ಹುಬ್ಬಳ್ಳಿ / ಬೆಂಗಳೂರು : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ / ಚಾಲಕ (ಪಜಾ-ಹಿಂಬಾಕಿ) ಮತ್ತು ಚಾಲಕ-ಕಂ-ನಿರ್ವಾಹಕ (ಪಜಾ-ಹಿಂಬಾಕಿ) ಹುದ್ದೆಗಳಿಗೆ (1686 ಚಾಲಕ +55- ಚಾಲಕ (ಪಜಾ-ಹಿಂಬಾಕಿ) ಮತ್ತು 259-ಚಾಲಕ-ಕಂ-ನಿರ್ವಾಹಕ (ಪಜಾ-ಹಿಂಬಾಕಿ) ಒಟ್ಟು 2000 ಹುದ್ದೆಗಳಿಗೆ 2025 ರ ಡಿಸೆಂಬರ್ 24 ರಂದು ಪರಿಷ್ಕøತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಂಸ್ಥೆಯ ಕೇಂದ್ರ ಕಛೇರಿ, ಹುಬ್ಬಳ್ಳಿಯ ಸೂಚನಾ ಫಲಕದಲ್ಲಿ ಮತ್ತು ಸಂಸ್ಥೆಯ ವೆಬ್ ಸೈಟ್ www.nwkrtc.karnataka.gov.in ನಲ್ಲಿ ಪ್ರಕಟಿಸಲಾಗಿತ್ತು.
ಈ ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 2026 ರ ಜನವರಿ 02 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಆಯ್ಕೆಪಟ್ಟಿಯನ್ನು ಹಾಗೂ ಈ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿಗಳು ಪಡೆದ ಅಂಕಗಳು ಮತ್ತು ಹುಟ್ಟಿದ ದಿನಾಂಕದ ವಿವರಗಳನ್ನು ಸಂಸ್ಥೆಯ ಕೇಂದ್ರ ಕಛೇರಿ, ಹುಬ್ಬಳ್ಳಿಯ ಸೂಚನಾ ಫಲಕದಲ್ಲಿ ಮತ್ತು ಸಂಸ್ಥೆಯ ವೆಬ್ ಸೈಟ್ www.nwkrtc.karnataka.gov.in ನಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.