ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಬೆಂಗಳೂರು ಭೇಟಿ ಬಗ್ಗೆ “ದಿ ಹಿಂದು” ಆಂಗ್ಲ ಪತ್ರಿಕೆಯಲ್ಲಿ ವರದಿ ಪ್ರಕಟ: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸ್ಪಷ್ಟನೆ

varthajala
0

 ಬೆಂಗಳೂರು : ಜರ್ಮನ್ ದೇಶದ ಗೌರವಾನ್ವಿತ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರು 2026 ನೇ ಜನವರಿ 13 ರಂದು ಬೆಂಗಳೂರಿಗೆ ಸೌಜನ್ಯ ಭೇಟಿ ಸಮಯದಲ್ಲಿ  ಮಾನ್ಯ ಮುಖ್ಯಮಂತ್ರಿಗಳು ಭೇಟಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅವರಿಂದ 2026 ನೇ ಜನವರಿ 05 ರಂದು ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಯವರನ್ನು ಹಾಗೂ ನವದೆಹಲಿಯ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿನ ರಾಯಬಾರಿ ಕಚೇರಿ ಅಧಿಕಾರಿಗಳನ್ನು ಕೋರಲಾಗಿತ್ತು.ಸರ್ಕಾರದ ಕಾರ್ಯದರ್ಶಿಗಳು 2026 ರ ಜನವರಿ 05 ರಂದು ಬರೆದಿರುವ ಪತ್ರಕ್ಕೆ ನವದೆಹಲಿಯ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿನ ರಾಯಭಾರಿ ಕಚೇರಿ ಅಧಿಕಾರಿಗಳು 2026 ರ ಜನವರಿ 08 ರ ಪತ್ರದಲ್ಲಿ ಗೌರವಾನ್ವಿತ ಚಾನ್ಸಲರ್ ಅವರು ಬೆಂಗಳೂರು ಭೇಟಿಯು ಕೇವಲ 3.5 ಗಂಟೆಗಳು ಮಾತ್ರ ಆಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳ ಭೇಟಿಗೆ ಸಮಯಾವಕಾಶದ ಕೊರತೆಯಾಗಿರುತ್ತದೆ ತಿಳಿಸಿರುತ್ತಾರೆ.ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಮ್ಮ ಇ-ಮೇಲ್ ಸಂದೇಶದಲ್ಲಿ  The Distinguished guests may be recieved and seen off by minister (Protocol) (name nominated by the chief minister) ಎಂದು ನಿರ್ದೇಶಿಸಿರುತ್ತದೆ.ಅದರಂತೆ, ಮಾನ್ಯ ಮುಖ್ಯಮಂತ್ರಿ ಅವರು ಭಾರೀ ಮತ್ತು ಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಮತ್ತು ಅವರ ನಿಯೋಗವನ್ನು ಬರಮಾಡಿಕೊಳ್ಳಲು ಹಾಗೂ ಬೀಳ್ಕೊಡಲು ಉಪಸ್ಥಿತರಿರಬೇಕೆಂದು ಸಚಿವರನ್ನು ನೇಮಿಸಿ ಆದೇಶಿಸಿರುವಂತೆ  ಮಾನ್ಯ ಸಚಿವರು, ಗೌರವಾನ್ವಿತ ಚಾನ್ಸಲರ್ ಅವರನ್ನು  ಮುಖ್ಯಮಂತ್ರಿಗಳ ಪರವಾಗಿ ಬರಮಾಡಿಕೊಂಡು ಹಾಗೂ ಬೀಳ್ಕೊಟ್ಟಿರುತ್ತಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Post a Comment

0Comments

Post a Comment (0)