ಬೆಂಗಳೂರು : ಈಜುಕೊಳದ ಬಡಾವಣೆಯ ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನವರಿ 8 ರಿಂದ ಹತ್ತು ದಿನಗಳ ಕಾಲ 'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಪವನ್ ದೀಪ್, ಕು|| ಅವನಿ ಭಟ್, ಶ್ರೀಮತಿ ವೈಷ್ಣವಿ ಮಧುಸೂದನ್ ಕೊಪ್ಪ, ಶ್ರೀ ರಾಕೇಶ್ ಕುಲಕರ್ಣಿ, ಶ್ರೀಮತಿ ಸಂಧ್ಯಾ ಶ್ರೀನಾಥ್, ಶ್ರೀ ಆನಂದ್ ದೇಶಪಾಂಡೆ, ಶ್ರೀಮತಿ ಅನುಕೃಪ ರೌಡೂರ್ ಇವರಿಂದ ದಾಸವಾಣಿ ಮತ್ತು ಮಾ|| ತ್ರಿಧಾತ್ ಸಾಗರ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು .
ಶ್ರೀ ಪುರಂದರದಾಸರ ಪೂರ್ವಾರಾಧನೆಯಂದು (ಜನವರಿ 17) ಚಿ|| ಜಿ. ಅಪ್ರಮೇಯ ಮತ್ತು ಕು|| ಧೃತಿ ಆತ್ರೇಯ ಇವರು ಹಾಡಿದ ಮಧ್ವರಾಯರ ನೆನೆದು, ಶರಣೆಂಬೆ ವಾಣಿ, ಮೆಲ್ಲ ಮೆಲ್ಲನೆ ಬಂದನೆ, ಬಾರಯ್ಯ ಬಾ ಬಾ ಭಕುತರ ಪ್ರಿಯಾ, ಕಾಗದ ಬಂದಿದೆ, ರಾಮನಾಮವೆಂಬೋ ಮತ್ತು ತಂಬೂರಿ ಮೀಟಿದವ ಈ ಹಾಡುಗಳಿಗೆ ನಾಲ್ಕು ವರ್ಷದ ಪುಟ್ಟ ಪೋರಿ ಧನ್ವಿ ಆತ್ರೇಯ (ಶ್ರೀಮತಿ ಅಶ್ವಿನಿ ಮತ್ತು ಶ್ರೀ ಬದರಿ ಪ್ರಸಾದ್ ಇವರ ಕಿರಿಯ ಪುತ್ರಿ) ಮಾಡಿದ ನೃತ್ಯ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
ವಾದ್ಯ ಸಹಕಾರದಲ್ಲಿ ಶ್ರೀ ಟಿ.ಎಸ್. ರಮೇಶ್ (ಕೀಬೋರ್ಡ್), ಶ್ರೀ ಬಿ.ಆರ್. ಪ್ರಕಾಶ್ (ತಬಲಾ) ಸಾಥ್ ನೀಡಿದರು. ಶ್ರೀ ಗುರುಪ್ರಸಾದ್ ಮತ್ತು ಶ್ರೀ ಬದರಿ ಪ್ರಸಾದ್ ನಿರೂಪಣೆ ಮಾಡಿದರು.
