ಉಜ್ಜೈನ್ ನ ಸಂತರು ಮತ್ತು ಹಿಂದೂ ಸಂಘಟನೆಗಳು ಮಂಡಿಸಿರುವ ನಿಲುವನ್ನು ಬೆಂಬಲಿಸುತ್ತಾ, ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ ಅವರು, "ಹಿಂದೂ ತೀರ್ಥಕ್ಷೇತ್ರಗಳು ಕೇವಲ ಪ್ರವಾಸಿ ಕೇಂದ್ರಗಳಲ್ಲ, ಬದಲಾಗಿ ಹಿಂದೂಗಳ ಪವಿತ್ರ ಮತ್ತು ಜಾಗೃತ ಆಧ್ಯಾತ್ಮಿಕ ಕ್ಷೇತ್ರಗಳಾಗಿವೆ" ಎಂದು ಸ್ಪಷ್ಟಪಡಿಸಿದರು. ಯಾರಿಗೆ ಮೂರ್ತಿ ಪೂಜೆಯಲ್ಲಿ ನಂಬಿಕೆಯಿಲ್ಲವೋ, ಯಾರು ಹಿಂದೂ ಸಂಸ್ಕೃತಿಯನ್ನು ಗೌರವಿಸುವುದಿಲ್ಲವೋ ಮತ್ತು ಯಾರು ಗೋಮಾಂಸ ಭಕ್ಷಣೆ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯುತ್ತಾರೋ, ಅಂತಹವರಿಗೆ ದೇವಸ್ಥಾನದ ಪ್ರವೇಶ ಏಕೆ ಬೇಕು ? ಅವರ ಮೇಲೆ ಪ್ರವೇಶ ನಿಷೇಧವೇ ಹೇರಲ್ಪಡಬೇಕು ಎಂಬ ನಿಲುವನ್ನು ಮಂದಿರ ಮಹಾಸಂಘವು ಮಂಡಿಸಿದೆ."ದೇವಸ್ಥಾನಗಳ ಸಾತ್ತ್ವಿಕ ವಾತಾವರಣವನ್ನು ಕಾಪಾಡಲು ಮತ್ತು ಪವಿತ್ರತೆಗೆ ಧಕ್ಕೆ ಬರದಂತೆ ತಡೆಯಲು, ಅಹಿಂದೂಗಳ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದ ಪ್ರವೇಶವನ್ನು ತಕ್ಷಣವೇ ನಿಷೇಧಿಸುವುದು ಕಾಲದ ಅಗತ್ಯವಾಗಿದೆ. ಈ ಕುರಿತು ಗೋವಾದ ಫೋಂಡಾದಲ್ಲಿ ನಡೆದ ಮಂದಿರ ಮಹಾಸಂಘದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಛತ್ತೀಸ್ಗಢದ ವಿವಿಧ ದೇವಸ್ಥಾನಗಳ ವಿಶ್ವಸ್ತರು ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದಾರೆ," ಎಂದು ಮಂದಿರ ಮಹಾಸಂಘದ ರಾಜ್ಯ ಸಂಯೋಜಕ ಶ್ರೀ. ಮೋಹನ ಗೌಡ
ಉಜ್ಜೈನ್ ನ ಮಹಾಕಾಳೇಶ್ವರ ದೇವಾಲಯಕ್ಕೆ ಹಿಂದೂಯೇತರರ ಪ್ರವೇಶ ನಿಷೇಧ; ಕರ್ನಾಟಕದ ಎಲ್ಲ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲಿ ! - ಧಾರ್ಮಿಕ ದತ್ತಿ ಇಲಾಖೆಗೆ ಕರ್ನಾಟಕ ಮಂದಿರ ಮಹಾಸಂಘ ಆಗ್ರಹ
January 30, 2026
0