ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತ್ತೀಕೆರೆ ಬಡಾವಣೆ ವಾರ್ಡ್ 36 ರ, 3ನೇ ಮುಖ್ಯ ರಸ್ತೆಯಿಂದ ಜಯರಾಮ್ ಕಾಲೋನಿಯ ವರೆಗಿನ ಸುತ್ತಮುತ್ತಲಿನ ಪ್ರದೇಶ ಮತ್ತು ರಾಮಯ್ಯ ಕಾಲೇಜು ಬಸ್ ನಿಲ್ದಾಣದ ಬಳಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ, ಸುಮಾರು 50 ಲಕ್ಷ ರೂ. ಗಳ ಅಂದಾಜು ವೆಚ್ಚದಲ್ಲಿ ಒಳಚರಂಡಿ ಕೊಳವೆ ಮಾರ್ಗಗಳ ಉನ್ನತೀಕರಣಗೊಳಿಸುವ ಕಾಮಗಾರಿಗೆ, ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಸಿ. ಎನ್. ಅಶ್ವಥನಾರಾಯಣ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡ, ಜಯಪ್ರಕಾಶ್, ಜಲ ಮಂಡಳಿಯ ಇ ಇ ರೂಪ ಎನ್., ಎ ಇ ಇ ಹರೀಶ್, ಗುತ್ತಿಗೆದಾರರಾದ ಹರೀಶ್ ಬಿ. ಸಿ., ತೇಜಸ್, ಬಿಜೆಪಿ ಮುಖಂಡರಾದ ಸತ್ಯನಾರಾಯಣ (ನಾಣಿ), ಕೆ. ವಿ.ರಾಜು, ಶಿವಣ್ಣ, ವೀರಯ್ಯ, ಕೃಷ್ಣ, ರಾಮಮೂರ್ತಿ, ಶರತ್, ಭಾರತಿ ಆರ್., ಭಾಸ್ಕರ್ ನಾಯ್ಡು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
