ನಗರದಾದ್ಯಂತ ಉಸಿರಾಟದ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಡಾ. ಶ್ರೀಧರ್ ಶ್ರೀನಿವಾಸನ್. ಡಿಸೆಂಬರ್ ಕ್ರಿಸ್‌ಮಸ್ ರಜೆ ಮತ್ತು ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ, ಹೊರಗಿನ ಪ್ರವಾಸ ಮತ್ತು ಸಾರ್ವಜನಿಕ ಸಭೆಗಳಲ್ಲಿ ಗುಂಪು ಸೇರುವುದು ಈ ಸೋಂಕು ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಪೈಕಿ ದಿನದಲ್ಲಿ ಸುಮಾರು ಐದರಿಂದ ಆರು ಪ್ರಕರಣಗಳು ಮೂಗು ಕಟ್ಟಿಕೊಂಡಿರುವುದು, ಒಣ ಕೆಮ್ಮು, ಗಂಟಲು ನೋವು, ಜ್ವರ ಮತ್ತು ಕಿವಿ ನೋವು ಮತ್ತು ಮುಂತಾದ ಲಕ್ಷಣಗಳು ಸೇರಿರುತ್ತವೆ. ಸೋಂಕಿತರು ಆರಂಭದಲ್ಲಿ ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸುತ್ತಿದ್ದು, ಬಳಿಕ ಎರಡರಿಂದ ಮೂರು ವಾರಗಳ ನಂತರ ಒಣ ಕೆಮ್ಮಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜ್ವರ ಅಥವಾ ಕೆಮ್ಮು 72 ಗಂಟೆಗಳ ಒಳಗೆ ಸುಧಾರಣೆ ಕಂಡುಬರದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಆರಂಭಿಕ ಹಂತದ ಚಿಕಿತ್ಸೆಯು ತುಂಬಾ ಮುಖ್ಯವಾಗಿದ್ದು, ಒಂದು ವೇಳೆ ನಿರ್ಲಕ್ಷಿಸಿದರೆ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞ ಡಾ. ಶ್ರೀಧರ್ ಶ್ರೀನಿವಾಸನ್.ಈ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಹಾಗೂ ಮೆಟ್ರೋಗಳಲ್ಲಿ ಸಂಚರಿಸುವ ವೇಳೆ ಮಾಸ್ಕ್ ಧರಿಸುವುದು ಒಳಿತು. ಆರೋಗ್ಯ ಸಮಸ್ಯೆ ಉಳ್ಳವರು, ಹಿರಿಯ ನಾಗರಿಕರು ಮತ್ತು ಮಕ್ಕಳು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು, ಕಾಳಜಿವಹಿಸುವ ಅಗತ್ಯವಿದೆ ಎನ್ನುತ್ತಾರೆ ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಡಾ. ಶ್ರೀಧರ್ ಶ್ರೀನಿವಾಸನ್.ಈ ವರದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೆ
Post a Comment
0Comments