7ನೇ ಸಂಗೀತ ಸಮ್ಮೇಳನ ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ಆಯೋಜನೆ

VK NEWS
0

ಬೆಂಗಳೂರು : ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಏಳನೇ ಸಂಗೀತ ಸಮ್ಮೇಳನವನ್ನು ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಜನವರಿ 9 ರಿಂದ 11ರ ವರೆಗೆ ಆಯೋಜಿಸಿದ್ದು, ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಗಾಯಕಿ ವಿದುಷಿ ಎಂ.ಎಸ್. ಶೀಲಾ ಹಾಗೂ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಕೊಳಲು ವಾದಕ ವಿದ್ವಾನ್ ಅಮಿತ್ ಎ. ನಾಡಿಗ್ ವಹಿಸುವರು. 

ಉದ್ಘಾಟನಾ ಕಾರ್ಯಕ್ರಮ : ಜನವರಿ 9, ಶುಕ್ರವಾರ ಸಂಜೆ 5-30ಕ್ಕೆ ಈ ಕಾರ್ಯಕ್ರಮವನ್ನು ಸಂಗೀತ ಸಭಾ ಅಧ್ಯಕ್ಷರಾದ ಶ್ರೀ ಎಂ. ಅನಂತ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹೆಸರಾಂತ ಹಿರಿಯ ಗಾಯಕಿ ಡಾ|| ಟಿ.ಎಸ್. ಸತ್ಯವತಿ, ಗೌರವ ಅತಿಥಿಗಳಾಗಿ ಶ್ರೀರಾಮ ಮಂದಿರದ ಅಧ್ಯಕ್ಷರಾದ ಶ್ರೀ ದತ್ತಾತ್ರೇಯಮೂರ್ತಿ (ದತ್ತು) ಮತ್ತು ಶ್ರೀರಾಮ ಮಂದಿರದ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ್ ಆಗಮಿಸುವರು.

ಸಂಗೀತ ಮತ್ತು ಗೋಷ್ಠಿ ಕಾರ್ಯಕ್ರಮಗಳು : ಜನವರಿ 9, ಶುಕ್ರವಾರ ಸಂಜೆ 6-30ಕ್ಕೆ ವಿದುಷಿ ಎಂ.ಎಸ್. ಶೀಲಾ (ಗಾಯನ), ವಿದುಷಿ ಅಪೇಕ್ಷ ಅಪ್ಪಾಲ (ಸಹ-ಗಾಯನ), ವಿದುಷಿ ಹೆಚ್.ಎಂ. ಸ್ಮಿತಾ (ಪಿಟೀಲು), ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ (ಮೃದಂಗ), ವಿದ್ವಾನ್ ಆನೂರು ಸುನಾದ್ (ಖಂಜಿರ).

ಜನವರಿ 10, ಶನಿವಾರ ಬೆಳಗ್ಗೆ 10ಕ್ಕೆ  ಗೋಷ್ಠಿ 1 : ವಿಷಯ : "ಪಶ್ಚಿಮದಿಂದ ಪೂರ್ವಕ್ಕೆ ವಯೋಲಿನ್ ಪಯಣ"-ಡಾ|| ಜ್ಯೋತ್ಸ್ನಾ ಶ್ರೀಕಾಂತ್, 11-40ಕ್ಕೆ ಗೋಷ್ಠಿ 2 : ವಿಷಯ : "ಕರ್ನಾಟಕ ಸಂಗೀತಕ್ಕೆ ಮುತ್ತುಸ್ವಾಮಿ ದೀಕ್ಷಿತರ ಕೊಡುಗೆ"-ಡಾ|| ಎಸ್.ಸಿ. ಶರ್ಮಾ, ಸಂಜೆ 6-30ಕ್ಕೆ ವಾದ್ಯ ಸಂಗೀತ :  ವಿದ್ವಾನ್ ಎ. ಅಮಿತ್ ನಾಡಿಗ್ (ಕೊಳಲು), ವಿದ್ವಾನ್ ವೈಭವ್ ರಮಣಿ (ಪಿಟೀಲು), ವಿದ್ವಾನ್ ಬಿ.ಆರ್. ಶ್ರೀನಿವಾಸ್ (ಮೃದಂಗ), ವಿದ್ವಾನ್ ಎಸ್. ಉತ್ತಮ್ (ಘಟ).

ಜನವರಿ 11, ಭಾನುವಾರ ಬೆಳಗ್ಗೆ 10ಕ್ಕೆ ಗೋಷ್ಠಿ 1 : ವಿಷಯ : "ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಭಾಷಾಂಗ ರಾಗಗಳ ಸೊಬಗು"-ಡಾ|| ರಾಜಲಕ್ಷ್ಮಿ, 11-40ಕ್ಕೆ ಗೋಷ್ಠಿ 2 : ವಿಷಯ : "ಶ್ರೀ ವಿದ್ಯೆ ಮತ್ತು ಸಂಗೀತ-ನಾದ-ಅನುಷ್ಟಾನ"-ಡಾ|| ಆರ್.ಎಸ್. ನಂದಕುಮಾರ್. ಸಂಜೆ 4-30ಕ್ಕೆ ಸಂಗೀತ ಕಾರ್ಯಕ್ರಮ : ವಿದ್ವಾನ್ ಕುನ್ನಕುಡಿ ಬಾಲಮುರಳಿಕೃಷ್ಣ (ಗಾಯನ), ವಿದ್ವಾನ್ ಮೈಸೂರು ಎಂ. ಕೇಶವ್ (ಪಿಟೀಲು), ವಿದ್ವಾನ್ ತುಮಕೂರು ಬಿ. ರವಿಶಂಕರ್ (ಮೃದಂಗ), ವಿದ್ವಾನ್ ಶಮಿತ್ ಎಸ್. ಗೌಡ (ಘಟ).

ಪ್ರಶಸ್ತಿ ಪ್ರದಾನ ಸಮಾರಂಭ : (ಜ.11) ಸಂಜೆ 6-30ಕ್ಕೆ : ಸಮ್ಮೇಳನಾಧ್ಯಕ್ಷರಾದ ವಿದುಷಿ ಎಂ.ಎಸ್. ಶೀಲಾ ಅವರಿಗೆ "ಶೃತಿ ಲಯ ಭಾರತಿ" ಮತ್ತು ಯುವ ಸಮ್ಮೇಳನಾಧ್ಯಕ್ಷರಾದ ವಿದ್ವಾನ್ ಅಮಿತ್ ಎ. ನಾಡಿಗ್ ಅವರಿಗೆ "ಸ್ವರ ಲಯ ಭಾರತಿ" ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಶ್ರೀ ಸಿ.ಎನ್. ಅಶ್ವಥ್ ನಾರಾಯಣ ಮತ್ತು ಡಾ|| ಎಸ್.ಸಿ. ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

Post a Comment

0Comments

Post a Comment (0)