ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

varthajala
0

 ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2026ನೇ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ “ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ” ರವರ ಜೀವನ ಚಿತ್ರ ಬಿಂಬಿಸುವ 219ನೇ ಫಲಪುಷ್ಪ ಪ್ರದರ್ಶನವನ್ನು ಜನವರಿ 15 ರಿಂದ 26 ರವರೆಗೆ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಿವಿಧ ಉದ್ಯಾನವನಗಳು,  ತೋಟಗಳು, ತಾರಸಿ/ ಕೈತೋಟಗಳು, ತರಕಾರಿ/ ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2026 ರ ಜನವರಿ 17 ರಂದು ಹಮ್ಮಿಕೊಳ್ಳಲಾಗಿದೆ. 

ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು / ಪ್ರದರ್ಶಕರಿಂದ ಅರ್ಜಿಗಳನ್ನು 2026 ಜನವರಿ 5 ರಿಂದ 12 ರವರೆಗೆ ಸ್ವೀಕರಿಸಲಾಗುವುದು. ತೋಟಗಾರಿಕಾ ಅಪರ ನಿರ್ದೇಶಕರು (ತಾಳೆಬೆಳೆÉ) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ತಾರಕೇಶ್ವರಿ ಕೆ.ಆರ್ ಅವರನ್ನು 8497048733 ಮೂಲಕ ಹಾಗೂ ಪುಷ್ಪಲತಾ ಎಂ. ಅವರನ್ನು 8904592122 ಮೂಲಕ ಸಂಪರ್ಕಿಸಬಹುದು.
ವಿವಿಧ ಉದ್ಯಾನವನಗಳು, ತೋಟಗಳ ಸ್ಪರ್ಧೆ / ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಅರ್ಜಿಗಳನ್ನು ಜನವರಿ 02 ರಿಂದ 09 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಅಪರ ನಿರ್ದೇಶಕರು (ತೋಟದ ಬೆಳೆಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ್ ವೈ.ಸಿ. ಅವರನ್ನು 9845549545, ವಿನೋದ್ ರಾಯರ್ ಅವರನ್ನು 9886819217 ಹಾಗೂ ನವೀನ್ ಕುಮಾರ್ ಅವರನ್ನು 9844199867 ಮೂಲಕ ಸಂಪರ್ಕಿಸುವುದು.
ಇಲಾಖಾ ಮಳಿಗೆಗಳ ಹಂಚಿಕೆಗಾಗಿ ಜನವರಿ 02 ರಿಂದ ಜನವರಿ 06 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅರ್ಜಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಲಾಲ್‍ಬಾಗ್, ಬೆಂಗಳೂರು ಕಚೇರಿಯಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶೃತಿ ಟಿ. ನಾಯ್ಕ್ ಅವರನ್ನು 9036986445, ಪ್ರಮೋದ್ ಅವರನ್ನು 8050592016, ಹಾಗೂ ಉಮಾ ಅವರನ್ನು 9008094261 ಮೂಲಕ ಸಂಪರ್ಕಿಸುವಂತೆ ಲಾಲ್‍ಬಾಗ್ ಸಸ್ಯ ತೋಟದ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)