ಶೈತ್ಯಾಗರ ಘಟಕಗಳ ನಿರ್ಮಿಸಲು ಉತ್ತೇಜನ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

varthajala
0

 ಬೆಂಗಳೂರು : ತೋಟಗಾರಿಕಾ ಬೆಳೆಗಳು ಬೇಗನೆ ಹಾಳಾಗುವುದನ್ನು ತಪ್ಪಿಸಲು  ಶೈತ್ಯಾಗಾರ ಘಟಕಗಳನ್ನು ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 11 ಶೈತ್ಯಾಗಾರ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು. ಇಂದು ವಿಧನ ಪರಿಷತ್ತಿನ ಪ್ರಶ್ನೋತ್ರ ಕಲಾಪದ ವೇಳೆ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ತೋಟಗಾರಿಕೆ ಬೆಳೆಗಳು ಬೇಗನೆ ಹಾಳಾಗುವುದನ್ನು ತಡೆಯಲು ಶೈತ್ಯಾಗಾರ ಘಟಕಗಳನ್ನು ಹೆಚ್ಚಿಸಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಮಿಷನ್ ರಾಷ್ಟ್ರೀಯ ತೋಟಗಾರಿಕೆ ಯೋಜನೆಯಡಿ ರೈತರು/ಉದ್ದಿಮೆದಾರರು/ ರೈತ ಉತ್ಪಾದಕ ಸಂಸ್ಥೆಗಳಿಗೆ ಶೈತ್ಯಾಗಾರ/ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ. 

ಏಕ ಉತ್ಪನ್ನದ ಶೇಖರಣೆಗೆ (ಟೈಪ್-1) ನಿರ್ಮಿಸಲಾಗುವ ಶೀತಲಗೃಹದ ಘಟಕ ವೆಚ್ಚ ಪ್ರತಿ ಮೆಟ್ರಿಕ್ ಟನ್‍ಗೆ ರೂ. 9,600/- ಗಳಾಗಿದ್ದು, ಇದರಲ್ಲಿ ಶೇ.35 ರಷ್ಟು ಅಂದರೆ ಪ್ರತಿ ರೂ. 3,360/- ಸಹಾಯಧನ ನೀಡಲಾಗುವುದು. ಬಹು ಉತ್ಪನ್ನದ ಶೇಖರಣೆಗೆ (ಟೈಪ್ -2) ನಿರ್ಮಿಸಲಾಗುವ ಶೀತಲ ಗೃಹದ ಘಟಕ ವೆಚ್ಚ ಪ್ರತಿ ಮೆಟ್ರಿಕ್ ಟನ್ ಗೆ ರೂ.12,000/- ಗಳಾಗಿದ್ದು, ಇದರಲ್ಲಿ ಶೇ.35 ರಷ್ಟು ಅಂದರೆ ಪ್ರತಿ ಮೆಟ್ರಿಕ್ ಟನ್ ಗೆ ರೂ.4,200/- ಸಹಾಯಧನ ನೀಡಲಾಗುವುದು. ಕನಿಷ್ಠ 500 ಮೆಟ್ರಿಕ್ ಟನ್ ನಿಂದ ಗರಿಷ್ಠ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಶೈತ್ಯಾಗಾರ ನಿರ್ಮಿಸಬಹುದು. ಈ ವರ್ಷ 11 ಶೈತ್ಯಾಗಾರ ಘಟಕಗಳಿಗೆ ಅನುಮೋದನೆ ನೀಡಲಾಗಿದೆ. 
ಪ್ರಸಕ್ತ ವರ್ಷದಲ್ಲಿ ಹನಿ ನೀರಾವರಿ ಸೌಲಭ್ಯ ಪಡೆದಿರುವ ಎಲ್ಲಾ ರೈತರಿಗೆ ಕೇಂದ್ರ ಪಾಲು ಹಾಗೂ ರಾಜ್ಯ ಕಡ್ಡಾಯ ಪಾಲಿನ ಅನುದಾನವನ್ನು ನೀಡಲಾಗಿದೆ. ಹೆಚ್ಚುವರಿ ರಾಜ್ಯ ಪಾಲಿನ (ಟಾಪ್ ಅಫ್) ಅನುದಾನವು  ಬಿಡುಗಡೆಗೆ ಬಾಕಿ ಇದೆ. ಈ ಕುರಿತಂತೆ ಅನುದಾನ ಬಿಡುಗಡೆ  ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 
2024-25ನೇ ಸಾಲಿನಿಂದ ಹನಿ ನೀರಾವರಿ ಯೋಜನೆಯಡಿ 7 ವರ್ಷದ ನಂತರ ಅದೇ ಜಮೀನಿಗೆ ಸಹಾಯಧನವನ್ನು ಒದಗಿಸಲು ಅನುಮತಿಸಲಾಗಿದೆ. ಹೀಗಾಗಿ ಹೆಚ್ಚಿನ ರೈತರಿಂದ ಅರ್ಜಿಗಳು ಬಂದಿದ್ದು ಜೇಷ್ಠತಾ ಆಧಾರದ ಮೇಲೆ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ ರೂ 62.00 ಕೋಟಿ ಅನುದಾನವನ್ನು ತೋಟಗಾರಿಕೆ ಇಲಾಖೆಗೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 
ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪ್ರತಿ ಹನಿಗೆ ಅಧಿಕ ಬೆಳ ಕಾರ್ಯಕ್ರಮದಡಿ 2024-25ನೇ ಸಾಲಿನವರೆಗೂ ಬಿಡುಗಡೆಗೆ ಬಾಕಿ ಇರುವ ರಾಜ್ಯ ಹೆಚ್ಚುವರಿ ಪಾಲಿನ ಅನುದಾನ ರೂ.9729.55 ಲಕ್ಷಗಳು ಹಾಗೂ 2025-26ನೇ ಸಾಲಿನ ಮೊದಲನೇ ಮತ್ತು ಎರಡನೇ ಕಂತಿನಲ್ಲಿ ತೋಟಗಾರಿಕೆ ಇಲಾಖೆಗೆ ಹಂಚಿಕೆಯಾದ ಮೊತ್ತಕ್ಕನುಗುಣವಾಗಿ ಬಿಡುಗಡೆಯಾಗಬೇಕಾಗಿರುವ ರಾಜ್ಯ ಹೆಚ್ಚುವರಿ ಪಾಲಿನ (ಟಾಪ್‍ಅಫ್ 35%) ಅನುದಾನ ರೂ. 16321.00 ಲಕ್ಷಗಳು ಸೇರಿದಂತೆ ಒಟ್ಟಾರೆ ರೂ.26050.00 ಲಕ್ಷಗಳನ್ನು ಪಿಎಂ-ಆರ್‍ಕೆವಿವೈ-ಪಿಡಿಎಂಸಿ ಯೋಜನೆಯಡಿ  ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆಗೊಳಿಸಬೇಕಾಗಿರುತ್ತದೆ. ಸದರಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆಗೊಳಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

Post a Comment

0Comments

Post a Comment (0)