ಬೆಂಗಳೂರು: ತೆಂಗಿನ ಬೆಳೆ ಹಾನಿಗೆ ವಿಮೆ ಜಾರಿ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ 1.79 ಲಕ್ಷ ಹೆಕ್ಟೇರ್‍ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ 8,817 ಹೆಕ್ಟೇರ್ ಪ್ರದೇಶದಲ್ಲಿ ಕೆಂಪುಮೂತಿಹುಳ ಮತ್ತು 22,071 - ಹೆಕ್ಟೇರ್ ಪ್ರದೇಶದಲ್ಲಿ ಅಣಬೆ ರೋಗಕ್ಕೆ ತುತ್ತಾಗಿರುವುದಾಗಿ ಅಂದಾಜಿಸಲಾಗಿದೆ. ಇವುಗಳ ನಿಯಂತ್ರಣಕ್ಕೆ ತೆಂಗಿನ ತೋಟಗಳ ಪುನ:ಶ್ಚೇತನ, ಮರುನಾಟಿ ಮತ್ತು ನಿರ್ವಹಣೆಯಿಂದ ತೆಂಗಿನ ಮರಗಳು ಸದೃಡಗೊಂಡು ರೋಗ / ಕೀಟ ನಿರೋಧಕ ಶಕ್ತಿ ಬೆಳಸಿಕೊಳ್ಳುತ್ತವೆ ಅದುದರಿಂದ ಈ ಚಟುವಟಿಕೆಗಳಿಗಾಗಿ ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್ ವರೆಗೆ ರೂ. 54,000/-ಗಳನ್ನು ಎರಡು ವರ್ಷದ ಅವಧಿಗೆ ಸಹಾಯಧನ ನೀಡಲಾಗುತ್ತಿದೆ. ಮೊದಲನೇ ವರ್ಷ ರೂ.45,250/-ಗಳನ್ನು ಹಾಗೂ ಎರಡನೇ ವರ್ಷದ ನಿರ್ವಹಣೆಗೆ ರೂ.8,750/ ಗಳ ಸಹಾಯಧನವನ್ನು ನೀಡಲಾಗುತ್ತಿದೆ.
ತೆಂಗು ಬೆಳೆಗೆ ವಿಮೆ - ಕೇಂದ್ರಕ್ಕೆ ಮನವಿ –ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
January 27, 2026
0
ಮೊದಲನೇ ವರ್ಷದಲ್ಲಿ ರೋಗ / ಕೀಟ ಬಾಧಿತ, ಒಣಗಿದ ಮರ ತೆಗೆಯಲು, ಹೊಸ ತೆಂಗಿನ ಗಿಡ ನೆಡಲು, ನಿರ್ವಹಣೆಗಾಗಿ ಪೋಷಕಂಶಗಳು, ಬೇವಿನ ಹಿಂಡಿ, ಹಸಿರಿಲೆ ಗೊಬ್ಬರದ ಬೀಜಗಳು, ಸಸ್ಯಸಂರಕ್ಷಣ ಔಷಧಿಗಳನ್ನು ನೀಡಲು 4571 ರೈತರಿಗೆ 2423 ಹೆಕ್ಟೇರ್ ಪ್ರದೇಶಕ್ಕಾಗಿ ರೂ.951 ಲಕ್ಷಗಳ ಸಹಾಯಧನ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 1084 ರೈತರಿಗೆ 591 ಹೆಕ್ಟೇರ್ ಪ್ರದೇಶದಲ್ಲಿ ರೂ. 187.17 ಲಕ್ಷಗಳ ಸಹಾಯಧನ ನೀಡಲಾಗಿದೆ. ಈ ಪ್ರದೇಶದ ಎರಡನೇ ವರ್ಷದ ನಿರ್ವಹಣೆಗಾಗಿ ರೂ.186.04 ಲಕ್ಷಗಳನ್ನು ವಿನಿಯೋಗಿಸಲಾಗಿದೆ.
ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆ ಹಾಗೂ ನಿರ್ವಹಣೆಗಾಗಿ ಒಂದು ಹೆಕ್ಟೇರ್‍ಗೆ ರೂ. 35,000/- ಗಳಂತೆ 2 ವರ್ಷಗಳ ಅವಧಿಗೆ ಮೊದಲನೇ ವರ್ಷ ರೂ.17500/- ಗಳು ಮತ್ತು ಎರಡನೇ ವರ್ಷದಲ್ಲಿ ರೂ.17500/- ಗಳಂತೆ ಸಹಾಯಧನ ನೀಡಲಾಗುತ್ತಿದೆ. ರೋಗ ಮತ್ತು ಕೀಟಬಾಧಿತ ತಾಕುಗಳನ್ನು ಗುಚ್ಛಗಳಲ್ಲಿ ಆಯ್ಕೆ ಮಾಡಿ ಸಹಾಯಧನ ನೀಡಲಾಗಿರುತ್ತದೆ. ಮೊದಲನೇ ವರ್ಷದ ಕಾರ್ಯಕ್ರಮದಡಿ 41185 ರೈತರಿಗೆ 28420 ಹೆಕ್ಟೇರ್ ಪ್ರದೇಶದಲ್ಲಿ ರೂ. 5000 ಲಕ್ಷಗಳ ಸಹಾಯಧನ ಒದಗಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 15338 ರೈತರಿಗೆ 9840 ಹೆಕ್ಟೇರ್ ಪ್ರದೇಶದಲ್ಲಿ ರೂ. 1829.87 ಲಕ್ಷಗಳ ಸಹಾಯಧನ ನೀಡಲಾಗಿದೆ. ಈ ಪ್ರದೇಶದ ಎರಡನೇ ವರ್ಷದ ನಿರ್ವಹಣೆಗಾಗಿ ರೂ.4973.45 ಲಕ್ಷಗಳ ಅನುದಾನ ವಿನಿಯೋಗಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 12312 ರೈತರಿಗೆ 8362 ಹೆಕ್ಟೇರ್ ಪ್ರದೇಶದಲ್ಲಿ ರೂ. 1385 ಲಕ್ಷಗಳ ಸಹಾಯಧನ ನೀಡಲಾಗಿದೆ.
ತೆಂಗು ಬೆಳೆಯಲ್ಲಿ ಕಂಡು ಬರುವ ಕಪ್ಪು ತಲೆಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 140.00 ಲಕ್ಷಗಳ ಅನುದಾನ ನಿಗದಿಯಾಗಿದ್ದು, ತುಮಕೂರು ಜಿಲ್ಲೆಗೆ 21.00 ಲಕ್ಷಗಳನ್ನು ನೀಡಲಾಗಿದೆ.
ತೆಂಗು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಔಷಧಿಗಳಿಗೆ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಪ್ರತಿ ಹೆಕ್ಟೇರಿಗೆ ತಗಲುವ ರೂ. 10000/-ಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಂತೆ ರೂ.9000/- ಗಳ ಸಹಾಯಧನ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ.75ರಂತೆ ರೂ.7500ಗಳ ಸಹಾಯಧನ ನೀಡಲಾಗುತ್ತಿದೆ.
ತೆಂಗು ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಮಗ್ರ ರೋಗ / ಕೀಟಗಳ ಹಾಗೂ ಪೆÇೀಷಕಾಂಶಗಳ ನಿರ್ವಹಣೆಗಾಗಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೂ.5000/- ಗಳಲ್ಲಿ ಪ್ರತಿ ಹೆಕ್ಟೇರ್ ಗೆ ತಗಲುವ ವೆಚ್ಚದ ಶೇ.30ರಂತೆ ಪ್ರತಿ ಹೆಕ್ಟೇರಿಗೆ ರೂ.1500 ದರದಲ್ಲಿ 2 ಹೆಕ್ಟೇರ್ ವರೆಗೆ ರೂ.3000/-ಸಹಾಯಧನ ನೀಡಲಾಗುತ್ತಿದೆ.
ದಿನಾಂಕ: 31-07-2025 ಹಾಗೂ 01.08.2025 ರಂದು ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್ ಕಾಸರಗೋಡು, ತೋಟಗಾರಿಕೆ ವಿಶ್ವ ವಿದ್ಯಾನಿಲಯ ತಜ್ಞರು, ಸಿ.ಬಿ.ಡಿ ಅಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳಿಂದ ತೆಂಗು ಬೆಳೆಯಲ್ಲಿ ಕಂಡು ಬರುವ ರೋಗ / ಕೀಟಗಳಿಗೆ ಹಾನಿಗೊಳಗಾದ ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ರೈತರ ತಾಕುಗಳಲ್ಲಿ 12 ಪ್ರಾತ್ಯಕ್ಷತೆ / 85 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 12500 ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ವತಿಯಿಂದ ರಚಿಸಿರುವ ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದ್ದು, ದಿನಾಂಕ:11.11.2025 ರಂದು ನಿರ್ದೇಶಕರು, ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್, ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ರವರ ಉಪಸ್ಥತಿಯಲ್ಲಿ ನಡೆದ ಸಭೆಯಲ್ಲಿ ಇಲಾಖಾ ಅನುμÁ್ಠನಾಧಿಕಾರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಪ್ಪುತಲೆ ಹುಳುವಿನ ನಿಯಂತ್ರಣಕ್ಕೆ ತಾಕುಗಳ ನೈರ್ಮಲ್ಯಗೊಳಿಸುವುದು, ಬಾಧಿತ ಮರದ ಎಲೆ, ಕಾಂಡ ಕತ್ತರಿಸಿ ನಾಶಪಡಿಸುವುದು, ಪರೋಪ ಜೀವಿಗಳ ಉತ್ಪಾದನೆ ಮಾಡಿ ವಿತರಿಸುವುದು, ಪರೋಪ ಜೀವಿಗಳ ಉತ್ಪಾದನೆಗೆ ಪ್ರಯೋಗಶಾಲೆಗಳ ನಿರ್ಮಾಣ ಹಾಗೂ ಬಾಧೆಯ ನಿಯಂತ್ರಣಕ್ಕೆ ಬೇವಿನ ಎಣ್ಣೆ, ಐಸೇರಿಯಾ ಜೈವಿಕ ಶಿಲೀಂದ್ರ ಕೀಟನಾಶಕ/ಸಿಂಪ್ಲಿಸಿಲಿಯಂ ಯನ್ನು ಸಿಂಪಡಿಸುವುದು.
ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಬೇವಿನಹಿಂಡಿ, ಜೈವಿಕ ಗೊಬ್ಬರಗಳು, ಟ್ರೈಕೊಡರ್ಮಾ, ಮಣ್ಣು ಸುಧಾರಕಗಳು ಹಾಗೂ ಪೊಟ್ಯಾಶ್ ಗೊಬ್ಬರವನ್ನು ನೀಡಲು, ಈ ಕೀಟಗಳ ನಿಯಂತ್ರಣಕ್ಕೆ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡು ಹಾಗೂ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ ಉನ್ನತಿಕರಣಗೊಳಿಸುವುದು. ಬಿಳಿನೊಣ ಬೆಂಗಳೂರುಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು, ಸೇರಿದಂತೆ ಸಮಗ್ರ ಕೀಟ/ಪೋಷಕಾಂಶಗಳ ನಿರ್ವಹಣೆಗೆ ತುಮಕೂರು ಜಿಲ್ಲೆ ಸೇರಿದಂತೆ ಪ್ರಮುಖ ತೆಂಗು ಬೆಳೆಯುವ ಜಿಲ್ಲೆಗಳಿಗೆ ರೂ. 791.05 ಕೋಟಿಗಳ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್, ಕಾಸರಗೋಡು ರವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.