ವಿಧಾನ ಪರಿಷತ್ತಿನಲ್ಲಿ ಕಾಗದ ಪತ್ರಗಳ ಮಂಡನೆ

varthajala
0

 ಬೆಂಗಳೂರು ಭಾರತ ಸಂವಿಧಾನದ 131(2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ (ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ – ವಾಣಿಜ್ಯ) ವರದಿ (2025ರ ವರದಿ ಸಂಖ್ಯೆ 101)ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಎನ್.ಎಸ್. ಭೋಸರಾಜು ಅವರು ಇಂದು ವಿಧಾನ ಪರಿಷತ್ತಿನ ಅಧಿವೇಶನದ ವೇಳೆಯಲ್ಲಿ ಮಂಡಿಸಿದರು. 

ವರದಿಯ ಸಂಕ್ಷಿಪ್ತ ಮಾಹಿತಿ : ಕರ್ನಾಟಕ ಸರ್ಕಾರದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುμÁ್ಠನದ ಕುರಿತು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರವರ (ವರದಿ ಸಂಖ್ಯೆ 10 / 2025). ಜನವರಿ 2025 ರಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಭಾರತ ಸಂವಿಧಾನದ 151 (2) ನೇ ವಿಧಿಯ ಪ್ರಕಾರ ಲೆಕ್ಕಪರಿಶೋಧನಾ ವರದಿಗಳನ್ನು ಶಾಸಕಾಂಗಕ್ಕೆ ಸಲ್ಲಿಸಲಾಗುತ್ತದೆ.
ಕಾರ್ಯನಿರ್ವಹಣಾ ಸಾರಾಂಶ ಕಂಡಿಕೆ 2 ರಂತೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುμÁ್ಠನ ಕುರಿತು 2012-13ರಿಂದ 2022-23 ಅವಧಿಗೆ ಕಾರ್ಯ ನಿರ್ವಹಣಾ ಲೆಕ್ಕಪರಿಶೋಧನೆಯನ್ನು ಕೈಗೊಳ್ಳಲಾಯಿತು (1) ನೀರಿನ ಲಭ್ಯತೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲಾಯಿತೇ, ಆಯವ್ಯಯ ಮತ್ತು ಕಾಲಮಿತಿಗಳು ವಾಸ್ತವಿಕವಾಗಿದ್ದವೇ ಮತ್ತು ಕಾಮಗಾರಿಗಳ ಎಲ್ಲಾ ಘಟಕಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು; (2) ಯೋಜನೆಯ ವಿವಿಧ ಘಟಕಗಳನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಯಿತೇ ಮತ್ತು ಸಂಗ್ರಹಣೆ ಮತ್ತು ಕಾಲುವೆ ಜಾಲಕ್ಕಾಗಿ ಮೂಲಸೌಕರ್ಯಗಳ ಸೃಷ್ಟಿಯನ್ನು ಸಮನ್ವಯಗೊಳಿಸಲಾಯಿತೆ ಹಾಗೂ ಸಮಕಾಲಿಕವಾಗಿದೆಯೇ; (3) ಆಲೋಚಿಸಿದಂತೆ ಉದ್ದೇಶಿತ ಫಲಾನುಭವಿಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಸಾಧಿಸಲಾಯಿತೆ.

ವರದಿಯ ಪ್ರಮುಖ ಅಂಶಗಳ ಸಾರಾಂಶ : 
1. ಯೋಜನೆಯ ಯೋಜನೆ
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ (ಯೋಜನೆ) ವಿಸ್ತøತ ಯೋಜನಾ ವರದಿಯನ್ನು (ಡಿಪಿಆರ್) ಎರಡು ಬಾರಿ ಪರಿಷ್ಕರಿಸಲಾಯಿತು. ಅಂದರೆ ಮೂಲತಃ ಅನುಮೋದಿಸಲಾದ (ಜುಲೈ 2012) ರೂ. 8,323.50 ಕೋಟಿಗಳಿಂದ 2014ರ ಫೆಬ್ರವರಿಯಲ್ಲಿ ರೂ. 12.912.36 ಕೋಟಿಗಳಿಗೆ ಮತ್ತು 2023ರ ಜನವರಿಯಲ್ಲಿ ಮತ್ತೆ ರೂ. 23,251.66 ಕೋಟಿಗಳಿಗೆ ಪರಿಷ್ಕರಿಸಲಾಯಿತು. ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿ ಮಾರ್ಚ್ 2014ರಿಂದ ವಿವಿಧ ಪ್ಯಾಕೇಜ್‍ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು. ಆದಾಗ್ಯೂ, ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿದ್ದವು ಮತ್ತು ಪೂರ್ಣಗೊಳ್ಳಲು ಮತ್ತು ಉದ್ದೇಶಿತ ಪ್ರಯೋಜನದ ವಿತರಣೆಗೆ ಇನ್ನೂ ಕಾಲಾವಕಾಶ ಬೇಕಾಗಿರುತ್ತದೆ. ಆಶ್ಚರ್ಯಕರವಾಗಿ, ಯಾವುದೇ ಡಿ.ಪಿ.ಆರ್.ಗಳು ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿತ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ವಿಜೆಎನ್‍ಎಲ್ ನಿರ್ದೇಶಕರ ಮಂಡಳಿಯು ಯೋಜನೆಯನ್ನು ಪೂರ್ಣಗೊಳಿಸಲು 01 ನವೆಂಬರ್ 2026 ಎಂದು ನಿಗದಿಪಡಿಸಲು ನಿರ್ಧರಿಸಿತು (ಅಕ್ಟೋಬರ್ 2023)
ಯೋಜನೆಗೆ ಲಭ್ಯವಿರುವ ನೀರಿನ ಇಳುವರಿಯನ್ನು ಅಂದಾಜು ಮಾಡಲು ಅಳವಡಿಸಿಕೊಳ್ಳಲಾದ ಖಾಸಗಿ ಮಾಪನ ಕೇಂದ್ರಗಳಿಂದ ಪಡೆದ ಮಳೆಯ ದತ್ತಾಂಶವು ಜಲಾನಯನ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಸರ್ಕಾರಿ ಮಾಪನ ಕೇಂದ್ರಗಳ ಲಭ್ಯವಿರುವ ಮಳೆ ದತ್ತಾಂಶಕ್ಕೆ ಹೋಲಿಸಿದರೆ ಹೆಚ್ಚಿನ ಮಟ್ಟದಲ್ಲಿತ್ತು ಎಂಬುದನ್ನು ಗಮನಿಸಲಾಯಿತು. 2018 ರಿಂದ 2023ರವರೆಗೆ ಐದು ವರ್ಷಗಳ ಕಾಲ ಎತ್ತಿನಹೊಳೆ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಎಂಟು ವೀಯರ್‍ಗಳ ವಾಸ್ತವಿಕ ದಾಖಲಾದ ಹರಿವಿನ ದತ್ತಾಂಶವನ್ನು ಹೋಲಿಕೆ ಮಾಡಿದಾಗ, ವೀಯರ್‍ಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣವು ಡಿಪಿಆರ್‍ಗಳಲ್ಲಿ ಪರಿಗಣಿಸಲಾದ ಅಂದಾಜು 32.15 ಟಿಎಮ್‍ಸಿಗೆ ಪ್ರತಿಯಾಗಿ 7.20 ಟಿಎಮ್‍ಸಿಯಿಂದ 24.70 ಟಿಎಮ್‍ಸಿ ವ್ಯಾಪ್ತಿಯಲ್ಲಿದ್ದಿತು ಎಂಬುದನ್ನು ತಿಳಿಯಪಡಿಸಿತು.
ಬೇಸಿಗೆಯ ತಿಂಗಳುಗಳಲ್ಲಿ ನಿರಂತರ ನೀರು ಸರಬರಾಜು ಮಾಡಲು ಯೋಜನೆಯ ಅತ್ಯಗತ್ಯ ಅಂಶವಾಗಿದ್ದ ಸಮತೋಲನ ಜಲಾಶಯದ ಸ್ಥಳವನ್ನು ಎರಡು ಬಾರಿ ಬದಲಾಯಿಸಿರುವುದನ್ನು ಮತ್ತು ಅದರ ಸಾಮಥ್ರ್ಯವನ್ನು ಆರಂಭದಲ್ಲಿ ಪ್ರಸ್ತಾಪಿಸಲಾದ ಹತ್ತು ಟಿ.ಎಮ್.ಸಿ ಯಿಂದ ಎರಡು ಟಿ.ಎಮ್.ಸಿ.ಗೆ ಗಣನೀಯವಾಗಿ ಕಡಿಮೆ ಮಾಡಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಇದಕ್ಕೆ ಮಳೆಗಾಲದ ತಿಂಗಳುಗಳಲ್ಲಿ ಹೆಚ್ಚಿನ ನೀರನ್ನು ಪಂಪ್ ಮಾಡುವ ಅಗತ್ಯವಿರುತ್ತದೆ ಮತ್ತು ತತ್ಪರಿಣಾಮವಾಗಿ ವಿನ್ಯಾಸ ಬದಲಾವಣೆಗಳು ರೂ. 621.45 ಕೋಟಿಗಳ ಹೆಚ್ಚುವರಿ ವೆಚ್ಚದಲ್ಲಿ ಪರಿಣಮಿಸಿತು.
2. ಹಣಕಾಸು ನಿರ್ವಹಣೆ: 2018-19 ರಿಂದ 2022-23ರ ಅವಧಿಯಲ್ಲಿ ಯೋಜನೆಗೆ ಆಯವ್ಯಯ ಅವಕಾಶದಲ್ಲಿ ಕೇವಲ ಶೇಕಡಾ 25ರಿಂದ 54 ರಷ್ಟನ್ನು ಮಾತ್ರ ಸರ್ಕಾರವು ಒದಗಿಸಿದ್ದರಿಂದ ಈ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹೊಸ ಸಾಲಗಳನ್ನು ಪಡೆಯಲು ವಿಜೆಎನ್‍ಎಲ್ ಮಾಡಿದ ಕೋರಿಕೆಯು (ಜೂನ್ 2023) ಸರ್ಕಾರದ ಅನುಮೋದನೆಗೆ ಕಾಯ್ದಿರಿಸಲಾಗಿದೆ (ಮಾರ್ಚ್ 2024), ತತ್ಪರಿಣಾಮವಾಗಿ, ಮಾರ್ಚ್ 2024 ರಲ್ಲಿದ್ದಂತೆ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ರೂ. 7,954.63 ಕೋಟಿಗಳ ಬಗ್ಗೆ ಆರ್ಥಿಕ ಆನಿಶ್ಚಿತತೆಯನ್ನು ವಿಜೆಎನ್‍ಎಲ್ ಎದುರಿಸುತ್ತಿದೆ.
3. ಯೋಜನೆಯ ಅನುμÁ್ಠನ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಲಿಫ್ಟ್ ಮಾಡಿದ ನೀರನ್ನು ಸಾಗಿಸಲು ಹಂತ-1ರಲ್ಲಿ ಲಿಫ್ಟಿಂಗ್ ಘಟಕಗಳು ಮತ್ತು ಎಲೆಕ್ಟೋ-ಮೆಕ್ಯಾನಿಕಲ್ ಕಾಮಗಾರಿಗಳು ಮತ್ತು ಹಂತ-2ರಲ್ಲಿ ಗುರುತ್ವಾಕರ್ಷಣೆ/ಫೀಡರ್ ಕಾಲುವೆ ಕಾಮಗಾರಿಗಳನ್ನು ಒಳಗೊಂಡ ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಯಿತು. ಮಾರ್ಚ್ 2014ರಲ್ಲಿ ವಹಿಸಲಾದ ಹಂತ-1ರಲ್ಲಿನ ಎಂಎಸ್ ರೈಸಿಂಗ್ ಮೇನ್ (ಪೈಪ್ ಲೈನ್) ನಿರ್ಮಾಣ ಸೇರಿದಂತೆ ಸಿವಿಲ್ ಕಾಮಗಾರಿಗಳು ಮಾರ್ಚ್ 2019 ರಲ್ಲಿದ್ದಂತೆ ಪೂರ್ಣಗೊಂಡಿದ್ದವು. ಆದರೆ, ಹಂತ-2ರ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ವಿಜೆಎನ್‍ಎಲ್ ನ ಕಾರ್ಯನಿರ್ವಹಣಾ ವಿಭಾಗಗಳು ಒಂದು ವರ್ಷಕ್ಕೂ ಹೆಚ್ಚು ವಿಳಂಬದ ನಂತರ ಭೂಸ್ವಾಧೀನಕ್ಕಾಗಿ (ಫೆಬ್ರವರಿ 2015) ಪ್ರಸ್ತಾವನೆಗಳನ್ನು ಸಲ್ಲಿಸಲು ಪ್ರಾರಂಭಿಸಿದವು ಮತ್ತು ಡಿಪಿಆರ್-2 ಅನುಮೋದನೆಯ (ಫೆಬ್ರವರಿ 2014) ಮತ್ತು ಹಂತ-1ರ ಕಾಮಗಾರಿಗಳ ಪ್ರಾರಂಭದಿಂದ (ಮಾರ್ಚ್ 2014) ಎರಡು ವರ್ಷಗಳ ನಂತರ ಸಾಮಾಜಿಕ ಪರಿಣಾಮ ಮೌಲ್ಯಮಾಪನ (ಎಸ್‍ಐಎ) ಕಾಮಗಾರಿಗಳನ್ನು ಪ್ರಾರಂಭಿಸಲಾಯಿತು (ಜುಲೈ 2016). ಇದು ಡಿಸೆಂಬರ್ 2017ರ ನಂತರ ವಹಿಸಲಾದ ಎರಡನೇ ಹಂತದ ಕಾಮಗಾರಿಗಳಿಗಿನ ಭೂಸ್ವಾಧೀನ ಪ್ರಕ್ರಿಯೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿತು ಮತ್ತು ಕಾಮಗಾರಿಗಳು ಪ್ರಗತಿಯಲ್ಲಿದವು (ಮಾರ್ಚ್ 2024), ಹಂತ-1 ಮತ್ತು ಹಂತ-2ರ ಕಾಮಗಾರಿಗಳ ನಡುವೆ ಸಮನ್ವಯದ ಅನುಪಸ್ಥಿತಿಯು ಅವಿಚ್ಛಿನ್ನ ಕಾರ್ಯಗತಗೊಳಿಸುವಿಕೆಯಲ್ಲಿ ಪರಿಣಮಿಸಿ ತತ್ಪರಿಣಾಮವಾಗಿ ಬಿಡಿಬಿಡಿಯಾಗಿ ಮೂಲಸೌಕರ್ಯಗಳ ಸೃಷ್ಟಿಯಾಯಿತು. ಹಂತ-1ರಡಿಯಲ್ಲಿ ರಚಿಸಲಾದ ಸ್ವತ್ತುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ವೆಚ್ಚ ಮಾಡಿದ ರೂ. 2.965.77 ಕೋಟಿಗಳನ್ನು ಉಪಯುಕ್ತಗೊಳಿಸಲಾಗಲಿಲ್ಲ.
ಪಂಪ್‍ಗಳು/ಮೋಟಾರ್‍ಗಳಂತಹ ಎಲೆಕ್ಟ್ರೋ-ಮೆಕ್ಯಾನಿಕಲ್ ಉಪಕರಣಗಳನ್ನು ಪರೀಕ್ಷಿಸಲು/ನಿಯೋಜಿಸಲು ಸಾಧ್ಯವಾಗಲಿಲ್ಲ ಮತ್ತು ಅವುಗಳ ಉಪಯುಕ್ತ ಜೀವಿತಾವಧಿಯ ಗಮನಾರ್ಹ ಭಾಗವನ್ನು ಬಳಸದೆ ನಿಷ್ಕ್ರಿಯವಾಗಿ ಇರಿಸಲಾಯಿತು.
4. ಗುತ್ತಿಗೆ ನಿರ್ವಹಣೆ: ಯೋಜನೆಯ ಗುತ್ತಿಗೆ ನಿರ್ವಹಣೆಯಲ್ಲಿ, ಪ್ರಮಾಣಿತ ಟೆಂಡರ್ ದಾಖಲೆಯನ್ನು ಅಳವಡಿಸಿಕೊಳ್ಳದಿರುವುದು, ಗುತ್ತಿಗೆದಾರರ ಬಿಡ್ ಸಾಮಥ್ರ್ಯವನ್ನು ಮೌಲ್ಯಮಾಪನ ಮಾಡದಿರುವುದು ಮತ್ತು ರೂ. 87.05 ಕೋಟಿಗಳಿಂದ ರೂ.1,135.03 ಕೋಟಿಗಳ ವ್ಯಾಪ್ತಿಯ ಹೆಚ್ಚಿನ ಮೌಲ್ಯದ ಗುತ್ತಿಗೆಗಳಿಗೆ ಸಾಕಷ್ಟು ಬಿಡ್ಡಿಂಗ್ ಸಮಯವಿಲ್ಲದಿರುವುದು ಮುಂತಾದ ಟೆಂಡರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಲೆಕ್ಕಪರಿಶೋಧನೆಯು ಗಮನಿಸಿತು.
ಆರ್ಥಿಕ ಸಾಮಥ್ರ್ಯ, ಬಿಡ್ ಸಾಮಥ್ರ್ಯ ಮತ್ತು ಕೆಲಸದ ಅನುಭವವನ್ನು ಮೌಲ್ಯಮಾಪನ ಮಾಡದೆಯೇ ಶೇಕಡಾ ಎಂಬತ್ತರಷ್ಟು ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಇದು ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿರುವ ಅಪಾಯವನ್ನು ಒಡ್ಡಿತು. ಇದಲ್ಲದೆ, ಶೇಕಡ ಅರವತ್ತೇಳರಷ್ಟು ಕಾಮಗಾರಿಗಳನ್ನು (ರೂ. 14.805.80 ಕೋಟಿ) ಕೇವಲ ಏಳು ಗುತ್ತಿಗೆದಾರರಿಗೆ ನೀಡಲಾಯಿತು ಮತ್ತು ಒಬ್ಬ ಗುತ್ತಿಗೆದಾರನಿಗೆ ರೂ. 5,216.58 ಕೋಟಿ ಮೊತ್ತದ 11 ಗುತ್ತಿಗೆಗಳನ್ನು ನೀಡಲಾಗಿದೆ. ವಿಜೆಎನ್‍ಎಲ್ ಇಎಂಡಿ ಮುಟ್ಟುಗೋಲು ಹಾಕಿಕೊಳ್ಳಲು ವಿಫಲವಾದದ್ದು ಗುತ್ತಿಗೆದಾರರಿಗೆ ನೀಡಿದ ಅನುಚಿತ ಲಾಭವಾಗಿದೆ. 
ಪೈಪ್ ಸಾಮಗ್ರಿಗಳ ಹೆಚ್ಚುವರಿ ಪೂರೈಕೆಯನ್ನು ವಸೂಲಿ ಮಾಡುವ ನಿಭಂದನೆ ಇಲ್ಲದಿರುವುದು. ಟರ್ನ್-ಕೀ ಒಪ್ಪಂದದ ಭಾಗವಾಗಿರುವ ಕೆಲಸಗಳಿಗೆ ಹೆಚ್ಚುವರಿ ಪಾವತಿ, ಧಾರಣ ಹಣ/ಕಾರ್ಯಕ್ಷಮತೆಯ ಭದ್ರತೆಯನ್ನು ಅಕಾಲಿಕವಾಗಿ ಬಿಡುಗಡೆ ಮಾಡುವುದು, ಪೈಪ್‍ಗಳ ಪೂರೈಕೆಗಾಗಿ ಅನಿಯಮಿತ ಮುಂಗಡ ಪಾವತಿಗಳು ಮತ್ತು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅನುμÁ್ಠನದಿಂದಾಗಿ ಗುತ್ತಿಗೆದಾರರಿಗೆ ದೊರೆತ ಪ್ರಯೋಜನಗಳನ್ನು ವಸೂಲಿ ಮಾಡದಿರುವುದು ಮುಂತಾದ ಗುತ್ತಿಗೆದಾರರಿಗೆ ಅನುಚಿತ ಅನುಕೂಲಗಳನ್ನು ಮಾಡಿರುವ ನಿದರ್ಶನಗಳನ್ನು ಲೆಕ್ಕಪರಿಶೋಧನೆ ಗಮನಿಸಿದೆ. 
5. ಮೇಲ್ವಿಚಾರಣೆ: ಯೋಜನೆಯ ಸಕಾಲಿಕ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು. ಗುತ್ತಿಗೆಯ ವಿವಿಧ ಹಂತಗಳಲ್ಲಿ ತಮ್ಮ ಅಧಿಕಾರಿಗಳಿಂದ ನಿರ್ದಿಷ್ಟ ಕಾಲಮಿತಿ/ಪರಿಶೀಲನಾ ವೇಳಾಪಟ್ಟಿ ಮತ್ತು ವರದಿ ಮಾಡುವಿಕೆಯನ್ನು ನಿಗದಿಪಡಿಸುವ ಮೂಲಕ ಯೋಜನೆಗಾಗಿ ಯಾವುದೇ ಮೇಲ್ವಿಚಾರಣಾ ವ್ಯವಸ್ಥೆ/ನೀತಿಯನ್ನು ಸರ್ಕಾರ/ವಿಜೆಎನ್‍ಎಲ್ ನಿಗದಿಪಡಿಸಿರಲಿಲ್ಲ. ಪರಿಣಾಮಕಾರಿ ಮೇಲ್ವಿಚಾರಣಾ ವ್ಯವಸ್ಥೆ ಇಲ್ಲದ ಕಾರಣ, ಯೋಜನೆಯ ಅನುμÁ್ಟನದಲ್ಲಿ ಎದುರಾದ ಆಡಚಣೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.
ಸರ್ಕಾರವು (ಫೆಬ್ರವರಿ 2005) ಮೂರನೇ ವ್ಯಕ್ತಿಯಿಂದ ಕಾಮಗಾರಿಗಳ ತಪಾಸಣೆ ನಡೆಸಲು ನಿರ್ದೇಶಿಸಿದ್ದರೂ, ಹಂತ-1 ಕಾಮಗಾರಿಗಳಲ್ಲಿನ ಐದು ಪ್ಯಾಕೇಜ್‍ಗಳನ್ನು ನೀಡಿದ ದಿನಾಂಕದಿಂದ ನಾಲ್ಕು ವರ್ಷಗಳ ವಿಳಂಬದ ನಂತರ (ಮಾರ್ಚ್ 2018) ಮೂರನೇ ವ್ಯಕ್ತಿಯ ಪರಿಶೀಲನೆಗಾಗಿ ಕಾಮಗಾರಿಯ ಆದೇಶವನ್ನು ನೀಡಲಾಯಿತು. ಆ ಹೊತ್ತಿಗೆ, ಎಂಎಸ್ ರೈಸಿಂಗ್ ಮುಖ್ಯ ಪೈಪ್‍ಗಳನ್ನು ಹಾಕುವ ಕೆಲಸವನ್ನು ಒಳಗೊಂಡಿರುವ ಭೌತಿಕ ಪ್ರಗತಿಯ ಸುಮಾರು 64 ಪ್ರತಿಶತವನ್ನು ಸಾಧಿಸಲಾಗಿತ್ತು. ಹೀಗಾಗಿ, ಈ ಹಾಕಿದ ಪೈಪ್‍ಗಳ ಮೇಲೆ ಅಲ್ಲಾಸಾನಿಕ್ ಪರೀಕ್ಷೆಗಳು, ಡೈ ಪೆನೆಟ್ರೇಶನ್ ಪರೀಕ್ಷೆ ಮತ್ತು ರೇಡಿಯಾಗ್ರಫಿ ಪರೀಕ್ಷೆಯಂತಹ ಪರೀಕ್ಷೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಸಮತೋಲನ ಜಲಾಶಯದ ಸ್ಥಳ ಮತ್ತು ಸಾಮಥ್ರ್ಯವನ್ನು ಅಂತಿಮಗೊಳಿಸುವಲ್ಲಿ ಅತಿಯಾದ ವಿಳಂಬ, ಹಣಕಾಸಿನ ಮೂಲದ ಬಗ್ಗೆ ಅನಿಶ್ಚಿತತೆ, ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ದೀರ್ಘ ವಿಳಂಬ ಮತ್ತು ಅನುμÁ್ಠನದ ಸಮಯದಲ್ಲಿ ವಿವಿಧ ಆಡಚಣೆಗಳನ್ನು ಸಕಾಲಿಕವಾಗಿ ಪರಿಹರಿಸದಿರುವುದು ಮುಂತಾದ ನ್ಯೂನತೆಗಳಿಂದ ಯೋಜನೆಯು ಬಳಲುತ್ತಿತ್ತು. ಇದರ ಪರಿಣಾಮವಾಗಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಲ್ಲಿ ರೂ. 15.297 ಕೋಟಿಗಳಷ್ಟು ದೊಡ್ಡ ವೆಚ್ಚದ ಹೊರತಾಗಿಯೂ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವು ಈಡೇರಲಿಲ್ಲ.

Post a Comment

0Comments

Post a Comment (0)