ಒಂದು ದಿನ ಕೈಲಾಸಪರ್ವತದಲ್ಲಿ ಶಿವ ಪಾರ್ವತಿಯರು ಭೂಲೋಕದ ಜನರ ಬಗ್ಗೆ ಮಾತನಾಡುತ್ತಿರಲು, ಪಾರ್ವತಿಯು ತನ್ನ ಮನಸ್ಸಿನಲ್ಲಿ ಮೂಡಿದ ಸಂಶಯವನ್ನು ನಿವಾರಣೆ ಪಡಿಸಿಕೊಳ್ಳುವ ಉದ್ದೇಶದಿಂದ ಮಹಾದೇವನಲ್ಲಿ, ಪ್ರಭೋ …! ಮನುಷ್ಯರಲ್ಲಿ ಕೆಲವರಿಗೆ ಆರೋಗ್ಯ ಭರಿತ ತಾರುಣ್ಯವಿದ್ದರೂ ತಿನ್ನಲು ಉಣ್ಣಲು ಗತಿಯಿಲ್ಲದೆ ದರಿದ್ರದಿಂದ ಕೂಡಿರುತ್ತಾರೆ, ಇನ್ನು ಕೆಲವರಿಗೆ ಮುಪ್ಪಿನಲ್ಲಿ ಬೇಕಾದಷ್ಟು ಸಂಪತ್ತು ಪ್ರಾಪ್ತಿಯಾಗಿದ್ದರು ಅನಾರೋಗ್ಯ ನಿಮಿತ್ತವಾಗಿ ಅದನ್ನು ಅನುಭವಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹಾಗೆ ಇನ್ನು ಕೆಲವರು ಉತ್ತಮ ಜ್ಞಾನಿಗಳು ಪಂಡಿತರು ಆಗಿದ್ದರು ಹುಟ್ಟು ದರಿದ್ರರಾಗಿರುತ್ತಾರೆ. ಕೆಲವರು ಆಗರ್ಭ ಶ್ರೀಮಂತರಾಗಿ ಮೆರೆಯುತ್ತಿದ್ದರು ನಿರಕ್ಷರರಾಗಿರುತ್ತಾರೆ. ವಿದ್ಯೆ ಬುದ್ದಿ ಸಂಪತ್ತನ್ನು ಮನುಷ್ಯರಿಗೆ ಕರುಣಿಸುವ ಸರ್ವಶಕ್ತನಾದ ಭಗವಂತನಿಗೆ ಯಾರುಯಾರಿಗೆ ಯಾವ ಸಂಪತ್ತನ್ನು ಯಾವ ಕಾಲದಲ್ಲಿ ಕೊಡಬೇಕೆಂಬ ತಿಳುವಳಿಕೆ ಇಲ್ಲವೇ ಎಂದು ಪ್ರಶ್ನಿಸಿದಳು.
ಇದೇರೀತಿ ಪೂರ್ವಜನ್ಮದಲ್ಲಿ, ವಿದ್ವಾಂಸನಾಗಿದ್ದರೂ ವಿದ್ಯಾ ದಾನವನ್ನು ಮಾಡದೇ ಕೇವಲ ಸಂಪತ್ತನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ನಿರಕ್ಷರನಾದ ಧನಿಕನಾಗಿ ಜನ್ಮವನ್ನು ತಾಳುವನು. ನಾವು ಈ ಜನ್ಮದಲ್ಲಿ ದಾನ ಕೊಟ್ಟದ್ದನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತೆ ಭಗವಂತನು ಅನುಗ್ರಹ ಮಾಡುತ್ತಾನೆ ಎಂದು ಪರಮೇಶ್ವರನು ಸತಿದೇವಿಯ ಸಂಶಯವನ್ನು ನಿವಾರಿಸುತ್ತಾನೆ.ಒಮ್ಮೆ ಸಂತ ಸಮರ್ಥದಾಸರು ರಾಮನಾಮವನ್ನು ಜಪಿಸುತ್ತಾ ,ಜೋಳಿಗೆ ಹಿಡಿದುಕೊಂಡು ಬರುತ್ತಿದ್ದರು.ಇದನ್ನು ಗಮನಿಸಿದ ಒಂದು ಮನೆಯ ಹೆಂಗಸು ದಾಸರು ಬಂದರೆ ಏನನ್ನಾದರೂ ಕೊಡಬೇಕಾದೀತೆಂದು ಅರಿತು ತನ್ನ ಮನೆಯ ಕದವನ್ನು ಧಡಾರನೆ ಮುಚ್ಚಿದಳು.ಇದನ್ನು ಕಂಡ ದಾಸರು ಅವಳ ಮನೆಯ ಮುಂದೆ ಬಂದು ಬಾಗಿಲು ತಟ್ಟಿ ಅವಳು ಬಾಗಿಲು ತೆರೆಯುವ ವರೆಗೆ ಸಹನೆಯಿಂದ ಕಾದು ಕುಳಿತರು.ಆ ಹೆಂಗಸು ಕೊನೆಗೆ ಸಂಕೋಚದಿಂದ ಬಾಗಿಲನ್ನು ತೆರೆದಳು.ಆಗ ದಾಸರು”ತಾಯೀ….ಮನೆಯ ಮುಂದಿನ ಮಣ್ಣನ್ನು ಒಂದು ಹಿಡಿಯಷ್ಟು ತೆಗೆದು ನನ್ನ ಜೋಳಿಗೆಗೆ ಹಾಕು” ಎಂದು ಹೇಳಿದರು.ಆಗ ಆ ಹೆಂಗಸು ಮನಸ್ಸಿನಲ್ಲೇ ಇವರು ಎಂಥ ದಾಸರಪ್ಪ ಎಂದು ಗೊಣಗಿಕೊಂಡು “ಅಕ್ಕಿಯಿರುವ ಜೋಳಿಗೆಗೆ ಮಣ್ಣನ್ನು ಹಾಕಿದರೆ ಅದನ್ನು ಆರಿಸಿಕೊಳ್ಳಲು ತೊಂದರೆಯಾಗದೆ?”ಎಂದು ಪ್ರಶ್ನಿಸಿದಳು.ಆಗ ದಾಸರು ನಗುತ್ತಾ “ತಾಯಿ…ನನಗೆ ತೊಂದರೆಯಾದರೂ ಪರವಾಗಿಲ್ಲ ,ನಿನ್ನ ಕೈಗಳಿಗೆ ಏನನ್ನಾದರೂ ಎತ್ತಿ ಕೊಡುವ ಸಂಸ್ಕಾರ ಬಂದು ಮುಂದಿನ ಜನ್ಮದಲ್ಲಿ ಅಕ್ಕಿಯನ್ನು ಹಾಕುವಂತಾಗಲಿ “ಎಂದು ಹಾರೈಸುತ್ತಾ ಮುಂದೆ ನಡೆದರು.ಕೈಗೆ ದಾನವೇ ಭೂಷಣ…! ಬಂಗಾರದ ಬಳೆಗಳಲ್ಲ….ಎಂಬುದು ಶ್ರೀಪಾದರಾಜರ ಅಭಿಮತ. “ದಾನ ನಮಗಾಗಿ ..ಪರರಿಗಾಗಿ” ಕೊಟ್ಟದ್ದು ನಮಗೆ ಬಚ್ಚಿಟ್ಟದ್ದು ಪರರಿಗೆ