ಬೀದರ್ ಪತ್ರಕರ್ತನ ನಿಧನಕ್ಕೆ ಕೆಯುಡಬ್ಲೂಜೆ KUWJ ಸಂತಾಪ

varthajala
0

 ಬೆಂಗಳೂರು: ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷರು, (Bidar - Journalist) ಹಿರಿಯ ಪತ್ರಕರ್ತರಾದ ನಾಗಶೆಟ್ಟಿ ಧರಂಪುರ (Nagashetty Dharampura) (56) ಅವರು ಹೃದಯಾಘಾತದಿಂದ ಬೀದರ್‌ನಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಮೂವರು ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. 

ಕೆಯುಡಬ್ಲೂಜೆ ಸಂತಾಪ: (KUWJ) ಸಂಘ ನಿಷ್ಠರಾಗಿದ್ದ ನಾಗಶೆಟ್ಟಿ ಧಮರಂಪುರ ಅವರು ಬೀದರ್ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಅವರು ಸಾವು ನೋವಿನ ಸಂಗತಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ತೀವ್ರ ಸಂತಾಪ ವ್ಯಕ್ತಪಡಿಸಿದೆ.  


Post a Comment

0Comments

Post a Comment (0)