ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ : ಪರಿಹಾರಕ್ಕೆ ಅಗತ್ಯ ಕ್ರಮ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

varthajala
0
ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ  ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಎಲೆ ಚುಕ್ಕಿ ಕೀಟ ಭಾದೆ ಎದುರಾಗಿದ್ದು, ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ಇಂದು ವಿಧನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್. ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ಅಡಿಕೆ ಬೆಳೆಯ ಎಲೆ ಚುಕ್ಕಿ ರೋಗ ನಿಯಂತ್ರಿಸಲು ತೋಟಗಾರಿಕೆ ಇಳಾಖೆಯಿಂದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
2025-26 ನೇ ಸಾಲಿನಲ್ಲಿ ಎಂಡಿ.ಎಚ್. ಮಾರ್ಗಸೂಚಿಯನ್ವಯ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ “ಸ್ಪೆಷಲ್ ಇನ್‍ವೆನ್‍ಷನ್ಸ್” ಕಾರ್ಯಕ್ರಮದಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗದ ನಿಯಂತ್ರಣ ಕಾರ್ಯಕ್ರಮದಡಿ ಸಮಗ್ರ ರೋಗ / ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರಿಗೆ ತಗಲುವ ರೂ 5000/- ಗಳಲ್ಲಿ ಶೇ.30 ರಂತೆ ಪ್ರತಿ ಹೆಕ್ಟೇರಿಗೆ ರೂ. 1500/- ದರದಲ್ಲಿ 2 ಹೆಕ್ಟೇರ್ ರವರೆಗೆ ರೂ. 3000/- ಗಳ ಸಹಾಯಧನ ನೀಡಲಾಗುತ್ತಿದೆ. ಈ ಬಾಬ್ತು ರೂ. 860.65 ಲಕ್ಷಗಳ ಅನುದಾನ ನಿಗದಿಯಾಗಿದೆ. ಈವರೆಗೂ 14115 ರೈತರಿಗೆ ರೂ. 452.61 ಲಕ್ಷಗಳ ಸಹಾಯಧನ ನೀಡಲಾಗಿರುತ್ತದೆ. ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಬೆಳೆವಿಮೆ ಯೋಜನೆಯಡಿ ಆಧಾರಿತ ಅಡಿಕೆ ಬೆಳೆಯು ಅಧಿಸೂಚಿತವಾಗಿದ್ದು, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮಾ ಪರಿಹಾರವನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ಹಾಗೂ ಕೊಳೆ ರೋಗಗಳ ಕ್ರಮಗಳ ಅಳವಡಿಕೆ (ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು), ಸಸ್ಯ ಸಂರಕ್ಷಣಾ ಕ್ರಮಗಳು ಹಾಗೂ ಪೋಷಕಾಂಶಗಳ ಸಮಗ್ರ ನಿರ್ವಹಣೆಗೆ ಸಹಾಯಧನಕ್ಕಾಗಿ ಒಟ್ಟಾರೆ ರೂ. 57776.33 ಲಕ್ಷಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಎಂಡಿ.ಎಚ್ ಮಾರ್ಗಸೂಚಿಯನ್ವಯ ಶೇಕಡ 30 ರಷ್ಟು ಸಹಾಯಧನದಂತೆ ಒಟ್ಟು ರೂ. 17332.90 ಲಕ್ಷಗಳನ್ನು (ಕೇಂದ್ರ ಪಾಲು ರೂ. 10399.74 ಲಕ್ಷಗಳು ಹಾಗೂ ರಾಜ್ಯ ಪಾಲು ರೂ.6933.14 ಲಕ್ಷಗಳು) ಕೋರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಕೈಪಿಡಿ, ಕರಪತ್ರಗಳು ಮತ್ತಿತರೆ ಸಮೂಹ ಮಾಧ್ಯಮಗಳ ಮೂಲಕ ಅಡಿಕೆ ತೋಟಗಳ ಪೆÇೀಷಕಾಂಶ ನಿರ್ವಹಣೆ, ಬಸಿ ಕಾಲುವೆಗಳನ್ನು ಮಾಡುವುದು, ಹಸಿರೆಲೆ ಗೊಬ್ಬರದ ಬಳಕೆ ಹಾಗೂ ರಸ ಗೊಬ್ಬರಗಳ ಪೂರೈಕೆಗಳ ಕುರಿತು ಕೈಪಿಡಿ, ಕರಪತ್ರಗಳು ಮತ್ತಿತರ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಹಾಗೂ ತರಬೇತಿ / ಕಾರ್ಯಾಗಾರಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

 

Post a Comment

0Comments

Post a Comment (0)