಯ 53 ನೇ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ ರಾಜ್ಯಪಾಲರು

varthajala
0

 ಬೆಂಗಳೂರು : “ ಕಳೆದ ಐದು ದಶಕಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ(ಐಎಸ್ಇಸಿ)ಯು ಸಾಮಾಜಿಕ ನ್ಯಾಯಆರ್ಥಿಕ ಅಭಿವೃದ್ಧಿಎಲ್ಲರನ್ನೂ ಒಳಗೊಂಡ ನೀತಿ ನಿರೂಪಣೆ ಮತ್ತು ಪುರಾವೆ ಆಧಾರಿತ ಸಂಶೋಧನೆ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. 

ಶನಿವಾರ ಸಾಮಾಜಿಕ ಮತ್ತು ರ‍್ಥಿಕ ಬದಲಾವಣೆಯ ಸಂಸ್ಥೆ(ಐಎಸ್ಇಸಿ) 53ನೇ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. “ಈ ಸಂಸ್ಥೆಯು ನಡೆಸಿದ ಅಧ್ಯಯನಗಳು ಮತ್ತು ವಿಶ್ಲೇಷಣೆಗಳು ಶೈಕ್ಷಣಿಕ ಜಗತ್ತಿಗೆ ಉಪಯುಕ್ತವಾಗಿವೆ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೀತಿ ನರ‍್ಧಾರಗಳನ್ನು ಮರ‍್ಗರ‍್ಶನ ಮಾಡುವಲ್ಲಿ ಸಹಾಯ ಮಾಡಿವೆ. ಪ್ರಸ್ತುತ ಕಾಲಮಾನದಲ್ಲಿ ಸಾಮಾಜಿಕ ಮತ್ತು ರ‍್ಥಿಕ ಬದಲಾವಣೆಗಳು ತ್ವರಿತಗತಿಯಲ್ಲಿ ಸಂಭವಿಸುತ್ತಿರುವಾಗ, ಇಂತಹ ಸಂಸ್ಥೆಗಳ ಪಾತ್ರವು ಇನ್ನಷ್ಟು ಮಹತ್ವದ್ದಾಗಿದೆ. 

ಸಮಗ್ರ ಬೆಳವಣಿಗೆ, ಪ್ರಾದೇಶಿಕ ಅಸಮಾನತೆಗಳ ಅಧ್ಯಯನ, ಅನನುಕೂಲಕರ ಗುಂಪುಗಳ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಿಷಯಗಳ ಕುರಿತು ಸಂಸ್ಥೆಯ ಕರ‍್ಯವು ಪ್ರಸ್ತುತ ಮತ್ತು ಮಹತ್ವದ್ದಾಗಿದೆ” ಎಂದರು. “ರ‍್ನಾಟಕ ರ‍್ಕಾರಕ್ಕೆ ಐಎಸ್‌ಇಸಿಯ ಕೊಡುಗೆ ಅನುಕರಣೀಯವಾಗಿದೆ. ವಿಶೇಷವಾಗಿ ದರ‍್ಬಲ ರ‍್ಗಗಳ ಉನ್ನತಿಗಾಗಿ ನೀತಿಗಳನ್ನು ರೂಪಿಸುವಲ್ಲಿ ಮತ್ತು ಸಾಮಾಜಿಕ ಕಾಳಜಿಯನ್ನು ಉತ್ತೇಜಿಸುವಲ್ಲಿ ಮತ್ತು ರ‍್ಕಾರವು ಜಾರಿಗೆ ತಂದ ನೀತಿಗಳು ಮತ್ತು ಕರ‍್ಯಕ್ರಮಗಳನ್ನು ಮೌಲ್ಯಮಾಪನ ಮಾಡುವಲ್ಲಿ ಪ್ರಶಂಸನೀಯ ಕರ‍್ಯಮಾಡಿದೆ. 

ಆಡಳಿತ ಮಂಡಳಿಯು ಕಾಲಕಾಲಕ್ಕೆ ಮಾಡುವ ರ‍್ಥಪರ‍್ಣ ಪ್ರಯತ್ನಗಳನ್ನು ಪ್ರಶಂಸಿಸುತ್ತೇನೆ. ಹಾಗೇ, ಈ ಸಂಸ್ಥೆಯ ಎಲ್ಲಾ ಸದಸ್ಯರು ಈ ಅವಕಾಶವನ್ನು ಬಳಸಿಕೊಂಡು ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಮತ್ತು ಇಂದು ತೆಗೆದುಕೊಂಡ ನರ‍್ಧಾರಗಳು ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. 

 ಸದಸ್ಯರ ಆಲೋಚನೆಗಳು ಮತ್ತು ಸಲಹೆಗಳು ಈ ಸಂಸ್ಥೆಯನ್ನು ಚಿಂತಕರ ಚಾವಡಿಯಿಂದ ಆಚೆಗೆ, ಕ್ರಿಯಾತ್ಮಕ ಬದಲಾವಣೆಯ ಏಜೆಂಟ್ ಆಗಿ ಸ್ಥಾಪಿಸಲು ಸಹಾಯ ಮಾಡುತ್ತದೆ. ನಿಮ್ಮೆಲ್ಲರ ಭಾಗವಹಿಸುವಿಕೆ, ಸಲಹೆಗಳು ಮತ್ತು ನರ‍್ಣಯಗಳು ನಮ್ಮ ನರ‍್ಧಾರಗಳನ್ನು ಹೆಚ್ಚು ಪ್ರಸ್ತುತವಾಗಿಸುತ್ತದೆ ಮತ್ತು ಸರ‍್ವಜನಿಕ ಹಿತಾಸಕ್ತಿಯಲ್ಲಿವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ಐಎಸ್ಇಸಿ ಉಪಾಧ್ಯಕ್ಷ ಡಾ.ಅಶೋಕ್ ದಳವಾಯಿ ಮತ್ತು ಇತರ ಗಣ್ಯರು ಹಾಜರಿದ್ದರು.


Post a Comment

0Comments

Post a Comment (0)