ಬೆಂಗಳೂರು : ನೂತನ ವರ್ಷಕ್ಕೆ ಆಕಾಶವಾಣಿ ಭದ್ರಾವತಿಯಲ್ಲಿ ಇನ್ನು ಮುಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ವಿವಿಧ ಪ್ರವಾಸಿತಾಣಗಳನ್ನು ಪರಿಚಯಿಸುವ ‘ಚಿಕ್ಕಮಗಳೂರು ಜಿಲ್ಲಾ ಪ್ರವಾಸ’ ಎಂಬ ಹೊಸ ಕಾರ್ಯಕ್ರಮ ಪ್ರತಿ ಶನಿವಾರ ಬೆಳಿಗ್ಗೆ 7 ಗಂಟೆ 15 ನಿಮಿಷಕ್ಕೆ ಪ್ರಸಾರವಾಗಲಿದೆ.ನಮ್ಮ ಸುತ್ತಮುತ್ತಲು ಹತ್ತು ಹಲವು ಪಕ್ಷಿಗಳು ಹಾರಾಡುತ್ತಿದ್ದರು ನಮಗೆ ಅದರ ಪರಿಚಯ ಹಾಗೂ ಅದರ ಜೀವನ ಶೈಲಿ ಪರಿಚಯವಿರುವುದಿಲ್ಲ, ಪಕ್ಷಿಗಳ ಜೀವನ ಶೈಲಿ, ಪ್ರಕಾರ, ಮಹತ್ವ ತಿಳಿಸುವ ‘ಪಕ್ಷಿ ಪ್ರಪಂಚ’ ವಿನೂತನ ಕಾರ್ಯಕ್ರಮ ಪ್ರತಿ ಸೋಮವಾರ ಬೆಳಿಗ್ಗೆ 9 ಗಂಟೆ 35 ನಿಮಿಷಕ್ಕೆ ಪ್ರಸಾರವಾಗಲಿದೆ.
ಹಾಗೆಯೇ ಪ್ರತಿದಿನ ನಾವು ಹತ್ತು ಹಲವು ಆಹಾರ ಸೇವಿಸುತ್ತಿರುತ್ತೇವೆ. ಅದರಲ್ಲಿನ ಪೌಷ್ಠಿಕಾಂಶಗಳ ಬಗ್ಗೆ ಮತ್ತು ಆಹಾರವೇ ಮನೆಮದ್ದಾಗಿ ಹೇಗೆ ಕೆಲಸ ನಿರ್ವಹಿಸುತ್ತದೆ ಎನ್ನುವ ಕುರಿತು ‘ಆರೋಗ್ಯ ಅಡುಗೆ’ ಎಂಬ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ನಿತ್ಯ ಮಾಡುವ ಅಡುಗೆ ಬಗ್ಗೆ ಪಾಕ ಪ್ರವೀಣರು ಮಾಹಿತಿ ನೀಡಲಿದ್ದಾರೆ. ಈ ಅಡುಗೆಯಲ್ಲಿರುವ ಪೌಷ್ಠಿಕಾಂಶಗಳ ಕುರಿತು ವೈದ್ಯರು ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮವು ಪ್ರತಿ ಬುಧವಾರ ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಪ್ರಸಾರವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.