ಬೆಂಗಳೂರು : ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತನ್ನ 78 ಪಂಪಿಂಗ್ ಸ್ಟೇಷನ್‍ಗಳಲ್ಲಿ ಎಐ ಆಧಾರಿತ ಸ್ಮಾರ್ಟ್ ಪಂಪ್ ಮಾನಿಟರಿಂಗ್ ಹಾಗೂ ಆಪ್ಟಿಮೈಸೇಷನ್ ತಂತ್ರಜ್ಞಾನ 'ಐಪಂಪ್‍ನೆಟ್' ಅಳವಡಿಸಿಕೊಂಡಿದೆ. ಇದು ವಾರ್ಷಿಕವಾಗಿ 40 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡುವಂತಹ ಹೊಸ ತಂತ್ರಜ್ಞಾನವಾಗಿದ್ದು, ಇಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವಂತಹ ವಿಶ್ವದ ಮೊದಲ ನೀರು ಸರಬರಾಜು ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ‘ಐಪಂಪ್‍ನೆಟ್' ಎನ್ನುವುದು ರಿಯಲ್-ಟೈಮ್ ಸೆನ್ಸರ್, ಕೃತಕ ಬುದ್ಧಿಮತ್ತೆ ಮತ್ತು ಪ್ರಿಡಿಕ್ಟಿವ್ ಡಯಾಗ್ನೋಸ್ಟಿಕ್ಸ್ (ಮುನ್ಸೂಚನೆ ನೀಡುವ ತಂತ್ರಜ್ಞಾನ)ಗಳ ಸಮ್ಮಿಲನವಾಗಿದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಈ ವ್ಯವಸ್ಥೆಯು ಪಂಪ್‍ಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರಿಶೀಲಿಸುತ್ತದೆ ಮತ್ತು ಕಣ್ಣಿಗೆ ಕಾಣದ ನಷ್ಟಗಳನ್ನು ಪತ್ತೆಹಚ್ಚುತ್ತದೆ. ಈಗಾಗಲೇ ಈ ವ್ಯವಸ್ಥೆಯು ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿರುವ ಹಲವಾರು ಪಂಪ್‍ಗಳನ್ನು ಗುರುತಿಸಿದೆ. ಈ ಮಾಹಿತಿಯ ಆಧಾರದ ಮೇಲೆ, ಜಲಮಂಡಳಿಯು ಕಡಿಮೆ ದಕ್ಷತೆಯ ಪಂಪ್‍ಗಳನ್ನು ಬದಲಾಯಿಸಿ, ಅಧಿಕ ದಕ್ಷತೆಯ ಪಂಪ್‍ಗಳನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಿದೆ.
ವಿಶ್ವದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲಮಂಡಳಿಯ 78 ಪಂಪಿಂಗ್ ಘಟಕಗಳಲ್ಲಿ ಎಐ ಆಧಾರಿತ ‘ಐಪಂಪ್‍ನೆಟ್' ಅಳವಡಿಕೆ ವಾರ್ಷಿಕ 40 ಕೋಟಿ ರೂ.ಗೂ ಅಧಿಕ ವೆಚ್ಚ ಉಳಿತಾಯ: ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್
January 15, 2026
0
ತಂತ್ರಜ್ಞಾನದ ಈ ಮೇಲ್ದರ್ಜೆಗೇರಿಸುವಿಕೆಯಿಂದಾಗಿ ವಾರ್ಷಿಕವಾಗಿ 40 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ವೆಚ್ಚ ಉಳಿತಾಯವಾಗುವ ನಿರೀಕ್ಷೆಯಿದೆ. ಇಂಧನ ವ್ಯರ್ಥವಾಗುವುದನ್ನು ತಡೆಗಟ್ಟುವ ಮೂಲಕ, ಜಲಮಂಡಳಿಯು ಕೇವಲ ಆರ್ಥಿಕ ಲಾಭ ಮಾತ್ರವಲ್ಲದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಬೆಂಗಳೂರಿನ ಪರಿಸರ ಸುಸ್ಥಿರತೆಗೂ ಕೊಡುಗೆ ನೀಡುತ್ತಿದೆ. ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪ್ರತಿ ಪ್ರಜೆಗೂ ಅತ್ಯುತ್ತಮ ಸೇವೆ ಒದಗಿಸಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಜಲಮಂಡಳಿ ಬದ್ಧವಾಗಿದೆ. 'ಐಪಂಪ್‍ನೆಟ್' ನಮ್ಮ ಪಂಪಿಂಗ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಆಳವಾಗಿ ಅರ್ಥಮಾಡಿಕೊಳ್ಳಲು, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ನೀರು ಸರಬರಾಜಿನಲ್ಲಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ. ಇದು ಜಲಮಂಡಳಿಯ ಪಾಲಿಗೆ ಪರಿವರ್ತನೆಯ ಹಂತವಾಗಿದ್ದು, ನೀರಿನ ವಲಯದಲ್ಲಿನ ಆವಿμÁ್ಕರಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ನೀರಿನ ಮೂಲಸೌಕರ್ಯ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದ ಮೈಲಿಗಲ್ಲನ್ನು ಸ್ಥಾಪಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ 78 ಹೈ-ಕೆಪಾಸಿಟಿ ಪಂಪಿಂಗ್ ಘಟಕಗಳಲ್ಲಿ ಪೇಟೆಂಟ್ ಪಡೆದ 'ಐಪಂಪ್‍ನೆಟ್' ಸ್ಮಾರ್ಟ್ ಪಂಪ್ ಮಾನಿಟರಿಂಗ್ ಮತ್ತು ಆಪ್ಟಿಮೈಸೇಶನ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ಮೂಲಕ ಇಂತಹ ಸುಧಾರಿತ ಎಐ ಆಧಾರಿತ ಪರಿಹಾರವನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಅಳವಡಿಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದೆ.