ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ನ್ಯಾಯಾಲಯದ ಪ್ರಕರಣಗಳನ್ನು ಹಾಗೂ ಇಲಾಖಾ ವಿಚಾರಣೆಗಳನ್ನು ನಿರ್ವಹಿಸಲು ಅನುಭವಸ್ಥ ಗರಿಷ್ಟ 65 ವರ್ಷದೊಳಗಿನ ನಿವೃತ್ತ ನ್ಯಾಯಾಧೀಶರನ್ನು ಮಾಸಿಕ ರೂ.50000/-ಗಳ ಗೌರವಧನದ ಆಧಾರದ ಮೇಲೆ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೈಟ್ http://dwdsc.karnataka.gov.in ನಲ್ಲಿ ಪ್ರಕಟಿಸಿದ್ದು, ಇಚ್ಛೆಯುಳ್ಳ ಅರ್ಹರು ಅರ್ಜಿಯನ್ನು ಜನವರಿ 5 ರ ಒಳಗೆ ಸಲ್ಲಿಸಬಹುದು ಎಂದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment
0Comments