ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾದೇಶಿ ನುಸುಳುವಿಕೆ : ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯ !

varthajala
0

 ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಇದು ರಾಷ್ಟ್ರದ ಭದ್ರತೆ, ಕಾನೂನು–ಸುವ್ಯವಸ್ಥೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಸವಾಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ಗಂಭೀರ ಎಚ್ಚರಿಕೆ ನೀಡಿದರು. 

ಇತ್ತೀಚಿನ ಗುರುತಿನ ಅಭಿಯಾನದಲ್ಲಿ ಅನೇಕ ಅಕ್ರಮ ನುಸುಳುಗಾರರ ಬಳಿ ನಕಲಿ ಆಧಾರ್, ಪ್ಯಾನ್ ಹಾಗೂ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಕೇವಲ ₹1500ಕ್ಕೆ ಆಧಾರ್ ಕಾರ್ಡ್ ಸಿಗುತ್ತಿರುವುದು ದೇಶದ ಗುರುತಿನ ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ. ಕೆಲವರ ಬಳಿ ಬಾಂಗ್ಲಾದೇಶ ಮತ್ತು ಭಾರತದ ಎರಡೂ ಮತದಾರರ ಗುರುತಿನ ಚೀಟಿಗಳು ಇರುವುದೂ ಬೆಳಕಿಗೆ ಬಂದಿದೆ. ಬೆಟ್ಟದಾಸನಪುರ, ಹುಲಿಮಂಗಲ, ಯಲಹಂಕ ಸೇರಿ ಹಲವೆಡೆ ಅಕ್ರಮ ವಸತಿಗಳು ಬೆಳೆಯುತ್ತಿದ್ದು, ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆ, ಸಾಲ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಮಾಡಲಾಗುತ್ತಿದೆ. ಎಕ್ಸ್‌ಪೈರ್ಡ್ ಗ್ಯಾಸ್ ಸಿಲಿಂಡರ್‌ಗಳ ಮರುಮಾರಾಟದಂತಹ ಜೀವಘಾತಕ ಅಕ್ರಮ ಚಟುವಟಿಕೆಗಳೂ ಪತ್ತೆಯಾಗಿವೆ. ಹುಲಿಮಂಗಲದಲ್ಲಿ ನಡೆದ ತೆರವು ಕಾರ್ಯಾಚರಣೆ ವೇಳೆ “ಭಾರತ ಮಾತಾ ಕೀ ಜೈ”ಗೆ ನಿರಾಕರಣೆ ಮಾಡಿ “ಜೈ ಬಂಗ್ಲಾ” ಘೋಷಣೆ ಕೂಗಿದ ಘಟನೆ ರಾಷ್ಟ್ರವಿರೋಧಿ ಮನೋಭಾವವನ್ನು ಬಹಿರಂಗಪಡಿಸಿದೆ. ಹಿಂದಿನ ವರ್ಷಗಳಲ್ಲಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕರ ಬಂಧನಗಳು ನಡೆದಿರುವುದರಿಂದ ಈ ಸಮಸ್ಯೆಯ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ. 
ಪೊಲೀಸ್ ಹಾಗೂ ಆಡಳಿತದ ನಿರ್ಲಕ್ಷ್ಯದಿಂದ ನಕಲಿ ದಾಖಲೆ ತೋರಿಸಿ ಅಕ್ರಮ ನುಸುಳಿಗಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಸಂಘಟನೆಗಳ ಒತ್ತಡದಿಂದ ಇತ್ತೀಚೆಗೆ ಹೆಬ್ಬಗೋಡಿ ಹಾಗೂ ಆನೇಕಲ್ ವ್ಯಾಪ್ತಿಯಲ್ಲಿ 33 ಅಕ್ರಮ ಬಾಂಗ್ಲಾದೇಶಿಗಳು ಬಂಧನ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 20 ಲಕ್ಷ ಅಕ್ರಮ ಬಾಂಗ್ಲಾದೇಶಿಗಳು ವಾಸಿಸುತ್ತಿರುವ ಅಂದಾಜಿದೆ.
 *ಪ್ರಮುಖ ಬೇಡಿಕೆಗಳು* 

1. ಅಕ್ರಮ ಬಾಂಗ್ಲಾದೇಶಿ ನುಸುಳುಗಾರರ ವಿರುದ್ಧ ವಿಶೇಷ ತನಿಖಾ ಅಭಿಯಾನ ತಕ್ಷಣ ಆರಂಭಿಸಿ, ದೇಶದ್ರೋಹದ ಆರೋಪ ದಾಖಲಿಸಬೇಕು.

2. ನಕಲಿ ದಾಖಲೆ ತಯಾರಿಸುವ ಜಾಲವನ್ನು ಬೇರುಸಮೇತ ನಾಶಪಡಿಸಬೇಕು.

3. ಎಲ್ಲಾ ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ತಕ್ಷಣವೇ ಡಿಪೋರ್ಟ್ ಮಾಡಬೇಕು.

4. ಅವರಿಗೆ ಬೆಂಬಲ ನೀಡುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

5. UNHCR ಕಾರ್ಡ್ ದುರುಪಯೋಗ ಕುರಿತು ಕೇಂದ್ರ ಸರ್ಕಾರ ತಕ್ಷಣ ಹಸ್ತಕ್ಷೇಪ ಮಾಡಬೇಕು.

Post a Comment

0Comments

Post a Comment (0)