ಬೆಂಗಳೂರು : ಜಿಲ್ಲಾಧಿಕಾರಿಗಳು, ಬೆಳಗಾವಿ ಇವರ ಆದೇಶ 10-01-2026ರಂತೆ ಬೇಸಿಗೆ ಕಾಲ ಮುಕ್ತಾಯವಾಗುವವರೆಗೆ ಹಿಪ್ಪರಗಿ ಬ್ಯಾರೇಜ್‍ನಲ್ಲಿ ಲಭ್ಯವಾಗುವ ನೀರಿನ ಸಂಗ್ರಹಣೆಯ ಪ್ರಮಾಣದಲ್ಲಿ ಸಮರ್ಪಕ ಹಾಗೂ ನಿಯಂತ್ರಿತ ಬಳಕೆ ಸಾಧಿಸಿ, ನೀರು ಪೆÇೀಲಾಗುವುದನ್ನು ತಡೆಗಟ್ಟಲು ಕ್ರಮ ವಹಿಸಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆ ಸಂರಕ್ಷಿಸಲು ನೀರನ್ನು ಪೂರೈಸಲಾಗುವುದು. ಹಿಪ್ಪರಗಿ ಬ್ಯಾರೇಜಿನಲ್ಲಿ ಪ್ರಸ್ತುತ ಒಳ ಹರಿವಯ ಸುಮಾರು 450 ಕ್ಯೂಸೆಕ್ಸ್ ನಷ್ಟಿದ್ದು, ಇದರಿಂದ ಸಹ ಬ್ಯಾರೇಜಿನಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹಣೆ ಸಾಧ್ಯವಾಗಲಿದೆ ಎಂದು ಕಂದಾಯ ಸಚಿವರ ಕೃμÉ್ಣೀ ಬೈರೇಗೌಡ ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಇವರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ ನ ಗೇಟ್ ನಂ.22ರ ಸರ್ವಿಸ್ ಗೇಟ್ ನ ಮೇಲಿನಿಂದ 2ನೇ ಎಲಿಮೆಂಟ್ ನೀರಿನ ಒತ್ತಡಕ್ಕೆ ಕಿತ್ತುಹೋಗಿರುತ್ತದೆ. ಹಾನಿಯಾದ ಗೇಟ್ ಸಂಖ್ಯೆ 22ರಲ್ಲಿ ಹೊಸದಾಗಿ ಗೇಟ್ ಅಳವಡಿಸಲು ದಿ: 12-01-2026ರಂದು ರೂ.140.00ಲಕ್ಷಗಳ ಅನುಮೋದನೆಯನ್ನು ನೀಡಲಾಗಿದ್ದು ದಿನಾಂಕ: 17-01-2026ರಂದು ಸದರಿ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇನ್ನುಳಿದ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃಧ್ಧಿ ಯೋಜನೆಯಲ್ಲಿ ಹಂತ-1 ಮತ್ತು ಹಂತ 2 ಮತ್ತು 3ರ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಮಹಾರಾಷ್ಟ್ರದ ವಾರಣಾ ಅಥವಾ ಕೊಯ್ನಾ ಜಲಾಶಯಗಳಿಂದ ಕೃμÁ್ಣ ನದಿ ಪಾತ್ರದಲ್ಲಿ ಹಿಪ್ಪರಗಿ ಬ್ಯಾರೇಜಿಗೆ ಅವಶ್ಯವಿರುವ ನೀರನ್ನು ಪಡೆಯಲು ಸಹ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಿದರು.Post a Comment
0Comments