ಬೆಂಗಳೂರು : ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಬೆಂಗಳೂರು ಇಲ್ಲಿ 2013 ರಿಂದ ಆನ್ ಲೈನ್ ಬಯೋಮೆಟ್ರಿಕ್ ಮೂಲಕ ಆಯುರ್ವೇದ ಪ್ರಕೃತಿ ಚಿಕಿತ್ಸೆ, ಸಿದ್ದ ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿಯನ್ನು ಪ್ರಾರಂಭಿಸಲಾಗಿದೆ. 2013ರ ಹಿಂದಿನ ಅವಧಿಯಲ್ಲಿ ಈ ಮಂಡಳಿಯಲ್ಲಿ ನೋಂದಣಿಗೊಂಡಿರುವ ವೈದ್ಯರುಗಳ ನೋಂದಣಿಯನ್ನು ಆನ್ ಲೈನ್ ಬಯೋಮೆಟ್ರಿಕ್ ಮೂಲಕ ನೋಂದಾಯಿಸಿಕೊಳ್ಳಲು ಇದುವರೆಗೂ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆನ್ ಲೈನ್ ಬಯೋಮೆಟ್ರಿಕ್ ನೋಂದಣಿಗೊಳ್ಳದ ವೈದ್ಯರುಗಳು ಕಡ್ಡಾಯವಾಗಿ 2026 ರ ಮಾರ್ಚ್ 30 ರೊಳಗಾಗಿ ಆನ್ ಲೈನ್ ಬಯೋಮೆಟ್ರಿಕ್ ಗೆ ನೋಂದಣಿಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈದ್ಯರುಗಳ ಅನುಕೂಲಕ್ಕಾಗಿ ವೈದ್ಯರುಗಳ ನೋಂದಣಿಗೆ ಸಂಬಂಧಪಟ್ಟ ಸಾಫ್ಟ್‍ವೇರ್ ಅನ್ನು ಹಂತ ಹಂತವಾಗಿ ಉನ್ನತಿಕರಿಸಲಾಗುತ್ತಿದೆ. ಸಾಫ್ಟ್‍ವೇರ್ ಉನ್ನತಿಕರಿಸಿದ ನಂತರ ಬಯೋಮೆಟ್ರಿಕ್ ನೋಂದಣಿಗೆ ಅವಕಾಶವಿರುವುದಿಲ್ಲ ಹಾಗೂ ಬಯೋಮೆಟ್ರಿಕ್ ನೋಂದಣಿಗೊಳ್ಳದ ವೈದ್ಯರು ವೈದ್ಯ ವೃತ್ತಿಯನ್ನು ಮುಂದುವರೆಸಿದ್ದಲ್ಲಿ ಅಂತಹವರಿಗೆ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುμï ಅಧಿಕಾರಿಗಳು KAUP Act 1961 ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ವಹಿಸುತ್ತಾರೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment
0Comments