ಬೆಂಗಳೂರು : ರಾಜ್ಯ ಸರ್ಕಾರದೊಂದಿಗೆ ಮಾನವ ಪ್ರತಿಭೆಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ವಿನಿಯಮ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಒಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಲೇಷಿಯಾದ ದ್ವೀಪ ರಾಜ್ಯ ಪೆನಾಂಗ್ನ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ಡಿಯೋ ಹೇಳಿದ್ದಾರೆ. ಪೆನಾಂಗ್ನ ಉನ್ನತ ಮಟ್ಟದ ನಿಯೋಗ ಆನೇಕಲ್ ನಲ್ಲಿರುವ ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯ, ನಾವೀನ್ಯತೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆ ಫಲಪ್ರದ ಮಾತುಕತೆ ನಡೆಸಿದ್ದೇವೆ. ರಾಜ್ಯ ಸರ್ಕಾರ ಎಂ.ಯು.ಒ.ಯುಗೆ ಸಹಿ ಹಾಕಲು ಸಮ್ಮತಿಸಿದೆ.
ಸಾಯಿ ರಾಂ ನಂತಹ ಕಾಲೇಜುಗಳು ಇಂತಹ ವಿಷಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಾತ್ರ ನಿರ್ವಹಿಸಲಿವೆ. ಸಾಯಿರಾಂ ಕಾಲೇಜಿನ ಸೌಲಭ್ಯಗಳನ್ನು ವೀಕ್ಷಿಸಿ ಉತ್ಸುಕನಾಗಿದ್ಧೇನೆ. ಮಾನವ ಪ್ರತಿಭೆ ಅಭಿವೃದ್ದಿ ವಲಯ ಅತ್ಯಂತ ಅಗತ್ಯವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ನಿಜಕ್ಕೂ ಪ್ರಮುಖವಾದದ್ದು. ಭವಿಷ್ಯದ ಪೀಳಿಗೆ ದೃಷ್ಟಿಯಿಂದ ನಾವು ಹೈಟೆಕ್ ಅಷ್ಟೇ ಅಲ್ಲದೇ ಡೀಪ್ ಟೆಕ್ ಆಗಿ ಕೂಡ ಕೆಲಸ ಮಾಡಬೇಕು. ಹಾಗಾಗಿ ಆಳವಾದ ಕಲಿಗೆ ಒತ್ತು ನೀಡುತ್ತಿದ್ದೇವೆ ಎಂದರು.
ತಿಂಗಳ ಹಿಂದೆ ನನ್ನನ್ನು ಸಾಯಿರಾಂ ಕಾಲೇಜಿನ ಆಡಳಿತ ಮಂಡಳಿಯವರು ಪೆನಾಂಗ್ ಭೇಟಿ ಮಾಡಿದ್ದರು. ನಾವು ಇಂತಹ ಕ್ಯಾಂಪಸ್ ನಲ್ಲಿ ಸಾಕಷ್ಟು ಕಲಿಯುತ್ತೇವೆ. ವಿದ್ಯಾರ್ಥಿಗಳ ವಿನಿಯಮದ ಜೊತೆಗೆ ತಂತ್ರಜ್ಞಾನ ವಿನಿಮಯೂ ಆಗಬೇಕಾಗಿದೆ. ಆದರೆ ಇವತ್ತಿನ ತಂತ್ರಜ್ಞಾನ, ಇವತ್ತಿನ ವಿಜ್ಞಾನ ನಾಳೆಗೆ ಬದಲಾಗುತ್ತದೆ. ತಂತ್ರಜ್ಞಾನ ಪರಿಣಿತಿಯನ್ನು ಬಯಸುತ್ತದೆ. ಕೈಗಾರಿಕೆಗಳಿಗೆ ತಂತ್ರಜ್ಞಾನ ಪರಿಣಿತರು ಅಗತ್ಯವಾಗಿದ್ದಾರೆ. ಇಡೀ ಜಗತ್ತು ಸಹಭಾಗಿತ್ವನ್ನು ಎದುರುನೋಡುತ್ತಿದೆ.
ಪೆನಾಂಗ್ ನಲ್ಲಿ 500 ಕ್ಕೂ ಬಹುರಾಷ್ಟ್ರೀಯ ಕಂಪೆನಿಗಳಿದ್ದು, 7000ಕ್ಕೂ ಅಧಿಕ ಎಂ.ಎಸ್.ಎಂ.ಇಗಳಿವೆ. ಭಾರತದ ಯುವ ಸಮೂಹ ಆಕರ್ಷಕವಾಗಿದ್ದು, ಇದೀಗ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಕೇಂದ್ರೀಕರಿಸಿದ್ದೇವೆ. ನಾವೀನ್ಯತೆಯಲ್ಲಿ ಭಾರತದೊಂದಿಗೆ ಬಾಂಧವ್ಯ ಹೊಂದಿದ್ದು, ಎರಡು ದಿನಗಳ ಬೆಂಗಳೂರು ಭೇಟಿ ಸಾಕಷ್ಟು ರೀತಿಯಲ್ಲಿ ಅನುಕೂಲವಾಗಿದೆ ಎಂದರು. ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ಡಿಯೋ ಅವರು, ಕಾಲೇಜಿನಲ್ಲಿ ಶೈಕ್ಷಣಿಕ ನಾವೀನ್ಯತೆ, ಭವಿಷ್ಯದ ತಂತ್ರಜ್ಞಾನ, ಜಾಗತಿಕ ಸಹಭಾಗಿತ್ವ ಕುರಿತು ಚರ್ಚಿಸಿದರು.